ವಿಮಾನದ ಮೆಟ್ಟಿಲೇರುವಾಗ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ; ಜೋ ಬೈಡನ್​ ಆರೋಗ್ಯದ ಬಗ್ಗೆ ತಿಳಿಸಿದ ಮಾಧ್ಯಮ ಕಾರ್ಯದರ್ಶಿ

Mar 20, 2021

ವೇಗವಾಗಿ ಹತ್ತುತ್ತಿದ್ದ ಅವರು ಮೆಟ್ಟಿಲುಗಳ ಅರ್ಧ ಭಾಗಕ್ಕೆ ಹೋಗುತ್ತಿದ್ದಂತೆ, ಮೊದಲು ಸಣ್ಣ ಪ್ರಮಾಣದಲ್ಲಿ ಎಡವಿದರು. ಅದಾಗಿ ಕೆಲವೇ ಸೆಕೆಂಡ್​​ನಲ್ಲಿ ಇನ್ನೊಮ್ಮೆ ಎಡವಿದರು ಮತ್ತೆ ಮೂರನೇ ಬಾರಿ ಎಡವಿದಾಗ ಅಲ್ಲೇ ಮಂಡಿಯೂರಿ ಬಿದ್ದಿದ್ದಾರೆ.

ಅಮರಿಕದ ನೂತನ ಅಧ್ಯಕ್ಷ ಜೋ ಬೈಡನ್ (Joe Biden) ಶುಕ್ರವಾರ ಏರ್​ಫೋರ್ಸ್​ ವಿಮಾನ ಹತ್ತುವಾಗ ಮೆಟ್ಟಿಲುಗಳ ಮೇಲೇ ಮೂರು ಬಾರಿ ಎಡವಿ ಬಿದ್ದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ವಾರದ ಪ್ರಾರಂಭದಲ್ಲಿ ಅಟ್ಲಾಂಟಾದ ಪಾರ್ಲರ್​ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಅದರ ಬಗ್ಗೆ ಏಷಿಯನ್​-ಅಮೆರಿಕನ್ ಸಮುದಾಯ ಮುಖಂಡರೊಂದಿಗೆ ಚರ್ಚಿಸಲು ಬೈಡನ್​ ಶುಕ್ರವಾರ ಅಲ್ಲಿಗೆ ತೆರಳಿದ್ದಾರೆ. ಅಟ್ಲಾಂಟಾಕ್ಕೆ ತೆರಳಲು ಏರ್​ಫೋರ್ಸ್​ 1 ವಿಮಾನದ ಮೆಟ್ಟಿಲು ಏರುತ್ತಿರುವಾಗ ಒಂದಲ್ಲ, ಮೂರು ಬಾರಿ ಎಡವಿದ್ದಾರೆ.

ವೇಗವಾಗಿ ಹತ್ತುತ್ತಿದ್ದ ಅವರು ಮೆಟ್ಟಿಲುಗಳ ಅರ್ಧ ಭಾಗಕ್ಕೆ ಹೋಗುತ್ತಿದ್ದಂತೆ, ಮೊದಲು ಸಣ್ಣ ಪ್ರಮಾಣದಲ್ಲಿ ಎಡವಿದರು. ಅದಾಗಿ ಕೆಲವೇ ಸೆಕೆಂಡ್​​ನಲ್ಲಿ ಇನ್ನೊಮ್ಮೆ ಎಡವಿದರು ಮತ್ತೆ ಮೂರನೇ ಬಾರಿ ಎಡವಿದಾಗ ಅಲ್ಲೇ ಮಂಡಿಯೂರಿ ಬಿದ್ದಿದ್ದಾರೆ. ನಂತರ ಸಾವರಿಸಿಕೊಂಡು ಎದ್ದಿದ್ದಾರೆ. 78ವರ್ಷದ ಜೋ ಬೈಡನ್​ ಹೀಗೆ ಮೂರು ಬಾರಿ ಎಡವಿದ್ದನ್ನು ನೋಡಿದವರಲ್ಲಿ ಹಲವರು ಅವರ ಆರೋಗ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ವಿವಿಧ ಮೀಮ್ಸ್​ಗಳನ್ನು ಮಾಡಿ, ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

ಆರೋಗ್ಯವಾಗಿಯೇ ಇದ್ದಾರೆ..
ಇನ್ನು ಜೋ ಬೈಡನ್ ಮೂರು ಬಾರಿ ಎಡವಿದ್ದರಿಂದ ಅವರ ಆರೋಗ್ಯದ ಬಗ್ಗೆ ಸಹಜವಾಗಿಯೇ ಪ್ರಶ್ನೆ ಎದ್ದಿತ್ತು. ಹೀಗಾಗಿ ಅವರ ಮಾಧ್ಯಮ ಉಪ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೈಡನ್​ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ಆರೋಗ್ಯ ಚೆನ್ನಾಗಿಯೇ ಇದೆ ಎಂದು ಹೇಳಿದ್ದಾರೆ. ಜೋ ಬೈಡನ್​ ವಿಮಾನಗಳ ಮೆಟ್ಟಿಲೇರುತ್ತಿರುವಾಗ ತುಂಬ ಗಾಳಿ ಬೀಸುತ್ತಿತ್ತು. ಹಾಗಾಗಿ ಅವರಿಗೆ ಸಮತೋಲನ ತಪ್ಪುತ್ತಿತ್ತು ಎಂದೂ ತಿಳಿಸಿದ್ದಾರೆ. ಇನ್ನು ಜೋ ಬೈಡನ್​ ಕೂಡ ಇಷ್ಟಕ್ಕಾಗಿ ಅಟ್ಲಾಂಟಾ ಪ್ರವಾಸವನ್ನು ಮೊಟಕುಗೊಳಿಸಲಿಲ್ಲ.

 

Source:TV9Kannada