ಹೆಚ್ಚಿದ ಹಿಮಪಾತ: ಗರ್ಭಿಣಿ ಮಹಿಳೆಯನ್ನು ಹೊತ್ತು ಆಸ್ಪತ್ರೆಗೆ ನಡೆದ ಸೈನಿಕರು

Mar 23, 2021

ಹಿಮಪಾತ ಹೆಚ್ಚಳ | ತುಂಬು ಗರ್ಭಿಣಿಯನ್ನು ಹೊತ್ತು ನಡೆದ  ಸೈನಿಕರು

ದೆಹಲಿ(ಮಾ.23): ಹಿಮಪಾತದಿಂದಾಗಿ ರಸ್ತೆಗಳೆಲ್ಲ ಮುಚ್ಚಲ್ಪಟ್ಟಿದ್ದು, ತುರ್ತು ಸ್ಥಿತಿಯಲ್ಲಿ ತುಂಬು ಗರ್ಭಿಣಿಯನ್ನು ಸೈನಿಕರೇ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ ಘಟನೆ ಜಮ್ಮು ಕಾಶ್ಮೀರದ ಸುಮ್ವಾಲಿಯಲ್ಲಿ ನಡೆದಿದೆ.

ಭಾರತೀಯ ಸೇನೆಯ ಟೋರ್ನಾ ಬೆಟಾಲಿಯನ್ ತುಂಬು ಗರ್ಭಿಣಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಲು ನೆರವಾಗಿದೆ. ಸ್ಥಳೀಯರೊಂದಿಗೆ 5 ಕಿಮೀ ಗರ್ಭಿಣಿಯನ್ನು ಹೊತ್ತು ನಡೆದ ಸೈನಿಕರು ಅಲ್ಲಿಂದ ಆಕೆಯನ್ನು ಆರ್ಮಿ ಆಂಬುಲೆನ್ಸ್ನಲ್ಲಿ ಕರೆದೊಯ್ದಿದ್ದಾರೆ.

ಬಿಜೆಪಿ ಆವಾಸ್‌ ಯೋಜನೆ ಜಾಹೀರಾತಿನ ಮಹಿಳೆಗೆ ಸ್ವಂತ ಮನೆಯೇ ಇಲ್ಲ!

ಮಾರ್ಚ್ 22ರಂದು ತಡರಾತ್ರಿ ಸುಮ್ವಾಲಿಯ ಆರ್ಮಿಗೆ ನೆರವಿನ ಕರೆ ಬಂದಿತ್ತು. 9 ತಿಂಗಳಾದ ಗರ್ಭಿಣಿಗೆ ತರ್ತು ಚಿಕಿತ್ಸೆಯ ಅಗತ್ಯವಿತ್ತು.
ಸ್ಥಳಕ್ಕೆ ಬಂದ ಆರ್ಮಿ ವೈದ್ಯಾಧಿಕಾರಿ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಪ್ರತಿಕೂಲ ಹವಾಮಾನ, ಹೆಚ್ಚಿನ ಹಿಮಪಾತದಲ್ಲಿ ಮಹಿಳೆಯನ್ನು ಹೊತ್ತುಕೊಂಡೇ ಬರಲಾಗಿತ್ತು.

Source:Suvarna news