ಮುಂದಿನ ದಿನಗಳಲ್ಲಿ ಭಾರತ-ಅಮೆರಿಕ ಸೇನಾ ಸಹಭಾಗಿತ್ವ ಹೆಚ್ಚಲಿದೆ; ರಾಜನಾಥ್ ಸಿಂಗ್

Mar 20, 2021

India US Relationship: ಸೇನಾ ಕ್ಷೇತ್ರದಲ್ಲಿ ಭಾರತದ ಉದಾರವಾದಿ ವಿದೇಶಿ ಬಂಡವಾಳ ಹೂಡಿಕೆ ನೀತಿಯನ್ನು ಅಮೆರಿಕ ಸದುಪಯೋಗಪಡಿಸಿಕೊಳ್ಳಲಿದೆ. ಎರಡೂ ದೇಶಗಳು ಸೇನಾ ಸಹಭಾಗಿತ್ವವನ್ನು ವರ್ಧಿಸಿಕೊಳ್ಳಲಿವೆ.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್

ದೆಹಲಿ: ವಿಶ್ವದ ಎರಡು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕ ದೇಶಗಳು ಸೇನಾ ಸಹಭಾಗಿತ್ವವನ್ನು ವರ್ಧಿಸಿಕೊಳ್ಳಲಿವೆ. ಇಂಡೋ ಫೆಸಿಫಿಕ್ ಸಮುದ್ರ ವಲಯದ ರಕ್ಷಣೆಗೆ ಅಗತ್ಯವಿರುವ ಸೇನಾ ಚಟುವಟಿಕೆಗಳನ್ನು ಜಂಟಿಯಾಗಿ ನಡೆಸಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೇನಾ ಕ್ಷೇತ್ರದಲ್ಲಿ ಭಾರತದ ಉದಾರವಾದಿ ವಿದೇಶಿ ಬಂಡವಾಳ ಹೂಡಿಕೆ ನೀತಿಯನ್ನು ಅಮೆರಿಕ ಸದುಪಯೋಗಪಡಿಸಿಕೊಳ್ಳಲಿದೆ. ಭಾರತಕ್ಕೆ ಅಮೆರಿಕದ ಭೌಗೋಳಿಕತೆಗೆ ಸಂಬಂಧಿಸಿದ ಮಾಹಿತಿ ದೊರೆಯಲಿದೆ. ಅಲ್ಲದೇ ಅಮೆರಿಕ ನಿರ್ಮಿಸುವ ಶಸ್ತ್ರಾಸ್ತ್ರಗಳ ಕುರಿತು ಭಾರತಕ್ಕೆ ಲಾಭವಾಗಬಲ್ಲ ಮಾಹಿತಿ ದೊರೆಯಲಿದೆ. ಇಂತಹ ಒಟ್ಟು ಮೂರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.

ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್, ರಕ್ಷಣಾ ಕಾರ್ಯದರ್ಶಿಯಾಗಿ ಭಾರತಕ್ಕೆ ಮೊದಲ ಭೇಟಿ ನೀಡುತ್ತಿದ್ದಾರೆ. ಆಸ್ಟಿನ್ ಮೂರು ದೇಶಗಳ ಪ್ರವಾಸ ಕೈಗೊಂಡಿದ್ದು, ಕೊನೆಯದಾಗಿ ಮಾರ್ಚ್ 19 ರಂದು ಭಾರತಕ್ಕೆ ಆಗಮಿಸಿದ್ದಾರೆ. ಜಪಾನ್ ಹಾಗೂ ದಕ್ಷಿಣ ಕೊರಿಯಾ ಭೇಟಿಯ ಬಳಿಕ ಲಾಯ್ಡ್ ಜೇಮ್ಸ್ ಆಸ್ಟಿನ್ ಭಾರತಕ್ಕೆ ಆಗಮಿಸಿದ್ದಾರೆ. ಭಾರತ ಹಾಗೂ ಅಮೆರಿಕಾ ಸಂಬಂಧ ಬಲಗೊಳಿಸುವ ಜೊತೆಗೆ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಸಹಕಾರ ಹೆಚ್ಚಿಸುವುದು, ಪೂರ್ವ ಲಡಾಖ್​ನಲ್ಲಿ ಚೀನಾ ತೋರಿರುವ ನಡೆ, ಭಯೋತ್ಪಾದನೆ ಹಾಗೂ ಅಫ್ಘಾನ್ ಶಾಂತಿಯ ಸವಾಲು ಇತ್ಯಾದಿ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಭಾರತೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆ ಆಸ್ಟಿನ್​ ಚರ್ಚಿಸಲಿದ್ದಾರೆ.

Source:TV9Kannada