2048 ರ ಒಲಿಂಪಿಕ್ಸ್ ಆಯೋಜಿಸುವುದು ನಮ್ಮ ಕನಸು: ಅರವಿಂದ್ ಕೇಜ್ರಿವಾಲ್
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 100 ಮನೆಗಳಿಗೆ ಪಡಿತರ ವಿತರಿಸಿ ಈ ಯೋಜನೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ ಇಮ್ರಾನ್ ಹುಸೈನ್, ಏಪ್ರಿಲ್ 1ರ ಬಳಿಕ ಈ ಯೋಜನೆಯನ್ನು ಇನ್ನಷ್ಟು ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ದೆಹಲಿ: ಮನೆ ಮನೆಗೆ ಪಡಿತರ ವಿತರಣೆ ಮಾಡುವ ದೆಹಲಿ ಸರ್ಕಾರದ ಯೋಜನೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾರ್ಚ್ 25ರಂದು ಚಾಲನೆ ನೀಡಲಿದ್ದಾರೆ. ‘ಘರ್ ಘರ್ ರೇಷನ್’ ಯೋಜನೆಗೆ ಸಂಬಂಧಿಸಿ ಸೀಮಾಪುರಿ ಭಾಗದ ನಿಯಮಿತ ಸಂಖ್ಯೆಯ ಫಲಾನುಭವಿಗಳ ಮನೆಗಳಿಗೆ ಪಡಿತರ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಇಮ್ರಾನ್ ಹುಸೈನ್ ಇಂದು (ಮಾರ್ಚ್ 12) ಹೇಳಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ, ಅವರ ಪಡಿತರ ಮತ್ತು ಬಯೋಮೆಟ್ರಿಕ್ ವಿವರ ಸಿದ್ಧಪಡಿಸಿ ಇಡುವಂತೆ ಸರ್ಕಾರ ಆಯಾ ಇಲಾಖೆಗಳಿಗೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 100 ಮನೆಗಳಿಗೆ ಪಡಿತರ ವಿತರಿಸಿ ಈ ಯೋಜನೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ ಇಮ್ರಾನ್ ಹುಸೈನ್, ಏಪ್ರಿಲ್ 1ರ ಬಳಿಕ ಈ ಯೋಜನೆಯನ್ನು ಇನ್ನಷ್ಟು ವಿಸ್ತರಣೆ ಮಾಡಲಾಗುವುದು. ರಾಷ್ಟ್ರ ರಾಜಧಾನಿಯ ಇತರಡೆಗೂ ಈ ಯೋಜನೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ.
ಮನೆ ಮನೆಗೆ ಪಡಿತರ, ಬಯೋಮೆಟ್ರಿಕ್ ವೆರಿಫಿಕೇಷನ್ ನಂತರ
ಮನೆ ಮನೆಗೆ ಪಡಿತರ ಸಾಮಾಗ್ರಿಗಳನ್ನು ಒದಗಿಸುವ ಈ ಯೋಜನೆಯನ್ನು ದೆಹಲಿ ಸರ್ಕಾರ ಕಳೆದ ತಿಂಗಳೇ ಪರಿಚಯಿಸಿತ್ತು. ಯೋಜನೆಯ ಪ್ರಕಾರ ಪ್ರತಿ ಫಲಾನುಭವಿ ಮನೆಗಳಿಗೆ ಪಡಿತರ ಸಾಮಾಗ್ರಿಗಳು ಸರಬರಾಜು ಆಗಲಿದೆ. ಗೋಧಿ, ಅಕ್ಕಿ ಮನೆ ಮನೆಗೆ ತಲುಪಲಿದೆ. ಈ ಯೋಜನೆಗಾಗಿ ಬಯೋಮೆಟ್ರಿಕ್ ವೆರಿಫಿಕೇಷನ್ ಆಗಬೇಕಿದೆ.
ಗಣರಾಜ್ಯೋತ್ಸವ ದಿನದಂದು ಮಾತನಾಡಿದ್ದ ಆಮ್ ಆದ್ಮಿ ಪಾರ್ಟಿ (AAP) ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೆ ಮನೆಗೆ ಪಡಿತರ ವಿತರಿಸುವ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಹೇಳಿಕೆ ನೀಡಿದ್ದರು. ವರ್ಷಾಂತ್ಯದ ಒಳಗೆ ನಗರದ ಪ್ರತಿಯೊಬ್ಬರಿಗೂ ಆರೋಗ್ಯ ಕಾರ್ಡ್ (Health Card) ನೀಡುವ ಕುರಿತು ಹೇಳಿಕೆ ನೀಡಿದ್ದರು.
2048 ಒಲಿಂಪಿಕ್ಸ್ ಆಯೋಜಿಸುವುದು ನಮ್ಮ ಕನಸು!
2048ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವುದು ನಮ್ಮ ಕನಸು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ಮಾರ್ಚ್ 12) ದೆಹಲಿ ಸದನದಲ್ಲಿ ಹೇಳಿದರು. ನಾವು ಎಲ್ಲಾ ಕ್ರೀಡಾ ಸಂಘಟನೆಗಳನ್ನು, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನ್ನು ಭೇಟಿಯಾಗುತ್ತೇವೆ. ದೆಹಲಿ ಸರ್ಕಾರ ಈ ಬಗ್ಗೆ ಮೊದಲ ಹೆಜ್ಜೆ ತೆಗೆದುಕೊಳ್ಳುತ್ತದೆ. ಆದರೆ, ಉಳಿದೆಲ್ಲರೂ ಈ ಕನಸಿಗೆ ಸಹಕಾರ ನೀಡಬೇಕು. ಹಾಗಾದಾಗ, ಈ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
Source:TV9Kannada