ಭಾರ​ತ​ಲ್ಲಿ 6.8 ಕೋಟಿ ಟನ್‌​ ಆಹಾರ ವ್ಯರ್ಥ!!

Mar 6, 2021

ವಿಶ್ವ​ಸಂಸ್ಥೆ(ಮಾ.06): 2019ರಲ್ಲಿ ವಿಶ್ವಾ​ದ್ಯಂತ ಒಟ್ಟಾರೆ 93 ಕೋಟಿ ಟನ್‌​ನಷ್ಟುಪ್ರಮಾ​ಣದ ಆಹಾರ ವ್ಯರ್ಥವಾಗಿದೆ ಎಂದು ವಿಶ್ವ​ಸಂಸ್ಥೆ ವರ​ದಿಯೊಂದು ಹೇಳಿದೆ. ವಿಶ್ವ​ಸಂಸ್ಥೆಯ ಪರಿ​ಸರ ಕಾರ್ಯ​ಕ್ರ​ಮದ ಆಹಾ​ರ ಪೋಲು ಸೂಚ್ಯಂಕ ವರದಿ-2021ರ ಅನ್ವಯ ಭಾರ​ತ​ದಲ್ಲೂ 1 ವರ್ಷ​ದಲ್ಲಿ 6.8 ಕೋಟಿ ಟನ್‌​ನಷ್ಟುಪ್ರಮಾ​ಣದ ಆಹಾರ ಉಪ​ಯೋ​ಗಕ್ಕೆ ಬಾರದೆ ಹಾಳಾ​ಗಿದೆ ಎಂದು ಉಲ್ಲೇಖಿ​ಸ​ಲಾ​ಗಿದೆ.

ಇದ​ರಲ್ಲಿ ಶೇ.69ರಷ್ಟುಪ್ರಮಾ​ಣದ ಆಹಾರವು ಮನೆ​ಗ​ಳಿಂದ ಆದರೆ, ಶೇ.26ರಷ್ಟುಆಹಾರ ಸೇವೆ ಕಲ್ಪಿ​ಸುವ ಹೋಟೆಲ್‌ ಸೇರಿ ಇನ್ನಿ​ತರ ಸಂಸ್ಥೆ​ಗ​ಳಿಂದ ಮತ್ತು ಶೇ.13ರಷ್ಟುಆಹಾರ ನಿರು​ಪ​ಯೋ​ಗವು ಚಿಲ್ಲರೆ ಮಳಿ​ಗ​ಳಿಂದ ಪೋಲಾಗುತ್ತಿದೆ. ತನ್ಮೂ​ಲಕ ಜಾಗ​ತಿಕ ಆಹಾರ ಉತ್ಪಾ​ದ​ನೆಯ ಶೇ.17ರಷ್ಟು ಪ್ರಮಾ​ಣದ ಆಹಾ​ರವು ವ್ಯರ್ಥವಾಗುತ್ತಿದೆ ಎಂದು ತಿಳಿ​ಸ​ಲಾ​ಗಿದೆ.

ವರ್ಷಕ್ಕೆ 6,87,60,163 ಟನ್‌​ನಷ್ಟುಆಹಾರ ವ್ಯರ್ಥವಾಗಿರುವ ಭಾರ​ತ​ದಲ್ಲಿ ಪ್ರತಿ​ಯೊಬ್ಬ ಭಾರ​ತೀಯನಿಂದ ವರ್ಷಕ್ಕೆ ಸರಾ​ಸರಿ 50 ಕೇಜಿ​ಯಷ್ಟುಆಹಾ​ರ​ ನಿರು​ಪ​ಯು​ಕ್ತ​ವಾ​ಗು​ತ್ತಿದೆ. ಆದರೆ ಅಮೆ​ರಿ​ಕ​ದ ಪ್ರಜೆ​ಯೊಬ್ಬ ವರ್ಷಕ್ಕೆ 59 ಕೇಜಿ​ ಮತ್ತು ಚೀನಾ​ದಲ್ಲಿ 64 ಕೇಜಿಯಷ್ಟುಆಹಾ​ರ​ವನ್ನು ವ್ಯರ್ಥ ಮಾಡು​ತ್ತಾನೆ. ಹೀಗಾಗಿ ಹವಾ​ಮಾನ ವೈಪ​ರಿ​ತ್ಯದ ವಿರುದ್ಧ ನಾವು ಗಂಭೀರ ಕ್ರಮ ವಹಿ​ಸ​ಬೇ​ಕಾ​ದರೆ ಮೊದಲು ಆಹಾ​ರದ ವ್ಯರ್ಥ ತಡೆ​ಯ​ಬೇಕು ಎಂದು ವಿಶ್ವ​ಸಂಸ್ಥೆಯ ಪರಿ​ಸರ ವಿಭಾ​ಗ​ದ ಕಾರ್ಯ​ಕಾರಿ ನಿರ್ದೇ​ಶಕ ಪ್ರತಿ​ಪಾ​ದಿ​ಸಿ​ದ್ದಾರೆ.

Source: Suvarna News