Electric Bus: ಬೆಂಗಳೂರು ಜನರ ಬಹುದಿನದ ಕನಸು ಇಂದು ನನಸು; ರಾಜಾಧಾನಿಗೆ ಬಂದೇ ಬಿಡ್ತು ಎಲೆಕ್ಟ್ರಿಕ್ ಬಸ್

Sep 30, 2021

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಜನರ ಬಹುದಿನದ ಕನಸು ಇಂದು ಈಡೇರಿದೆ. ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದ್ದಾರೆ. ಬಿಎಂಟಿಸಿಯ 37ನೇ ಘಟಕದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವರು ಎಲೆಕ್ಟ್ರಿಕ್ ಬಸ್ ಲೋಕಾರ್ಪಣೆ ಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚರಿಸುತ್ತವೆ. ನವೆಂಬರ್​ನಲ್ಲಿ 90 ಎಲೆಕ್ಟ್ರಿಕ್ ಬಸ್​ಗಳು ಸಂಚರಿಸುತ್ತವೆ ಅಂತ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಬಸ್ ಪರಿಶೀಲನೆ ಬಳಿಕ ಹೇಳಿಕೆ ನೀಡಿದ ಶ್ರೀರಾಮುಲು. ಪರಿಸರ ಸ್ನೇಹಿ ಆಗಬೇಕು ಎಂದು ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಕೇಂದ್ರ ಸರ್ಕಾರ ಹಲವು ಸುಧಾರಣೆ ಮಾಡುತ್ತಿದೆ. ಅದರಲ್ಲಿ ಎಲೆಕ್ಟ್ರಿಕ್ ಬಸ್ ಕೂಡ ಒಂದಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಬಸ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಬಸ್‌ನಿಂದ ಶಬ್ದಮಾಲಿನ್ಯ, ವಾಯು ಮಾಲಿನ್ಯ ಆಗಲ್ಲ ಅಂತ ತಿಳಿಸಿದ್ದಾರೆ.

Source:tv9Kannada