ಸ್ಟೈಲಿಷ್ ಸ್ಟಾರ್‌ ಅಲ್ಲುಗೆ ಕೊರೋನಾ ಪಾಸಿಟಿವ್

Apr 28, 2021

ಸೌತ್ ನಟ ಅಲ್ಲು ಅರ್ಜುನ್‌ಗೆ ಕೊರೋನಾ ಪಾಸಿಟಿವ್ | ವರಿ ಮಾಡ್ಕೊಳ್ಬೇಡಿ ಎಂದ ಸ್ಟೈಲಿಷ್ ಸ್ಟಾರ್

ತೆಲುಗು ಸೂಪರ್‌ ಸ್ಟಾರ್ ಅಲ್ಲು ಅರ್ಜುನ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ‘ಅಲಾ ವೈಕುಂಠಪುರಮುಲೂ’ ನಟ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಎಲ್ಲರಿಗೂ ನಮಸ್ಕಾರ! ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸುವಂತೆ ನಾನು ವಿನಂತಿಸುತ್ತೇನೆ. ನಾನು ಆರೋಗ್ಯವಾಗಿದ್ದೇನೆ ಚಿಂತಿಸಬೇಡಿ ಎಂದು ನನ್ನ ಎಲ್ಲ ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ವಿನಂತಿಸುತ್ತೇನೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು 38 ವರ್ಷದ ನಟ ಪೋಸ್ಟ್ ಮಾಡಿದ್ದಾರೆ.

ಕೋವಿಡ್ ರಿಸ್ಕ್ : ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್

ಕೊರೋನಾ ಎರಡನೇ ಅಲೆ ಭಾರತದಲ್ಲಿ ಹೆಚ್ಚಾದಂತೆ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. ಹೆಚ್ಚು ಅಪಾಯಕಾರಿಯಾಗಿರುವ ಮೂರನೇ ವಿಧದ ತ್ರಿಬಲ್ ಮ್ಯೂಟೆಂಟ್ ಕೂಡಾ ವರದಿಯಾಗುತ್ತಿದೆ.

 

ವಿವಿಧ ಪ್ರಸಿದ್ಧ ಸಿನಿಮಾ ಸೆಲೆಬ್ರಿಟಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಎಸ್.ಎಸ್.ರಾಜಮೌಳಿ, ರಾಮ್ ಚರಣ್, ತಮನ್ನಾ ಭಾಟಿಯಾ, ನಾಗ ಬಾಬು ಮತ್ತು ಬಾಂದ್ಲಾ ಗಣೇಶ್ ಅವರಿಗೂ ಈ ಹಿಂದೆ ಪಾಸಿಟಿವ್ ದೃಢಪಟ್ಟಿತ್ತು.

ಪ್ರಿಯಾಂಕಳಿಂದಾಗಿ ನಂಗೆ ಕೆಲಸ ಸಿಗಲಿಲ್ಲ: ಪಿಗ್ಗಿ ಕಸಿನ್ ಹೇಳಿದ್ದಿಷ್ಟು

ನಟ ಅಲ್ಲು ಅರ್ಜುನ್ ಕೊನೆಯದಾಗಿ ತ್ರಿವಿಕ್ರಮ್ ಶ್ರೀನಿವಾಸ್ ಅವರ ಆಕ್ಷನ್-ಡ್ರಾಮಾ ಚಿತ್ರ ‘ಅಲಾ ವೈಕುಂಠಪುರರಾಮುಲೂ’ ನಲ್ಲಿ 2020 ರಲ್ಲಿ ನಟಿ ಪೂಜಾ ಹೆಗ್ಡೆ ಅವರೊಂದಿಗೆ ಕಾಣಿಸಿಕೊಂಡರು. ಇನ್ನು ಸುಕುಮಾರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ ‘ಪುಷ್ಪಾ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Source:Suvarna News