ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಕಕಾಲಕ್ಕೆ ತಾಯಿ-ಮಕ್ಕಳ ದರ್ಶನ, ಸಫಾರಿಗೆ ಬಂದವರು ಫುಲ್ ಖುಷ್

Aug 31, 2021

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಹುಲಿಗಳನ್ನು ನೋಡಲೆಂದೇ ಪ್ರವಾಸಿಗರು ಸಫಾರಿ ಕಡೆ ಮುಖ ಮಾಡುತ್ತಾರೆ. ಆದರೆ, ಕೆಲವೊಮ್ಮೆ ಸಫಾರಿಗೆ ಬಂದವರಿಗೆ ದರ್ಶನ ಭಾಗ್ಯ ಕರುಣಿಸದೇ ಹುಲಿಗಳು ಮರೆಯಾಗಿರುತ್ತವೆ. ಪ್ರವಾಸಿಗರು ನಿರಾಶೆಯಿಂದ ತೆರಳಿದಾ ಅದೆಷ್ಟೂ ಸಂಗತಿಗಳು ನಡೆದಿವೆ. ಆದರೆ, ಇಂದು ಸಫಾರಿಗೆ ತೆರಳಿದ ಪ್ರವಾಸಿಗರ ಕಣ್ಣಿಗೆ ಮೂರು ಹುಲಿಗಳ ದರ್ಶನವಾಗಿದೆ.

ಬಿಳಿಗಿರಿ ರಂಗನಾಥ ಮೀಸಲು ಹುಲಿ ಸಂರಕ್ಷಿತಾರಣ್ಯದಲ್ಲಿ ಒಟ್ಟೊಟ್ಟಿಗೆ ಮೂರು ಹುಲಿಗಳು ಸಫಾರಿಗೆ ಬಂದವರ ಕಣ್ಣಿಗೆ ಬಿದ್ದಿವೆ. ಒಂದು ತಾಯಿ ಎರಡು ಮರಿಗಳನ್ನ ನೋಡಿ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಸಫಾರಿ ರಸ್ತೆಯಲ್ಲಿ ನಿಂತಿದ್ದ ಮಳೆಯ ನೀರನ್ನು ತಾಯಿ ಹುಲಿ ಕುಡಿದ ದೃಶ್ಯ ರೋಚಕವಾಗಿದ್ದು ಪ್ರವಾಸಿಕರು ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ಸೆರೆ ಹಿಡಿದಿದ್ದಾರೆ.

ಹುಲಿಗಳ ಚಲನ, ವಲನಗಳನ್ನು ಕಣ್ತುಂಬಿಸಿಕೊಳ್ಳುವ ಸದಾವಕಾಶ ಪ್ರವಾಸಿಗರಿಗೆ ಇಂದು ಸಿಕ್ಕಿದೆ. ಬಿಆರ್ಟಿ ವನ್ಯಧಾಮದಲ್ಲಿ 50 ಹೆಚ್ಚು ಹೆಚ್ಚು ಹುಲಿಗಳಿವೆ ಎಂದು ಗಣತಿಯಿಂದ ತಿಳಿದಿದೆ. ಆದರೆ, ಸಫಾರಿಗೆ ಬಂದವರಿಗೆ ಆ ಹುಲಿಗಳ ದರ್ಶನ ಸಿಗುವುದು ತುಂಬಾ ವಿರಳ. ಸಿಕ್ಕರೂ ಒಂದು ಹುಲಿ ಮಾತ್ರ. ಪರಿಸ್ಥಿತಿ ಹೀಗಿದ್ದಾಗ ಇಂದು ಸಫಾರಿಗೆ ಹೋದವರಿಗೆ ಮೂರು ಹುಲಿಗಳ ದರ್ಶನ ಸಿಕ್ಕಿದೆ. ಅದರಲ್ಲೂ ಹುಲಿ ಮರಿಗಳನ್ನು ನೋಡಿ ಪ್ರವಾಸಿಗರು ಥ್ರಿಲ್ ಆಗಿದ್ದಾರೆ.

Source:Tv9kannada