Jan Dhan Accounts: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)ಯನ್ನು ಸದುಪಯೋಗ ಮಾಡಿಕೊಂಡ ದೇಶದ ಒಟ್ಟು ಜನ್ ಧನ್ ಖಾತೆಗಳ ಸಂಖ್ಯೆ 50 ಕೋಟಿ ಗಡಿ ದಾಟಿದ್ದು, ಶೇ 56ರಷ್ಟು ಖಾತೆಗಳನ್ನು ಮಹಿಳೆಯರು ಹೊಂದಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
 
ದೆಹಲಿ, ಆ.19 : ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಮೊದಲು ತಂದ ಮತ್ತು ಅತ್ಯಂತ ಜನಪ್ರಿಯ ಯೋಜನೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)ಯನ್ನು ಸದುಪಯೋಗ ಮಾಡಿಕೊಂಡ ದೇಶದ ಒಟ್ಟು ಜನ್ ಧನ್ ಖಾತೆಗಳ ಸಂಖ್ಯೆ 50 ಕೋಟಿ ಗಡಿ ದಾಟಿದ್ದು, ಶೇ 56ರಷ್ಟು ಖಾತೆಗಳು ಮಹಿಳೆಯರು ಹೊಂದಿದ್ದಾರೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ (ಆ.18) ತಿಳಿಸಿದೆ. ಈ ಪೈಕಿ ಶೇ 67ರಷ್ಟು ಖಾತೆಗಳನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ ಎಂದು ಸಚಿವಾಲಯ ವರದಿಯಲ್ಲಿ ಹೇಳಿದೆ. ಈ ಖಾತೆಗಳಲ್ಲಿನ ಒಟ್ಟು ಠೇವಣಿಗಳು ₹ 2.03 ಲಕ್ಷ ಕೋಟಿಗಿಂತ ಹೆಚ್ಚಿದ್ದು , ಸುಮಾರು 34 ಕೋಟಿ ರೂಪಾಯಿ ಪಾಸ್​​ ಬುಕ್ ಖಾತೆಗಳೊಂದಿಗೆ ಉಚಿತವಾಗಿ ನೀಡಲಾಗಿದೆ.
 
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಖಾತೆಗಳಲ್ಲಿನ ಸರಾಸರಿ ಬ್ಯಾಲೆನ್ಸ್ ₹ 4,076 ಮತ್ತು ಇವುಗಳಲ್ಲಿ 5.5 ಕೋಟಿಗೂ ಹೆಚ್ಚು ಜನರು ನೇರ ಲಾಭ ವರ್ಗಾವಣೆಯನ್ನು (ಡಿಬಿಟಿ) ಪಡೆಯುತ್ತಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇನ್ನು ಆಗಸ್ಟ್ 28, 2014 ರಂದು ಪ್ರಾರಂಭವಾದ PMJDY (ಪ್ರಧಾನ ಮಂತ್ರಿ ಜನ್ ಧನ್ ಯೋಜನೆ) ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಬ್ಯಾಂಕ್​​ ಖಾತೆ ಇಲ್ಲದ ಜನರಿಗೆ ಇದು ನೆರವಾಗಿದೆ, ಜತೆಗೆ ಈ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ ಎಂದು ಹೇಳಲಾಗಿದೆ.
 
PMJDY ಖಾತೆದಾರರಿಗೆ ಕನಿಷ್ಠ ಬ್ಯಾಲೆನ್ಸ್‌ನ (ಶೂನ್ಯ ಬ್ಯಾಲೆನ್ಸ್‌) ಅಗತ್ಯವಿಲ್ಲದೆ ಬ್ಯಾಂಕ್ ಖಾತೆಯನ್ನು ಹೊಂದುವ ಅವಕಾಶವನ್ನು ನೀಡಿತ್ತು. ₹ 2 ಲಕ್ಷದ ಅಂತರ್ನಿರ್ಮಿತ ಅಪಘಾತ ವಿಮೆಯೊಂದಿಗೆ ಉಚಿತ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ₹ 10,000 ವರೆಗಿನ ಓವರ್‌ಡ್ರಾಫ್ಟ್ ಸೌಲಭ್ಯದಂತಹ ಬಹು ಪ್ರಯೋಜನಗಳನ್ನು ಇದು ನೀಡುತ್ತದೆ.

Source: TV9 KANNADA