Rishab Pant: ಆಹಾ ಅದೆಂತಹ ಅದ್ಭುತ ಕ್ಯಾಚ್​!: ಟ್ರೋಲಿಗರಿಗೆ ಉತ್ತರ ನೀಡುತ್ತಲೇ ಇದ್ದಾರೆ ರಿಷಬ್​ ಪಂತ್​

Feb 15, 2021

Ind vs Eng, 2nd Test: ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಅಷ್ಟೇ. 55 ರನ್​ ಬಾರಿಸಿ ಅಜೇಯರಾಗಿ ಉಳಿದಿದ್ದರು. ಇದರಲ್ಲಿ ಏಳು ಬೌಂಡರಿ, ಮೂರು ಸಿಕ್ಸರ್​​ಗಳನ್ನು ಒಳಗೊಂಡಿದೆ.

ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್​ ಕೀಪರ್​ ನೀಡಿದ ಅದ್ಭುತ ಪ್ರದರ್ಶನವನ್ನು ಯಾರೂ ಮರೆಯುವಂತಿಲ್ಲ. ಆದರೆ, ಈ ಅದ್ಭುತ ಪ್ರದರ್ಶನಕ್ಕೂ ಮೊದಲು ಅವರು ಹಿಗ್ಗಾ-ಮುಗ್ಗಾ ಟ್ರೋಲ್​ ಆಗಿದ್ದರು. ಸತತ ಕ್ಯಾಚ್​ ಬಿಡುವ ಮೂಲಕ ಟ್ರೋಲ್​​ ಮಾಡುವವರಿಗೆ ಆಹಾರವಾಗಿದ್ದರು. ನಂತರ ಪುಟಿದೆದ್ದ ರಿಷಬ್​ ತನ್ನ ಓಟವನ್ನು ನಿಲ್ಲಿಸಿಲ್ಲ. ಆಸ್ಟ್ರೇಲಿಯಾ ನೆಲದಲ್ಲಿ ಮಾತ್ರವಲ್ಲದೆ ಭಾರತ ನೆಲದಲ್ಲೂ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಅವರು ಹಿಡಿದ ಅದ್ಭುತ ಕ್ಯಾಚ್​ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆಸ್ಟ್ರೇಲಿಯಾ ನೆಲದಲ್ಲಿ ರಿಷಬ್​ ಕ್ಯಾಚ್​ ಬಿಟ್ಟಿದ್ದಕ್ಕೆ ಸಾಕಷ್ಟು ಜನರು ‘ಈ ಆಟಗಾರರನ್ನು ಏಕೆ ಹಾಕಿಕೊಂಡಿದ್ದೀರಿ?’ ಎಂದು ಪ್ರಶ್ನೆ ಮಾಡಿದ್ದರು. ಈ ರೀತಿಯ ಟ್ರೋಲ್​ಗಳನ್ನು ನೋಡಿ ಮೈದಾನದಲ್ಲಿ ಆಡುವುದಿದೆಯಲ್ಲ ಅದು ನಿಜಕ್ಕೂ ಒಂದು ಸವಾಲಿನ ಕೆಲಸ. ಮೈದಾನದಲ್ಲಿ ಇರುವ ಒತ್ತಡ ಒಂದು ಕಡೆ ಆದರೆ, ಬ್ಯಾಟ್​ ಬೀಸುವಾಗ, ಫೀಲ್ಡಿಂಗ್​ ಮಾಡುವಾಗ ನೆನಪಾಗುವ ಟ್ರೋಲ್​ಗಳು ಮತ್ತೊಂದು ಕಡೆ. ಇದೆಲ್ಲದರ ವಿರುದ್ಧ ಸಿಡಿದೆದ್ದ ರಿಷಬ್​, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Ind vs Eng, 2nd Test, Day 2, LIVE Score: ಸಿರಾಜ್​ಗೆ ಮೊದಲ ಎಸೆತದಲ್ಲೇ ವಿಕೆಟ್​, ಶತಕ ಪೂರೈಸಿದ ಇಂಗ್ಲೆಂಡ್

ಇಂಗ್ಲೆಂಡ್ವಿರುದ್ಧದ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಅಷ್ಟೇ. 55 ರನ್​ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಏಳು ಬೌಂಡರಿ, ಮೂರು ಸಿಕ್ಸರ್​​ಗಳು ಒಳಗೊಂಡಿವೆ. ಇನ್ನು, ಅವರು ಹಿಡಿದ ಅದ್ಭುತ ಕ್ಯಾಚ್​ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆಸ್ಟ್ರೇಲಿಯಾ ಐದು ವಿಕೆಟ್​ಗಳನ್ನು ಕಳೆದುಕೊಂಡು ಆಡುತ್ತಿತ್ತು. ಈ ವೇಳೆ, ಮೊಹ್ಮದ್​ ಸಿರಾಜ್​ ಹಾಕಿದ ಬೌಲ್​ಅನ್ನು ಇಂಗ್ಲೆಂಡ್​ ಆಟಗಾರ ಆಲಿ ಪೋಪ್ ಬೌಂಡರಿಗೆ ಕಳುಹಿಸಲು ಹೋದರು. ಆದರೆ ಅದು ಎಡ್ಜ್​​ ಆಗಿ ಬೌಲ್​ ನೇರವಾಗಿ ಪಂತ್​ ಕೈ ಬಳಿ ಹೋಗಿತ್ತು. ಪಂತ್​ ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದರು. ಈ ಅದ್ಭುತ ಕ್ಯಾಚ್​ಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Source:TV9Kannada