ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಸಂಸದ ಗೌತಮ್​ ಗಂಭೀರ್​

Jan 21, 2021

ರಾಮ ಮಂದಿರ ನಿರ್ಮಾಣಕ್ಕೆ ದೆಣಿಗೆ ಸಂಗ್ರಹ ಮಾಡುವ ಆಂದೋಲನ ಆರಂಭಿಸಿದೆ. ಇದರ ಭಾಗವಾಗಿ ಗೌತಮ್​ ಗಂಭೀರ್​ ಒಂದು ಕೋಟಿ ನೀಡಿದ್ದಾರೆ.

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸೆಲೆಬ್ರಿಟಿಗಳು ದೇಣಿಗೆ ನೀಡುತ್ತಿದ್ದಾರೆ. ಇತ್ತೀಚೆಗೆ, ನಟ ಅಕ್ಷಯ್​ ಕುಮಾರ್ ರಾಮ ಮಂದಿರ ನಿರ್ಮಾಣಕ್ಕೆ ಕೈಲಾದಷ್ಟು ಹಣ ನೀಡುವಂತೆ ಅಭಿಮಾನಿಗಳ ಬಳಿ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್​ ಗಂಭೀರ್​ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಲು ಒಂದು ಕೋಟಿ ರೂಪಾಯಿ ನೀಡಿ ಮಾದರಿಯಾಗಿದ್ದಾರೆ.

ರಾಮ ಮಂದಿರ ನಿರ್ಮಾಣ ಭಾರತೀಯರ ಕನಸು. ಬಹು ವರ್ಷಗಳ ಈ ವಿವಾದ ಕೊನೆಗೊಂಡಿದೆ. ಮಂದಿರ ನಿರ್ಮಾಣಕ್ಕೆ ನನ್ನ ಹಾಗೂ ನನ್ನ ಕುಟುಂಬದಿಂದ ಸಣ್ಣ ಕೊಡುಗೆ ಎಂದು ಗೌತಮ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುವ ಆಂದೋಲನ ಆರಂಭಿಸಿದೆ. ಇದರ ಭಾಗವಾಗಿ ಗೌತಮ್​ ಗಂಭೀರ್​ ಒಂದು ಕೋಟಿ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ದೇಶದ 5,25,000 ಗ್ರಾಮಗಳಲ್ಲಿ ಹಣ ಸಂಗ್ರಹ ಮಾಡುವ ಕಾರ್ಯ ಆರಂಭಗೊಂಡಿದೆ. ಜನವರಿ 15ರಿಂದ ಫೆಬ್ರವರಿ 27ರ ವರೆಗೆ ಹಣ ಸಂಗ್ರಹಣೆ ಕಾರ್ಯ ನಡೆಯಲಿದೆ.

Source: TV9Kannada