Bengaluru: ಒಂದೇ ಕಾಲೇಜಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್
ಬೆಂಗಳೂರು: ನಗರದ ಕಾಲೇಜ್ ಒಂದರ 54 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆನೇಕಲ್ ತಾಲೂಕಿನ ಸಿಂಗೇನಹಾರ ಬಳಿಯ ಚೈತನ್ಯ ಇಂಟರ್ನ್ಯಾಷನಲ್ ಶಾಲೆಯ ಒಟ್ಟು 54 ವಿದ್ಯಾರ್ಥಿಗಳಿಗೆ ಇಂದು (ಸೆಪ್ಟೆಂಬರ್ 28) ಕೊರೊನಾ ಸೋಂಕು ದೃಢವಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಕಂಡುಬಂದಿದೆ. ಕೊವಿಡ್19 ಸೋಂಕು ದೃಢಪಟ್ಟಿರುವ 54 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತಗೆ ಸ್ಥಳಾಂತರಿಸಲಾಗಿದೆ. ಉಳಿದ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಸಿಂಗೇನಹಾರದ ಶ್ರೀ ಚೈತನ್ಯ ಇಂಟರ್ ನ್ಯಾಶನಲ್ ಸ್ಕೂಲ್ನಲ್ಲಿ ಘಟನೆ ನಡೆದಿದೆ. ಹಾಸ್ಟೆಲ್ನ ಮೂರು ಬ್ಲಾಕ್ಗಳ ಪೈಕಿ ಒಂದು ಬ್ಲಾಕ್ನಲ್ಲಿ ಇದ್ದ ಎಲ್ಲಾ ವಿದ್ಯಾರ್ಥಿನಿಯರು ಕೊರೊನಾ ಪಾಸಿಟಿವ್ ಆಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಾಲೇಜು ಮುಂಭಾಗಕ್ಕೆ ಪೋಷಕರು ಆಗಮಿಸಿದ್ದಾರೆ. ಕೊರೊನಾ ಸ್ಫೋಟಗೊಂಡ ಹಿನ್ನೆಲೆ ಕಾಲೇಜ್ ಬಂದ್ ಮಾಡಲಾಗಿದೆ.
Source:tv9kannada