Petrol Diesel Price: ಏರುತ್ತಲೇ ಇದೆ ಪೆಟ್ರೋಲ್ ದರ.. ಇಂದೂ 25 ಪೈಸೆ ಹೆಚ್ಚಳ

Feb 23, 2021

Petrol Diesel Rate: ಇಂದು ದೆಹಲಿಯಲ್ಲಿ 35 ಪೈಸೆ ಹೆಚ್ಚಳದೊಂದಿಗೆ ಪೆಟ್ರೋಲ್​ ದರ ₹90.93ಕ್ಕೆ ಜಿಗಿದಿದೆ. ಹಾಗೆಯೇ ಡೀಸೆಲ್​ 38 ಪೈಸೆ ಹೆಚ್ಚಳದಿಂದ ₹81.32ಕ್ಕೆ ಮಾರಾಟವಾಗುತ್ತಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್​ ದರ ಇಳಿಕೆಯತ್ತ ಸಾಗಿದ್ದು. ಜನರು ಕೊಂಚ ನಿರಾಳರಾಗಿದ್ದಾರೆ.

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಏರಿಕೆಯಾಗಿರುವುದರಿಂದ ದೇಶದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಕೂಡಾ ಮಂಗಳವಾರವೂ ಮತ್ತೆ ಏರಿಕೆಯತ್ತ ಸಾಗಿದೆ. ದೆಹಲಿಯಲ್ಲಿ ದೈನಂದಿನ ಇಂಧನ ದರದ ಪರಿಷ್ಕರಣೆಯ ನಂತರ ಪೆಟ್ರೋಲ್​ ದರ 25 ಪೈಸೆ ಹಾಗೂ ಡೀಸೆಲ್​ 35 ಪೈಸೆ ಹೆಚ್ಚಾಗಿದೆ.

ನಿನ್ನೆ ಪೆಟ್ರೋಲ್​ ದರ ₹90.58 ಇತ್ತು. ಇದೀಗ ಪ್ರತಿ ಲೀಟರ್​ ₹90.93ಕ್ಕೆ ಜಿಗಿದಿದೆ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್​ ₹81.32 ಇದ್ದು, ಇದೀಗ ₹81.32ಕ್ಕೆ ಮಾರಾಟವಾಗುತ್ತಿದೆ. ಈ ತಿಂಗಳಲ್ಲಿ ಪೆಟ್ರೋಲ್​ ದರ ಒಟ್ಟು ಪ್ರತಿ ಲೀಟರ್​ಗೆ ₹4.63ರಷ್ಟು ಏರಿಕೆ ಕಂಡಿದೆ ಹಾಗೂ ಡೀಸೆಲ್​₹4.84ರಷ್ಟು ಹೆಚ್ಚಳವಾಗಿದೆ.

ಇಂದು 34 ಪೈಸೆ ಹೆಚ್ಚಳದ ನಂತರ ಮುಂಬೈನಲ್ಲಿ ಇದೀಗ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ ₹97.34 ಹಾಗೂ 38ಪೈಸೆ ಹೆಚ್ಚಳದಿಂದ ಡೀಸೆಲ್​ ದರ ₹ 88.44ಕ್ಕೆ ಗ್ರಾಹಕರು ಕೊಂಡುಕೊಳ್ಳುತ್ತಿದ್ದಾರೆ. ಹಾಗೆಯೇ ಚೆನ್ನೈನಲ್ಲಿ ಪೆಟ್ರೋಲ್​ ದರದಲ್ಲಿ 31 ಪೈಸೆ ಏಋಇಕೆ ಮಾಡಲಾಗಿದ್ದು, ಪ್ರತಿ ಲೀಟರ್​ ಬೆಲೆ ₹92.90 ಆಗಿದೆ. ಹಾಗೂ ಡೀಸೆಲ್​ ದರ 33 ಪೈಸೆ ಹೆಚ್ಚಳವಾಗಿದ್ದು, ₹86.06ಕ್ಕೆ ಮಾರಾಟವಾಗುತ್ತಿದೆ.

ಕೊಲ್ಕತ್ತಾದಲ್ಲಿ ಪೆಟ್ರೋಲ್​ ದರ 66ಪೈಸೆ ಇಳಿಕೆ ಕಂಡಿದ್ದು ₹91.78 ಇದ್ದ ಪೆಟ್ರೋಲ್​ ದರ ಇದೀಗ ₹91.12ಕ್ಕೆ ಲಭ್ಯವಾಗುತ್ತಿದೆ. ಹಾಗೂ ಡೀಸೆಲ್​ ದರವೂ ಕೂಡಾ 36 ಪೈಸೆ ಕಡಿಮೆಯಾಗಿದ್ದು, ಇದೀಗ ಪ್ರತಿ ಲೀಟರ್​ ಡೀಸೆಲ್​ ದರ ₹84.20ಕ್ಕೆ ಲಭ್ಯವಾಗುತ್ತಿದೆ. ಇಷ್ಟು ದಿನ ಏರುತ್ತಲೇ ಇದ್ದ ಇಂಧನ ದರವನ್ನು ನೋಡುತ್ತಿದ್ದ ಕೊಲ್ಕತ್ತ ನಾಗರಿಕರಿಗೆ ಕೊಂಚ ಖುಷಿಯುಂಟಾಗಿದೆ.

Source: TV9Kannada