Beachcomber : ಬೀಚ್ಕಾಂಬರ್ ಕೈಗೆ ಇದು ಸಿಕ್ಕಿದೆ. ಈ ಸಂದೇಶ ಬರೆದು ನೀರಿಗೆಸೆದಿದ್ದ ವ್ಯಕ್ತಿ ಯಾರೆಂಬುದನ್ನೂ ಅವನು ಪತ್ತೆ ಹಚ್ಚಿದ್ದಾನೆ. ನಂತರ ಅವನ ಮನೆಗೆ ಹೋಗಿದ್ದಾನೆ. ಆದರೆ ಆ ವ್ಯಕ್ತಿ ಎರಡು ವರ್ಷಗಳ ಹಿಂದೆ…
Letter: ಇ-ಯುಗದಲ್ಲಿಯೂ ಅನೇಕರ ಮನೆಗಳಲ್ಲಿ ಹಳೆಯ ಪತ್ರಗಳನ್ನು ಕಾಪಿಟ್ಟುಕೊಂಡಿರಬಹುದು ಅಥವಾ ಪುಸ್ತಕಗಳೊಳಗೆ ಕೈಬರಹದ ಸಂದೇಶ ಅಥವಾ ಪತ್ರಗಳು ಬೆಚ್ಚಗೆ ಅವಿತಿರಬಹುದು. ಎಷ್ಟೋ ವರ್ಷಗಳ ನಂತರ ಅವು ಅಲ್ಲಿಂದ ಪುಳಕ್ಕನೇ ಜಾರಿ ಬಿದ್ದಾಗ ಉಂಟಾಗುವ ಪುಳಕ ಅಷ್ಟಿಷ್ಟಲ್ಲ. ಇದೀಗ ವೈರಲ್ ಆಗಿರುವ ಈ ಫೇಸ್ಬುಕ್ ಪೋಸ್ಟ್ ನೋಡಿ. 1980ರಲ್ಲಿ ಬರೆದ ಸಂದೇಶವೊಂದು ಸಿಕ್ಕಿದೆ. ಬಾಟಲಿಯೊಳಗೆ ಇದನ್ನು ಅಡಗಿಸಿಡಲಾದ ಈ ಸಂದೇಶ 34 ವರ್ಷದಷ್ಟು ಹಳೆಯದಾಗಿದೆ. ಇತ್ತೀಚೆಗೆ ಕೆನಡಾದ ವ್ಯಕ್ತಿಯೊಬ್ಬರಿಗೆ ಇದು ಸಿಕ್ಕಿದೆ.
ಹಳೆಯ ಕಲಾಕೃತಿಗಳು, ಪತ್ರಗಳು, ಸಾಮಾನುಗಳನ್ನು ಹುಡುಕುವುದು ಅವುಗಳ ಬಗ್ಗೆ ತಿಳಿಯುವುದು ಯಾವಾಗಲೂ ಕುತೂಹಲಕರ ವಿಷಯ. ಅಪರೂಪದ ಮಾಹಿತಿ ಏನಾದರೂ ಸಿಕ್ಕರೆ ಆಗುವ ರೋಮಾಂಚನ ಹೇಳತೀರದು. ಟ್ರೂಡಿ ಶಾಟ್ಲರ್ ಮೆಕಿನ್ನನ್ ಎನ್ನುವವರು ತಮ್ಮ ಫೇಸ್ಬುಕ್ನಲ್ಲಿ ಮೇಲಿನ ಫೋಟೋ ಮತ್ತು ನೋಟ್ ಹಂಚಿಕೊಂಡಿದ್ದಾರೆ.
”ಈ ಬಾಟಲಿ ಯಾರಿಗೆ ಸೇರಿದ್ದು ಎನ್ನುವುದನ್ನೂ ಕಂಡುಕೊಂಡಿದ್ದೇನೆ. ಇದು ಪೋರ್ಟ್ ಆಕ್ಸ್ ಚಾಯ್ಸ್ ಎನ್ಎಫ್ಎಲ್ಡಿಯ ಗಿಲ್ಬರ್ಟ್ ಹ್ಯಾಮ್ಲಿನ್ ಎನ್ನುವವರದು. ಎರಡು ವರ್ಷಗಳ ಹಿಂದೆ ಅವರು ನಿಧನರಾದರು. ಅವರ ಮಗ ಇದು ತಂದೆಯದೇ ಸಂದೇಶವೆಂದು ಖಚಿತಪಡಿಸಿದರು. ಈ ಬಾಟಲಿಯನ್ನು ನಾನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ.” ಎಂದಿದ್ದಾರೆ ಟ್ರೂಡಿ ಶಾಟ್ಲರ್ ಮೆಕಿನ್ನನ್.
ಜಾಲತಾಣಿಗರು ಈ ಪೋಸ್ಟ್ ನೋಡಿ ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ಧಾರೆ.