Tata Car Loans: ಟಾಟಾ ಮೋಟಾರ್ಸ್- ಬ್ಯಾಂಕ್​ ಆಫ್ ಮಹಾರಾಷ್ಟ್ರ ಸಹಯೋಗದಲ್ಲಿ ಕಾರು ಸಾಲಕ್ಕೆ ಒಳ್ಳೆ ಆಫರ್

Aug 16, 2021

ಪ್ರಯಾಣಿಕರ ವಾಹನಗಳಿಗಾಗಿ ಕಾರು ಸಾಲ ಒದಗಿಸುವ ಉದ್ದೇಶದಿಂದ ಟಾಟಾ ಮೋಟಾರ್ಸ್​ನಿಂದ ಬ್ಯಾಂಕ್​ ಆಫ್ ಮಹಾರಾಷ್ಟ್ರ ಜತೆಗೆ ಕೈಜೋಡಿಸಲಾಗಿದೆ. ಈ ಸಹಯೋಗದಲ್ಲಿ ಬ್ಯಾಂಕ್​ ಆಫ್ ಮಹಾರಾಷ್ಟ್ರದಿಂದ ಟಾಟಾ ಮೋಟಾರ್ಸ್ ಗ್ರಾಹಕರಿಗೆ ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (RLLR)ನೊಂದಿಗೆ ಅತ್ಯಂತ ಕಡಿಮೆಯ ಶೇ 7.15ರ ಆರಂಭಿಕ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸಲಾಗುತ್ತದೆ. ಆದರೆ ಇದಕ್ಕೆ ಕೆಲವು ಷರತ್ತುಗಳು ಅನ್ವಯಿಸುತ್ತವೆ. ಕಾರಿನ ಒಟ್ಟು ಬೆಲೆಯ ಮೇಲೆ (ಆನ್​-ರೋಡ್ ದರದ ಮೇಲೆ) ಶೇಕಡಾ 90ರಷ್ಟು ಸಾಲವನ್ನು ಈ “ಮಹಾ ಸೂಪರ್ ಕಾರ್ ಲೋನ್ ಸ್ಕೀಮ್” ಅಡಿಯಲ್ಲಿ ದೊರೆಯುತ್ತದೆ. ವೇತನದಾರರು, ಸ್ವ-ಉದ್ಯೋಗಿಗಳು, ವೃತ್ತಿಪರರು, ಉದ್ಯಮಿಗಳು ಹಾಗೂ ಕೃಷಿಕರಿಗೆ ಇಷ್ಟು ಮೊತ್ತದ ಸಾಲ ಸಿಗುತ್ತದೆ. ಇನ್ನು ಕಾರ್ಪೊರೇಟ್ ಗ್ರಾಹಕರಿಗೆ ವಾಹನ ಮೌಲ್ಯದ ಶೇ 80ರಷ್ಟು ಸಾಲ ದೊರೆಯುತ್ತದೆ.

ಈ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ಸೆಪ್ಟೆಂಬರ್ 30, 2021ರ ತನಕ ಶೂನ್ಯ ಪ್ರೊಸೆಸಿಂಗ್ ಶುಲ್ಕ ಆಗುತ್ತದೆ. 7 ವರ್ಷದ ಅವಧಿಗೆ ಸಾಲ ಪಡೆದಲ್ಲಿ ಪ್ರತಿ ಲಕ್ಷ ರೂಪಾಯಿಗೆ 1517 ರೂಪಾಯಿಯಂತೆ ತಿಂಗಳಿಗೆ ಇಎಂಐ ಬರುತ್ತದೆ. ಇನ್ನು ಟಾಟಾ ಮೋಟಾರ್ಸ್- ಬ್ಯಾಂಕ್ ಆಫ್ ಮಹಾರಾಷ್ಟ್ರ ಸಹಭಾಗಿತ್ವದಲ್ಲಿ ಕಾರ್ಪೊರೇಟ್ ವೇತನ ಖಾತೆ ಇರುವಂಥವರಿಗೆ ಹಾಗೂ ಈಗಾಗಲೇ ಗೃಹ ಸಾಲವನ್ನು ಪಡೆದುಕೊಂಡಂಥವರಿಗೆ ROIನಲ್ಲಿ ಶೇ 0.25ರಷ್ಟು ವಿನಾಯಿತಿ ದೊರೆಯುತ್ತದೆ. ಈ ಯೋಜನೆಗಳು ಪಡೆಯಬೇಕು ಅಂದರೆ ಗ್ರಾಹಕರು ತಮ್ಮ ಹತ್ತಿರದ ಟಾಟಾ ಮೋಟಾರ್ಸ್ ಡೀಲರ್​ಶಿಪ್ ಅಥವಾ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಗೆ ಭೇಟಿ ನೀಡಬಹುದು.

“ಕೊರೊನಾ ಬಿಕ್ಕಟ್ಟಿನ ಎರಡನೇ ಅಲೆಯ ಪರಿಣಾಮಗಳನ್ನು ಗಮನಿಸಿ, ಟಾಟಾ ಮೋಟಾರ್ಸ್​ನಲ್ಲಿ ನಾವು ಯಾವಾಗಲೂ ವೈಯಕ್ತಿಕ ಟ್ರಾನ್ಸ್​ಪೋರ್ಟೇಷನ್ ಹೆಚ್ಚು ಕೈಗೆಟುಕುವಂತೆ ಮತ್ತು ಲಾಭದಾಯಕ ದರದಲ್ಲಿ ವಯಕ್ತಿಕವಾಗಿ ಮತ್ತು ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಿದ್ದೇವೆ. ಈ ಕೊಡುಗೆಗಳು ಖರೀದಿ ಪ್ರಕ್ರಿಯೆಯನ್ನು ಸಲೀಸು ಮಾಡುತ್ತವೆ ಎಂದು ನಾವು ಭಾವಿಸುತ್ತೇವೆ. ಗ್ರಾಹಕರಿಗೆ ಹೆಚ್ಚು ಸುಲಭವಾದ ಕಾರು ಆಯ್ಕೆಗೆ ಮತ್ತು ಟಾಟಾ ಕಾರುಗಳ ಒಟ್ಟಾರೆ ಖರೀದಿ ಅನುಭವದ ಮೇಲೆ ಪಾಸಿಟಿವ್ ಆದ ಪರಿಣಾಮ ಬೀರುತ್ತದೆ,” ಎಂದು ಟಾಟಾ ಮೋಟಾರ್ಸ್ ಪಿವಿಬಿಯು ಮಾರಾಟ, ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವಾ ಉಪಾಧ್ಯಕ್ಷ ರಾಜನ್ ಅಂಬಾ ಹೇಳಿದ್ದಾರೆ.

Source: tv9 Kannada