ಮೈಸೂರಿನಲ್ಲಿ ಈವರೆಗೆ ನಾಲ್ವರು ಡೆಲ್ಟಾ ಸೋಂಕಿತರು ಪತ್ತೆ, ಸಾರ್ವಜನಿಕರು ಆತಂಕಪಡುವ ಅವಶ್ಯಕತೆಯಿಲ್ಲ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್

Jun 24, 2021

ಯಾರಲ್ಲೂ ಗಂಭೀರ ಸ್ವರೂಪದ ರೋಗಲಕ್ಷಣಗಳು ಕಂಡು ಬಂದಿಲ್ಲ. ಸದ್ಯ ಈ ಎಲ್ಲಾ ಸೋಂಕಿತರು ಗುಣಮುಖರಾಗಿದ್ದಾರೆ. ಹೋಂ ಐಸೋಲೇಷನ್​ನಲ್ಲಿ ಎಲ್ಲ ಕೊವಿಡ್ ಸೋಂಕಿತರಿಗೂ ವೈದ್ಯಕೀಯ ಶಿಷ್ಟಾಚಾರ ಪಾಲನೆ‌ಮಾಡಲಾಗಿದೆ. : ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್

ಮೈಸೂರು: ಜಿಲ್ಲೆಯಲ್ಲಿ ನಾಲ್ವರಿಗೆ ಡೆಲ್ಟಾ ಪ್ರಭೇದ ಪತ್ತೆಯಾಗಿದೆ. ಇವುಗಳಲ್ಲಿ 3 ಡೆಲ್ಟಾ ಸ್ಟ್ರೇನ್ ವೇರಿಯಂಟ್,‌ 1 ಒಂದು ಡೆಲ್ಟಾ ಪ್ಲಸ್ ಪ್ರಬೇಧ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್ ಮಾಹಿತಿ ನೀಡಿದ್ದಾರೆ. ಯಾರಲ್ಲೂ ಗಂಭೀರ ಸ್ವರೂಪದ ರೋಗಲಕ್ಷಣಗಳು ಕಂಡು ಬಂದಿಲ್ಲ. ಸದ್ಯ ಈ ಎಲ್ಲಾ ಸೋಂಕಿತರು ಗುಣಮುಖರಾಗಿದ್ದಾರೆ. ಹೋಂ ಐಸೋಲೇಷನ್​ನಲ್ಲಿ ಎಲ್ಲ ಕೊವಿಡ್ ಸೋಂಕಿತರಿಗೂ ವೈದ್ಯಕೀಯ ಶಿಷ್ಟಾಚಾರ ಪಾಲನೆ‌ಮಾಡಲಾಗಿದೆ. ಈ ವಿಚಾರವಾಗಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಅವರು ತಿಳಿಸಿದ್ದಾರೆ.

ರೂಪಾಂತರಿ ವೈರಸ್ ಡೆಲ್ಟಾ ಪ್ಲಸ್ ದಾಳಿಗೆ ಭಾರತದಲ್ಲಿ ಮೊದಲ ಬಲಿಯಾಗಿದೆ. ಜಿನೋಮ್ ಟೆಸ್ಟ್ ವರದಿ ಬರುವುದಕ್ಕೂ ಮುನ್ನವೇ ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ಮಹಿಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಜೂನ್ 23ರಂದು ಬುಧವಾರ ವರದಿಯಾಗಿದೆ. ಉಜ್ಜೈನಿಯಲ್ಲಿ ಸಂಗ್ರಹಿಸಿರುವ ಸ್ಯಾಂಪಲ್ನಲ್ಲಿ ಕೊರೊನಾ ಸೋಂಕಿತೆಗೆ ಡೆಲ್ಟಾ ಪ್ಲಸ್ ಪ್ರಭೇದ ತಗುಲಿರುವುದು ಬಹಿರಂಗವಾಗಿದೆ.

ಭಾರತದಲ್ಲಿ ಎಷ್ಟು ಕೇಸ್ ಬಂದಿವೆ?
ಭಾರತದಲ್ಲಿ ಇದುವರೆಗೂ 40 ಡೆಲ್ಟಾ ಪ್ಲಸ್ ಪ್ರಭೇದದ ಕೇಸ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 5, ಕೇರಳದಲ್ಲಿ 3, ಆಂಧ್ರ, ಜಮ್ಮು ಕಾಶ್ಮೀರದಲ್ಲಿ ತಲಾ 1 ಕೇಸ್ ಪತ್ತೆಯಾಗಿವೆ. ಹಾಗೂ ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಪತ್ತೆಯಾಗಿವೆ.

ಡೆಲ್ಟಾ ಪ್ಲಸ್ ನಿಜಕ್ಕೂ ಎಷ್ಟು ಆತಂಕಕಾರಿ? ಗುಣಲಕ್ಷಣಗಳೇನು?
ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಅನ್ನು ಕೇಂದ್ರ ಸರ್ಕಾರ ಕಳವಳಕಾರಿ ಪ್ರಭೇದ ಎಂದು ಹೇಳಿದೆ. ಕಳವಳಕಾರಿ ಪ್ರಭೇದದ ವೈರಸ್ ಮೇಲೆ ತೀವ್ರ ನಿಗಾ ವಹಿಸಲಾಗುತ್ತೆ. ಡೆಲ್ಟಾ ಪ್ಲಸ್ ಪ್ರಭೇದ ವೇಗವಾಗಿ ಹರಡುತ್ತೆ ಎಂದು ಕೇಂದ್ರ ಹೇಳಿದೆ. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ಶ್ವಾಸಕೋಶಕ್ಕೆ ಹಾನಿ ಮಾಡಬಲ್ಲದು. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ವಿರುದ್ಧ ಮಾನೋಕ್ಲೋನಲ್ ಆ್ಯಂಟಿಬಾಡಿ ಕಾಕ್ ಟೈಲ್ ಪರಿಣಾಮಕಾರಿ ಅಲ್ಲ. ಡೆಲ್ಟಾ ಪ್ಲಸ್ ಪ್ರಭೇದದ ವೈರಸ್ ದೇಹದಲ್ಲಿರುವ ವೈರಸ್ ವಿರುದ್ಧದ ಪ್ರತಿಕಾಯಗಳು, ಲಸಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದೆ.

Source: TV9 News kannada