ಯದುವೀರ್ ಒಡೆಯರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ

Feb 5, 2021

ಮೈಸೂರು ರಾಜವಂಶಸ್ಥ ಯದುವೀರ್, ನನ್ನ ಹೆಸರು ಹಾಗು  ಭಾವಚಿತ್ರವನ್ನು ಬಳಸಿ ಯಾರೋ ಖಾತೆ ತೆರೆದಿದ್ದಾರೆ ಎಂದು ಟಿವಿ9ಗೆ ಸ್ಪಷ್ಟಪಡಿಸಿದ್ದಾರೆ.

ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯನ್ನು ತೆರೆದಿದ್ದು, ಯದುವೀರ್ ಈ ಬಗ್ಗೆ ದೂರನ್ನು ದಾಖಲಿಸಿದ್ದಾರೆ.

ಟ್ವಿಟ್ಟರ್ ಖಾತೆ ನನ್ನದಲ್ಲ ಎಂದು ಟಿವಿ9ಗೆ ಸ್ಪಷ್ಟಪಡಿಸಿದ ಮೈಸೂರು ರಾಜವಂಶಸ್ಥ ಯದುವೀರ್, ನನ್ನ ಹೆಸರು ಹಾಗು  ಭಾವಚಿತ್ರವನ್ನು ಬಳಸಿ ಯಾರೋ ಖಾತೆ ತೆರೆದಿದ್ದಾರೆ. ಅವರೇ ಪೋಸ್ಟ್ ಸಹಾ ಮಾಡಿರುತ್ತಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ನಾನು ದೂರನ್ನು ದಾಖಲಿಸಿದ್ದೇನೆ ಎಂದರು. ಪದೇ ಪದೇ ಈ ರೀತಿ ನಕಲಿ ಖಾತೆ ಸೃಷ್ಟಿ ಮಾಡಲಾಗುತ್ತಿದೆ. ಇದನ್ನು ಯಾರು ನಂಬಬೇಡಿ ಎಂದು ಟಿವಿ9 ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದರು.

Source:TV9Kannada