ಮೈಸೂರು ಮೆಡಿಕಲ್ ಕಾಲೇಜು ಸ್ಥಾನಿಕ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ಮೈಸೂರು,ನ.29(ಆರ್‍ಕೆ)-ಬಾಕಿ ಇರುವ ಕೋವಿಡ್ ಭತ್ಯೆ ಪಾವತಿಸಬೇಕೆಂದು ಆಗ್ರಹಿಸಿ ಮೈಸೂರು ಸೇರಿದಂತೆ ರಾಜ್ಯದಾ ದ್ಯಂತ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾನಿಕ ವೈದ್ಯರು ಇಂದಿನಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಕರ್ನಾಟಕ ಅಸೋಸಿ ಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಏಂಖಆ) ಕರೆ ನೀಡಿರುವ ಕಾರಣ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸೇರಿ ದಂತೆ ಎಲ್ಲಾ ಸರ್ಕಾರಿ ಮೆಡಿ ಕಲ್ ಕಾಲೇಜುಗಳ ಹೌಸ್ ಸರ್ಜನ್ಸ್, ಪೋಸ್ಟ್ ಗ್ರಾಜು ಯೇಟ್ಸ್ ಹಾಗೂ ರೆಸಿಡೆಂಟ್ ವೈದ್ಯರುಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಮೈಸೂರಿನ ಕೆ.ಆರ್. ಆಸ್ಪತ್ರೆ ಆವರಣದ ಮೆಡಿಕಲ್ ಸೂಪರಿಂ ಟೆಂಡೆಂಟ್ ಕಚೇರಿ ಎದುರು ರೆಸಿಡೆಂಟ್ ಡಾಕ್ಟರ್‍ಗಳು ಇಂದು ಪ್ರತಿ ಭಟನಾ ಧರಣಿ ನಡೆಸಿದರು. ಕಳೆದ ಬಾರಿ ಕೋವಿಡ್ ಸಂಕಷ್ಟ ಸಂದರ್ಭ ದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಭತ್ಯೆ ನೀಡುವು ದಾಗಿ ಭರವಸೆ ನೀಡಿದ ಕಾಲೇಜು ಆಡಳಿತವು ಹಣ ಪಾವತಿಸಿಲ್ಲ ಎಂದು ಧರಣಿ ನಿರತರು ಆರೋಪಿಸಿದರು. ರಾಜ್ಯಾದಾದ್ಯಂತ ಏಕರೂಪದ ಶೈಕ್ಷಣಿಕ ಶುಲ್ಕ ನಿಗದಿ ಮಾಡಬೇಕು, ಪೋಸ್ಟ್ ಗ್ಯಾಜುಯೇಟ್‍ಗಳಿಗೆ ಸ್ಟೈಫಂಡ್ ನೀಡಬೇಕೆಂಬುದೂ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸ ಬೇಕೆಂದು ಒತ್ತಾಯಿಸಿರುವ ಮುಷ್ಕರ ನಿರತರು, ತಪ್ಪಿದಲ್ಲಿ ಮುಂದೆ ಕೋವಿಡ್-19 3ನೇ ಅಲೆ ಬಂದಲ್ಲಿ ತಾವು ಕರ್ತವ್ಯ ಭಹಿಷ್ಕರಿಸುವುದಾಗಿಯೂ ಎಚ್ಚರಿಕೆ ನೀಡಿದರು.
ಕಳೆದ ಅಕ್ಟೋಬರ್ ಮತ್ತು ನವೆಂಬರ್ ಮಾಹೆಯಲ್ಲಿ ಮುಷ್ಕರ ನಡೆಸಿದಾಗ ನಮ್ಮ ಬೇಡಿಕೆ ಗಳನ್ನು 10 ದಿನದೊಳಗಾಗಿ ಈಡೇರಿಸುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದರು. ಆದರೆ ಈವರೆಗೆ ಸಾಕಾರವಾಗಲಿಲ್ಲ ಎಂದು ಧರಣಿ ನಿರತರು ಆಪಾದಿಸಿದ್ದಾರೆ. ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ, ಹೊರ ರೋಗಿ, ಒಳರೋಗಿ, ಓಟಿ, ಮೈನರ್ ಓಟಿ, ರಾತ್ರಿ ಪಾಳಿ ಕರ್ತವ್ಯ ಕ್ಯಾಸುಯಾ ಲಿಟಿ ವಿಭಾಗದ ಚಿಕಿತ್ಸೆಗಳನ್ನು ಭಹಿಷ್ಕರಿಸಲಾಗಿದ್ದು, ಬಾಕಿ ಇರುವ ಕೋವಿಡ್ ಸೇವಾ ಭತ್ಯೆ ಪಾವತಿಸುವವರೆಗೂ ತೀವ್ರ ಮುಷ್ಕರ ಕೈಬಿಡುವುದಿಲ್ಲ ಎಂದೂ ಪ್ರತಿಭಟನಾ ನಿರತರು ತಿಳಿಸಿದ್ದಾರೆ. ಇದರಿಂದಾಗಿ ಕೆ.ಆರ್. ಆಸ್ಪತ್ರೆ ಚಲುವಾಂಬ, ಪಿಕೆಟಿಬಿ ಆಸ್ಪತ್ರೆಗಳ ಹೊರರೋಗಿ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳ ಚಿಕಿತ್ಸೆ ಮೇಲೆ ಪರಿಣಾಮ ಉಂಟಾಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ರೋಗಿಗಳಿಗೆ ತೊಂದರೆಯಾಗಲಿದೆ.
Source: mysoremithra