Rocking Star Yash: ರಾಕಿಂಗ್ ಸ್ಟಾರ್​ ಯಶ್​ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿ 13 ವರ್ಷ! ಸಾಮಾಜಿಕ ಜಾಲತಾಣದಲ್ಲಿ ಯಶ್​ಯಿಸಂ ಟ್ರೆಂಡ್​

Jul 19, 2021

ರಾಕಿಂಗ್​ ಸ್ಟಾರ್​ ಯಶ್​: ರಾಕಿಂಗ್​ ಸ್ಟಾರ್​ ಎಂದೇ ಹೆಸರು ಪಡೆದು ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನೇ ಬಾಚಿಕೊಂಡ ಯಶ್​ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿ 13 ವರ್ಷಗಳಾಗಿದೆ.

ರಾಕಿಂಗ್​ ಸ್ಟಾರ್​ ಎಂದೇ ಹೆಸರು ಪಡೆದು ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನೇ ಬಾಚಿಕೊಂಡ ಯಶ್​ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿ 13 ವರ್ಷಗಳಾಗಿದೆ. ಈ ಖುಷಿಯಲ್ಲಿ ಅಭಿಮಾನಿಗಳೆಲ್ಲ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಡಿಫರೆಂಟ್​ ಲುಕ್​ನ ಫೋಟೋದ ಜತೆಗೆ ಕಾಮನ್​ ಡಿಪಿ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.

‘13ಇಯರ್ಸ್​ಆಫ್​ಯಶ್​ಯಿಸಂಸಿಡಿಪಿ’ (#13YearsOfYASHismCDP) ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಫೋಟೋ ಹರಿಬಿಡಲಾಗಿದೆ. ಕೇವಲ ಕನ್ನಡದ ಅಭಿಮಾನಿಗಳೊಂದೇ ಅಲ್ಲದೇ ತೆಲುಗು, ತಮಿಳು ಚಿತ್ರದ ಅಭಿಮಾನಿಗಳು ಸಹ ಹ್ಯಾಶ್​ಟ್ಯಾಗ್​ನೊಂದಿಗೆ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳೆಲ್ಲ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ರಾಕಿಂಗ್ ಸ್ಟಾರ್​ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಕಾಮನ್​ ಡೀಪಿ ಹಂಚಿಕೊಳ್ಳುವ ಮೂಲಕ ಶುಭ ಹಾರೈಕೆಗಳು ಬಂದಿವೆ. ಅಭಿಮಾನಿಗಳೆಲ್ಲ ತಮಿಗಿಷ್ಟವಾದ ಯಶ್​ ಸಕತ್​ ಸ್ಟೈಲ್ ಫೋಟೋಗಳನ್ನು ಸಹ ಹಂಚಿಕೊಂಡು ಹ್ಯಾಶ್​ಟ್ಯಾಗ್​ನೊಂದಿಗೆ ಸಂಭ್ರಮಿಸುತ್ತಿದ್ದಾರೆ.​ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯಶ್​ಯಿಸಂ ಟ್ರೆಂಡ್​ದೇ ಹವಾ.

ಇನ್ನು, ಕೆಜಿಎಫ್​ 2 ಚಿತ್ರೀಕರಣ ಇನ್ನೇನು ಸ್ವಲ್ಪ ಬಾಕಿ ಇದೆ. ನಿರ್ದೇಶಕರಾದ ಪ್ರಶಾಂತ್​ ನೀಲ್​ ಅವರು ಸದ್ಯದಲ್ಲೇ ಶೂಟಿಂಗ್​ ಮಾಡುವುದಾಗಿ ಹೇಳಿದ್ದರು. ಇನ್ನೇನು ಕೆಜಿಎಫ್​ 2 ಚಿತ್ರ ಕೂಡ ತೆರೆಕಾಣಲಿದ್ದು ಅಭಿಮಾನಿಗಳೆಲ್ಲ ಚಿತ್ರ ತೆರೆಕಾಣಲು ಕಾತುರದಿಂದ ಕಾಯುತ್ತಿದ್ದಾರೆ.

 

Source: Tv9 kannada