ವಾಟ್ಸ್ಆ್ಯಪ್ ಇದೀಗ ಚಾಟ್ ಲಾಕ್ (Chat Lock) ಎಂಬ ಹೊಸ ಆಯ್ಕೆಯೊಂದನ್ನು ನೀಡಿದೆ. ಕೆಲ ವಾಟ್ಸ್ಆ್ಯಪ್ ಬೀಟಾ ಪರೀಕ್ಷಕರು ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ (Hide) ಮಾಡಬಹುದು.
ವಾಟ್ಸ್ಆ್ಯಪ್ ಅನ್ನು ಇಂದು ಬಳಕೆ ಮಾಡುವವರ ಸಂಖ್ಯೆ ಭಾರತದಲ್ಲೇ 550 ಮಿಲಿಯನ್ ದಾಟಿದೆ. ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಅಪ್ಡೇಟ್ ಬಿಡುಗಡೆ ಮಾಡುತ್ತಿರುವ ವಾಟ್ಸ್ಆ್ಯಪ್ನಲ್ಲಿ (WhatsApp) ಸಾಲು ಸಾಲು ಫೀಚರ್ಗಳು ಪರೀಕ್ಷಾ ಹಂತದಲ್ಲಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ನೂತನ ಆಯ್ಕೆಗಳನ್ನು ಬಿಡುಗಡೆ ಮಾಡುವ ವಾಟ್ಸ್ಆ್ಯಪ್ನಲ್ಲಿ ಮುಂದಿನ ದಿನಗಳಲ್ಲಿ ಊಹಿಸಲಾಗದ ಫೀಚರ್ಗಳು ಬರಲಿದೆ. ಬಳಕೆದಾರರ ಪ್ರೈವಸಿ ವಿಚಾರದಲ್ಲಿ ಯಾವಾಗಲೂ ಮುಂದಿರುವ ವಾಟ್ಸ್ಆ್ಯಪ್ ಇದೀಗ ಚಾಟ್ ಲಾಕ್ (Chat Lock) ಎಂಬ ಹೊಸ ಆಯ್ಕೆಯೊಂದನ್ನು ನೀಡಿದೆ. ಕೆಲ ವಾಟ್ಸ್ಆ್ಯಪ್ ಬೀಟಾ ಪರೀಕ್ಷಕರು ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ (Hide) ಮಾಡಬಹುದು.
ಹೆಚ್ಚುವರಿ ಗೌಪ್ಯತೆ ಮತ್ತು ಭದ್ರತೆಯನ್ನು ಮೆಟಾ ಮಾಲೀಕತ್ವದ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ವಾಟ್ಸ್ಆ್ಯಪ್ನಲ್ಲಿ ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತದೆ. ಹೀಗಿದ್ದಾಗ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ಆಯ್ಕೆ ಚಾಟ್ನ ಕಾಂಟೆಕ್ಟ್ ಅಥವಾ ಗ್ರೂಪ್ನ ಇನ್ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್ಗೆ ಹೋಗುತ್ತದೆ.