ರಾಜ್ಯ ಬಜೆಟ್ 2021: ವಿಶ್ವ ಮಹಿಳಾ ದಿನಾಚರಣೆಯಂದೇ ಮಹಿಳೆಯರಿಗೆ ಭರ್ಜರಿ ಗಿಫ್ಟ್

Mar 8, 2021

ಬೆಂಗಳೂರು, (ಮಾ.08): ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು (ಸೋಮವಾರ) 2021ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಮಂಡನೆಯ ಆರಂಭದಲ್ಲಿ ವಿಶ್ವ ಮಹಿಳಾ ದಿನಾಚರಣೆಯಂದೇ ರಾಜ್ಯದ ಮಹಿಳೆಯರ ಕುರಿತಂತೆ ಮೊದಲು ಘೋಷಣೆಗಳನ್ನು ಮಾಡಿದಂತ ಸಿಎಂ ಯಡಿಯೂರಪ್ಪ ಅವರು,ತಮ್ಮ ಬಜೆಟ್‌ನಲ್ಲಿ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.

ಬಜೆಟ್‌ಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದ ಶುಭಾಶಯಗಳು ತಿಳಿಸಿದ ಬಿಸ್‌ವೈ, ಬಜೆಟ್‌ನಲ್ಲಿ ವಿಶೇಷವಾಗಿ ಮಹಿಳೆಯರಿಗೆ ಆದ್ಯತೆ ನೀಡಿದ್ದೇವೆ. ಬಜೆಟ್ ಅಂಗವಾಗಿ ಸಚಿವ ಸಂಪುಟದ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಉತ್ತಮ ಬಜೆಟ್ ಮಂಡಿಸುತ್ತೇವೆ ಎಂದು ಹೇಳಿದ್ದರು. ಅದರಂತೆ ಮಹಿಳೆಯರಿಗೆ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ.

ಮಹಿಳೆಯರಿಗೆ ಸಿಎಂ ಕೊಟ್ಟ ಕೊಡುಗೆಗಳು

ಸ್ವ ಉದ್ಯೋಗದ ಮೂಲಕ ರಾಜ್ಯದಲ್ಲಿ, 60 ಸಾವಿರ ಮಹಿಳೆಯರಿಗೆ ಉದ್ಯೋಗ ಹಪ್ಪಳ, ಉಪ್ಪಿನ ಕಾಯಿಕಾಯಿ ತಯಾರಕರಿಗೆ ಆನ್ ಲೈನ್ ಮಾರುಕಟ್ಟೆ ಸೌಲಭ್ಯ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ದರದ ಬಸ್ ಪಾಸ್. ‘ವನಿತಾ ಸಂಗಾತಿ’ ಬಸ್ ಪಾಸ್ ಹೆಸರಿನಲ್ಲಿ ಈ ಯೋಜನೆ ಜಾರಿ. 2 ಕೋಟಿ ರೂಪಾಯಿಗಳ ತನಕ ಮಹಿಳೆಯರಿಗೆ ಸಾಲ ಶೇ 4ರ ಬಡ್ಡಿದರದಲ್ಲಿ  ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ 20ರಷ್ಟು ಮೀಸಲಾತಿ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆ, ಮಹಿಳಾ ಉದ್ಯೋಗಿಗಳಿಗೆ 6 ತಿಂಗಳು ರಜೆ.

Source: Suvarna News