OnePlus 9R Mobile Phone Review
OnePlus 9R ಮೊಬೈಲ್ ಫೋನ್ ಹೇಗಿದೆ ಎಂಬ ವಿಶ್ಲೇಷಣೆ ನಿಮ್ಮ ಎದುರಿಗಿದೆ. ಒನ್ಪ್ಲಸ್ 9ರ ಸರಣಿಯಲ್ಲಿ ಬಿಡುಗಡೆ ಆಗುತ್ತಿರುವ ಮೂರನೇ ಮೊಬೈಲ್ ಫೋನ್ ಇದು. ಬೆಲೆ, ಬಣ್ಣ, ವೈಶಿಷ್ಟ್ಯ ಮೊದಲಾದ ವಿವರಗಳನ್ನು ತಿಳಿಯಿರಿ.
ಭಾರತದಲ್ಲಿ ಒನ್ಪ್ಲಸ್ ಬ್ರ್ಯಾಂಡ್ ಫೋನ್ಗಳಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. ವರ್ಷಕ್ಕೆ ಒಂದು ಮಾಡೆಲ್ ಬಿಡುಗಡೆ ಮಾಡುವ ಒನ್ಪ್ಲಸ್, ಈ ಬಾರಿ 9Rನೊಂದಿಗೆ ಬಂದಿದೆ. ಒನ್ಪ್ಲಸ್ 9ರ ಸರಣಿಯಲ್ಲಿ ಮೂರನೇ ಫೋನ್ ಇದು. ನಿಮಗೆ ಗೊತ್ತಿರಲಿ, ಒನ್ಪ್ಲಸ್ 9R ಮೊಬೈಲ್ಫೋನ್ ಬೆಲೆ ಈ ಹಿಂದಿನ ಎರಡು ಫೋನ್ಗಳಿಗಿಂತ ಕಡಿಮೆ ಇದೆ. ಡಿಸೈನ್ ಮಾತ್ರ ಅದೇ ರೀತಿಯಲ್ಲಿದೆ. 8GB RAM ಹಾಗೂ 128 GB ಸಂಗ್ರಹ ಸಾಮರ್ಥ್ಯದ ಫೋನ್ಗೆ ಆರಂಭಿಕ ಬೆಲೆ ರೂ. 39,999 ಹಾಗೂ 12GB RAM ಹಾಗೂ 256 GB ಸಂಗ್ರಹ ಸಾಮರ್ಥ್ಯದ ಫೋನ್ಗೆ ರೂ. 43,999 ಇದೆ. ಸರೋವರ ನೀಲಿ ಬಣ್ಣದ ಈ ಫೋನ್, ನುಣುಪಾದ, ಗ್ಲಾಸಿ ಫಿನಿಷ್ನೊಂದಿಗೆ ಬರುತ್ತದೆ. ಇದರ ಜತೆಗೆ ಮಿರರ್ ಬ್ಲ್ಯಾಕ್ ಬಣ್ಣದಲ್ಲಿ ಫ್ರಾಸ್ಟೆಡ್ ಟೆಕ್ಸ್ಚರ್ನೊಂದಿಗೆ ಬರುತ್ತದೆ.
ಮುಂಭಾಗ ಮತ್ತು ಹಿಂಭಾಗ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ನೊಂದಿಗೆ ಬರಲಿದ್ದು, ಪ್ರೀಮಿಯಂ ಫೋನ್ ಎಂಬ ಭಾವವನ್ನು ನೀಡುತ್ತದೆ. ಇನ್ನು ಕೈಯಲ್ಲಿ ಹಿಡಿಯಲು ಆರಾಮದಾಯಕವಾಗಿ ಇರುವಂತೆ ಈ ಫೋನ್ ಅನ್ನು ರೂಪಿಸಲಾಗಿದೆ. ಆದರೆ ಸ್ವಲ್ಪ ಮಟ್ಟಿಗೆ ಜಾರಿಕೆ ಇದೆ ಎಂದು ಕೆಲವು ಬಳಕೆದಾರರು ಹೇಳಿಕೊಂಡಿದ್ದಾರೆ. ಇನ್ನು ಈ ಫೋನ್ನ ತೂಕ 189 ಗ್ರಾಮ್ ಇದೆ. 8 ಮಿಲಿಮೀಟರ್ ದಪ್ಪ ಇದೆ. ಆದರೆ ಐಪಿ ರೇಟಿಂಗ್ ನಿರೀಕ್ಷೆ ಮಾಡುವಂತಿಲ್ಲ. ದೊಡ್ಡ ಕ್ಯಾಮೆರಾವು ಫೋನ್ ಹಿಂಭಾಗದಲ್ಲಿ ಮೆಟಾಲಿಕ್ ಟೆಕ್ಸ್ಚರ್ ಹೊಂದಿದೆ. 9Rನಲ್ಲಿ ಇರುವ ನಾಲ್ಕು ವಿಸಿಬಲ್ ಲೆನ್ಸ್ಗಳು ಒನ್ಪ್ಲಸ್ 9 ಪ್ರೋದಂತೆ ಹೆಚ್ಚಿನ ಪಕ್ಷ ಕಾಣಿಸುತ್ತದೆ. ಅಂದಹಾಗೆ ಈ ಫೋನ್ನಲ್ಲಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಐಎಸ್ ಜತೆಗೆ ಬರುತ್ತದೆ. 16 ಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸರ್ ಬರುತ್ತದೆ.
ಇನ್ನು ಸ್ಕ್ರೀನ್ ಅಡ್ಡಡ್ಡವಾಗಿ 6.55 ಇಂಚು ಇದ್ದು, ಪೂರ್ಣ ಎಚ್ಡಿ+ ರೆಸಲ್ಯೂಷನ್ ಜತೆಗೆ 120Hzಗರಿಷ್ಠ ರೆಸಲ್ಯೂಷನ್ ಇದೆ. ಎಚ್ಡಿಆರ್ ಬಗ್ಗೆ ಏನನ್ನೂ ತಿಳಿಸಿಲ್ಲ. ಫ್ರಂಟ್ ಕ್ಯಾಮೆರಾ 16 ಮೆಗಾಪಿಕ್ಸೆಲ್ನೊಂದಿಗೆ ಬರುತ್ತದೆ. ಎಡಭಾಗಕ್ಕೆ ಮೇಲ್ಭಾಗದ ತುದಿಯಲ್ಲಿ ಕಾಣಸಿಗುತ್ತದೆ. ಇದರ ಜತೆಗೆ ಇನ್- ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಇದೆ. 9R ಫೋನ್ನಲ್ಲಿ ಇರುವುದು ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 870 SoC. ಈಗಿರುವ ಫೋನ್ನ 888ಗೆ ಹೋಲಿಸಿದರೆ ವಿಪರೀತ ಹೈಯರ್ ಎಂಡ್. ಈಗಿನ ದಿನಮಾನದ ಗೇಮ್ಗಳನ್ನು ಆಡಲು ಇದೇ ಬಹಳ ಹೆಚ್ಚಾಯಿತು. ಒನ್ಪ್ಲಸ್ ಹೇಳಿರುವಂತೆ, ಇದರಲ್ಲಿ ವಿಸ್ತೃತವಾದ ಕೂಲಿಂಗ್ ಸಿಸ್ಟಮ್ ಜತೆಗೆ ಹಲವು ಟೆಂಪರೇಂಚರ್ ಸೆನ್ಸರ್ಸ್ ಬಳಸಲಾಗಿದೆ. ಗೇಮಿಂಗ್ ವೇಳೆಯಲ್ಲಿ ಫೋನ್ ಬಿಸಿ ಆಗುತ್ತದೆಯೇ ಎಂಬುದನ್ನು ನೋಡಬೇಕಿದೆ.
ಈ ಫೋನ್ನಲ್ಲಿ 4500 mAh ಬ್ಯಾಟರಿ ಇದ್ದು, ಮೇಲ್ನೋಟಕ್ಕೆ ಈ ಫೋನ್ಗೆ ಕಡಿಮೆ ಅನಿಸುತ್ತದೆ. ಇದು 65W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಅದಕ್ಕೆ ಹೊಂದುವ ಅಡಾಪ್ಟರ್ ಬಾಕ್ಸ್ನಲ್ಲೇ ಇರುತ್ತದೆ. ಅಂದಹಾಗೆ ವಯರ್ಲೆಸ್ ಚಾರ್ಜಿಂಗ್ ಇಲ್ಲ. ವೈಫೈ 6, ಬ್ಲ್ಯೂಟೂಥ್ 5.1, ಜತೆಗೆ ಆಪ್ಟ್X HD, NFC, ಹಲವು ನೇವಿಗೇಷನ್ ಸಿಸ್ಟಮ್ಗಳು, ಹ್ಯಾಪ್ಟಿಕ್ ವೈಬ್ರೇಷನ್ ಮತ್ತು ಸ್ಟೀರಿಯೋ ಸ್ಪೀಕರ್ಗಳನ್ನು ಹೊಂದಿದೆ. ಒನ್ಪ್ಲಸ್ನಿಂದ ಫಾಸ್ಟರ್ ಸ್ಟೋರೇಜ್ಗೆ UFS 3.1 ಬಳಸಲಾಗಿದೆ. ಆದರೆ ವಿಸ್ತರಣೆಗೆ ಮೈಕ್ರೋಎಸ್ಡಿ ಕಾರ್ಡ್ ಇಲ್ಲ. ಒನ್ಪ್ಲಸ್ನಿಂದ ಆಕ್ಸಿಜನ್ ಒಎಸ್ 11 ಅಭಿವೃದ್ಧಿ ಮುಂದುವರಿದಿದೆ. ಒನ್ಪ್ಲಸ್ ಬ್ರ್ಯಾಂಡ್ ಮಾರಾಟಕ್ಕೆ ಅತಿ ಮುಖ್ಯವಾದ ಕಾರಣ ಇದು. ಇದರಲ್ಲಿ ಬಳಕೆದಾರರು ತಮಗೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುವ ಹಲವು ಅವಕಾಶಗಳಿರುವುದು ಪ್ಲಸ್ ಪಾಯಿಂಟ್. ಅಂದಹಾಗೆ ಈ ಫೋನ್ನ ರೆಸಲ್ಯೂಷನ್ 1080X2400 ಪಿಕ್ಸೆಲ್ಸ್ ಇದೆ.
Source: TV9Kannada