ಡಿ.31ರ ಬಂದ್ ಬಗ್ಗೆ ಯಾವುದೇ ಮನವಿ ಪತ್ರ ನೀಡಿಲ್ಲ; ಒತ್ತಾಯಪೂರ್ವಕವಾಗಿ ಬಂದ್ ನಡೆಸುವಂತಿಲ್ಲ: ಕಮಲ್ ಪಂತ್

Dec 25, 2021

ಬೆಂಗಳೂರು: ಡಿಸೆಂಬರ್ 31 ರಂದು ಬಂದ್‌ ನಡೆಸಲಿರುವ ಬಗ್ಗೆ ಯಾವುದೇ ಮನವಿ ಪತ್ರ ನೀಡಿಲ್ಲ. ಒತ್ತಾಯಪೂರ್ವಕವಾಗಿ ಯಾವುದೇ ಬಂದ್ ನಡೆಸುವಂತಿಲ್ಲ. ಸ್ವ ಇಚ್ಛೆಯಿಂದ ಬಂದ್ ಆಚರಿಸಿದರೆ ಯಾವುದೇ ಅಡ್ಡಿ ಇಲ್ಲ. ಬಲವಂತವಾಗಿ ಬಂದ್ ಮಾಡಿಸಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ವಿಚಾರವಾಗಿಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಗೈಡ್‌ಲೈನ್ಸ್‌ನಂತೆ ಹೊಸ ವರ್ಷ ಆಚರಿಸಬೇಕು. ಹೋಟೆಲ್‌, ಪಬ್‌ ಎಲ್ಲಿಯೂ ವಿಶೇಷ ಕಾರ್ಯಕ್ರಮ ಇರಲ್ಲ. ಬುಕ್ಕಿಂಗ್‌ ಇದ್ದವರು ಮಾತ್ರ ಸೆಲೆಬ್ರೇಷನ್‌ಗೆ ತೆರಳಬೇಕು. ನ್ಯೂ ಇಯರ್ ಸೆಲೆಬ್ರೇಷನ್‌ಗೆ ನಿಯಮ ಪಾಲನೆ ಕಡ್ಡಾಯ ಇರಲಿದೆ. ಬ್ರಿಗೇಡ್‌ ರೋಡ್‌ನಲ್ಲಿ ಯಾವುದೇ ಜನರು ಸೇರುವಂತಿಲ್ಲ. ಜನಜೀವನ ನಾರ್ಮಲ್‌ ಆಗಿರಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯನ್ನು ನಡೆಸಿದ್ದಾರೆ ಎಂದು ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

ಡಿಸೆಂಬರ್ 31ರಂದು ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಓಪನ್ ಇರುತ್ತೆ. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಜನ ಸಂಚಾರಕ್ಕೆ ಅವಕಾಶ ಇರಲಿದೆ. ಆದ್ರೆ ಸಾರ್ವಜನಿಕವಾಗಿ ಹೊಸವರ್ಷಾಚರಣೆ ಮಾಡುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಬೆಂಗಳೂರು ವೈಟ್ ಫೀಲ್ಡ್ ಪೊಲೀಸರಿಂದ ಒಳ್ಳೆಯ ಕಾರ್ಯಚರಣೆ ನಡೆದಿದೆ. ತಮಿಳುನಾಡಿನ ತಿರುಚಿಯ ರಾಂಜಿ ನಗರದಿಂದ ಅರೋಪಿಗಳು ಬಂದು ಅಟೆನ್ಷನ್ ಡೈವರ್ಷನ್ ಮಾಡಿ ಕಳ್ಳತನ ಮಾಡಿದ್ದವರನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರು ಹಾಗು ಇತರೆಡೆ ನಡೆದಿದ್ದ ಒಟ್ಟು ನಲವತ್ತೆರಡು ಕೇಸ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

Source: tv9kannada