ನನ್ನನ್ನು ಇಂಜಿನಿಯರ್ ಬೊಮ್ಮಾಯಿ ಅಂದ್ರೆ ಖುಷಿಯಾಗುತ್ತೆ; ಸಿಎಂ ಬಸವರಾಜ ಬೊಮ್ಮಾಯಿ

Sep 15, 2021

ಬೆಂಗಳೂರು: ನನ್ನನ್ನು ಇಂಜಿನಿಯರ್ (Engineer) ಬೊಮ್ಮಾಯಿ ಅಂದ್ರೆ ಖುಷಿಯಾಗುತ್ತೆ ಅಂತ ಸರ್.ಎಂ.ವಿಶ್ವೇಶ್ವರಯ್ಯ 161ನೇ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai )ಹೇಳಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ ಶ್ರಮಜೀವಿಗಳಾಗಿದ್ದರು. 161 ವರ್ಷವಾದರೂ ಅವರ ಸಾಧನೆಯನ್ನ ನೆನಪಿಸಿಕೊಳ್ಳುತ್ತೇವೆ. ಈ ರಾಜ್ಯಕ್ಕೆ ಮತ್ತೊಮ್ಮೆ ಸರ್.ಎಂ.ವಿಶ್ವೇಶ್ವರಯ್ಯ ಬೇಕಾಗಿದೆ. ನಮ್ಮ ಸ್ವಂತ ಮನೆ ಕಟ್ಟಬೇಕಾದರೆ ಗುಣಮಟ್ಟ ನೋಡುತ್ತೇವೆ. ಅದೇ ಗುಣಮಟ್ಟ ಸರ್ಕಾರಿ ಕೆಲಸದಲ್ಲಿ ಕಾಯ್ದುಕೊಳ್ಳಬೇಕು ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ವಿಶ್ವೇಶ್ವರಯ್ಯ ಇದ್ದಿದ್ದರೆ ಯಾವ ರೀತಿ ಸಮಸ್ಯೆಗಳಿಗೆ ಪರಿಹಾರ ಕೊಡುತ್ತಿದ್ದರು ಎನ್ನುವ ಪ್ರಶ್ನೆ ನಾವೂ ಹಾಕಿಕೊಳ್ಳಬೇಕು. ಆ ಪ್ರಶ್ನೆ ಹಾಕಿಕೊಂಡು ಕೆಲಸ ಮಾಡಬೇಕು. ಇಡೀ ವ್ಯವಸ್ಥೆಯೇ ಹಾಳಾಗುತ್ತಿದೆ. ಸರ್ಕಾರದ ಹಣ ಅದು ಸಾರ್ವಜನಿಕರ ಹಣ. ನಾವೂ ನಮ್ಮ ಮನೆ ಕಟ್ಟಬೇಕಾದರೇ ಯಾವ ರೀತಿ ಗುಣಮಟ್ಟ ಬಯಸುತ್ತೇವೆಯೋ ಅದೇ ರೀತಿ ಸರ್ಕಾರದ ಕೆಲಸವನ್ನ ಮಾಡಬೇಕು ಅಂತಾ ಇಂಜಿನಿಯರ್ಗಳಿಗೆ ಸಿಎಂ ಎಚ್ಚರಿಸಿದರು.

ವಿಶ್ವೇಶ್ವರಯ್ಯ ಜನ್ಮದಿನವನ್ನ ಶ್ರಮಜೀವಿಗಳಿಗೆ ಅರ್ಪಿಸುತ್ತೇನೆ. ಅವರು ಇಲ್ಲದಿದ್ದರೆ ಇಂಜಿನಿಯರ್ಗಳು ಡ್ರಾಯಿಂಗ್ ಬಾಕ್ಸ್​ನಲ್ಲಿ ಕಳೆದು ಹೋಗುತ್ತೀರಿ. ಶ್ರಮಜೀವಿಗಳು ದೇಶಕ್ಕೆ ಬೆನ್ನೆಲುಬು. ಇವತ್ತು ಒಂದು ದಿನ ವಿಶ್ವೇಶ್ವರಯ್ಯರನ್ನು ನೆನೆದರೆ ಸಾಕಾಗಲ್ಲ. ಅವರ ಆದರ್ಶ ಸದಾ ಪಾಲಿಸಬೇಕು. ಅವರ ಬಯಸಿದ ನಾಡನ್ನ ಕಟ್ಟೋಣ ಅಂತ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಸ್ವಾಗತ ಭಾಷಣ 10 ನಿಮಿಷ ಮೀರಿದ್ದಕ್ಕೆ ಸಿಎಂ ಗರಂ
ಸ್ವಾಗತ ಭಾಷಣ 10 ನಿಮಿಷ ಮೀರಿದ್ದಕ್ಕೆ ಕಾರ್ಯಕ್ರಮದ ಆರಂಭದಲ್ಲಿ ಸಿಎಂ ಗರಂ ಆದರು. ಕೆಲ ದೇಶಗಳಲ್ಲಿ ಕಾರ್ಯಕ್ರಮ ಮುಕ್ಕಾಲು ಗಂಟೆಗೆ ಮುಗಿಯುತ್ತದೆ. ಆದರೆ ನಮ್ಮಲ್ಲಿ ಇದ್ದವರು ಇಲ್ಲದವರನ್ನು ಸ್ವಾಗತ ಮಾಡುತ್ತಾರೆ. ಇದು ಸ್ವಲ್ಪ ಬದಲಾವಣೆ ಆಗಬೇಕು ಅಂತ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ 10 ನಿಮಿಷ ಮೀರಿದ್ದಕ್ಕೆ ಸಿಎಂ ಗರಂ ಆದರು. ಸದನ ನಡೆಯುತ್ತಿದೆ, ಹೀಗಾಗಿ ತುರ್ತಾಗಿ ಅಲ್ಲಿ ಹೋಗಬೇಕು. ಹೀಗಾಗಿ ಕೆಲ ಕಾರ್ಯಕ್ರಮಗಳನ್ನ ಮೊಟಕುಗೊಳಿಸುತ್ತಿದ್ದೇನೆ. ಸರ್.ಎಂ.ವಿಶ್ವೇಶ್ವರಯ್ಯ ಸಮಯಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದರು. ಹಾಗೆಯೇ ನಾವೂ ಸಹ ಸಮಯಕ್ಕೆ ಮಹತ್ವ ಕೊಡಬೇಕು. ಇದ್ದವರು ಇಲ್ಲದವರನ್ನೂ ಸ್ವಾಗತಿಸುವ ಪರಂಪರೆ ನಿಲ್ಲಬೇಕು ಅಂತ ಕಾರ್ಯಕ್ರಮ ಆಯೋಜಕರಿಗೆ ಭಾಷಣ ಆರಂಭದಲ್ಲೇ ಸಿಎಂ ಚಾಟಿ ಬೀಸಿದರು.

Source:tv9kannada