ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ ರಾಬರ್ಟ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

Mar 12, 2021

Roberrt First Day Collection: ರಾಬರ್ಟ್​ ವೇಷದಲ್ಲಿ ಚಾಲೆಜಿಂಗ್ ಸ್ಟಾರ್ ಎಂಟ್ರಿಕೊಟ್ಟಿದ್ದಾರೆ. ಸುಂಟರಗಾಳಿಯಂತೆ ದಚ್ಚು ಕಾಲಿಟ್ಟ ಪರಿಗೆ ಥಿಯೇಟರ್​ಗಳಲ್ಲಿ ರಾಜಕಳೆ ಮರುಕುಳಿಸಿದೆ. ಆದ್ರೆ ಒಂದು ದಿನದಲ್ಲಿ ರಾಬರ್ಟ್ ಚಿತ್ರ ಗಳಿಸಿದ್ದೆಷ್ಟು. ಗಾಂಧಿನಗರದ ಮೂಲಗಳ ಪ್ರಕಾರ ಗಾಂಧಿನಗರದ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಾಚಾರ ಏನಾಗಿದೆ ಇಲ್ಲಿ ತಿಳಿಯಿರಿ.

ಕುಣಿಯೋದೇನು.. ಕೇಕೆ ಹಾಕೋದೇನು.. ಪಟಾಕಿ ಹೊಡೆಯೋದೇನು.. ಪರದೆ ಮುಂದೆಯೇ ಪರಾಕ್​ ಹಾಕೋದೇನು.. ಅಭಿಮಾನಿಗಳ ಹವಾಗೆ ಥಿಯೇಟರ್​ಗಳೇ ಅದುರುತ್ತಿವೆ. ಡೊಳ್ಳು, ನಗಾರಿ ಸದ್ದಿಗೆ ದಶದಿಕ್ಕುಗಳ ಕಂಪಿಸ್ತಿವೆ. ಯಾಕಂದ್ರೆ, ರಾಬರ್ಟ್​​ ವೇಷದಲ್ಲಿ ದರ್ಶನ್​​​ ಕೊಟ್ಟ ಕಿಕ್​​​​​​​, ಈ ಮಟ್ಟಿಗೆ ಎಲ್ರನ್ನೂ ತೇಲಿಸಿಬಿಡ್ತು.

ರಾಜ್ಯಾದ್ಯಂತ ರಾಬರ್ಟ್ ಉತ್ಸವ
ಸಾವಿರಾರು ಥಿಯೇಟರ್​​ಗಳಿಗೆ ರಾಬರ್ಟ್ ರೂಪದಲ್ಲಿ ದರ್ಶನ್ ಎಂಟ್ರಿಕೊಟ್ಟಿದ್ದಾರೆ. ಸುಂಟರಗಾಳಿ ಯಂತೆ ದಚ್ಚು ಕಾಲಿಟ್ಟ ಪರಿಗೆ ಥಿಯೇಟರ್​ಗಳಲ್ಲಿ ರಾಜಕಳೆ ಮರುಕುಳಿಸಿದೆ. ಒಂದೂವರೆ ವರ್ಷದಿಂದ ರಾಬರ್ಟ್ ಗಾಗಿ ಕಾದು ಕೂತಿದ್ದ ದರ್ಶನ್ ಸೆಲೆಬ್ರಿಟಿಗಳು ಜೈ ಶ್ರೀರಾಮ್ ಹಾಡು ಶುರುವಾಗ್ತಿದ್ದಂತೆ ಸ್ಕ್ರೀನ್ ಮುಂದೆನೇ ಹುಚ್ಚೆದ್ದು ಕುಣಿದಿದ್ರು. ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ರಾಬರ್ಟ್ ಭಾರಿ ಸದ್ದು ಮಾಡಿತ್ತಿದೆ. ಸಿನಿಮಾ ನೋಡಿದ ಅಭಿಮಾನಿಗಳು 100 ಡೇಸ್ ಪಕ್ಕಾ ಅಂತಿದ್ದಾರೆ.

ಬಾಕ್ಸ್ ಆಫೀಸ್ ಲೆಕ್ಕಾಚಾರ ಶುರು
ಅಂದ‌ಹಾಗೆ ರಾಬರ್ಟ್ ಸಿನಿಮಾದ ಬಾಕ್ಸ್ ಆಫೀಸ್ ಲೆಕ್ಕಾಚಾರ ಈಗ ಶುರುವಾಗಿದೆ. ಸದ್ಯ ಒಂದು ಮಾಹಿತಿ ಪ್ರಕಾರ ರಾಬರ್ಟ್ ಸಿನಿಮಾ ತಯಾರಾಗಿರೋದು 50 ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ಅನ್ನಲಾಗ್ತಿದೆ. ಮೊದಲ ದಿನವೇ 25 ಕೋಟಿ ಕಲೆಕ್ಷನ್

ರಾಬರ್ಟ್ 6000 ಕ್ಕೂ ಹೆಚ್ಚು ಶೋಗಳು ಮೊದಲ ದಿನ ಪ್ರದರ್ಶನ ಕಂಡಿವೆ. ಹೀಗಾಗಿ ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಬುಕ್ ಮೈ ಶೋ ಕಲೆಕ್ಷನ್ ಲೆಕ್ಕಾಚಾರದಲ್ಲಿ 17 ಕೋಟಿಯಾಗಿದೆಯಂತೆ. ಇನ್ನು ಥಿಯೇಟರ್​ನಲ್ಲಿನ ಟಿಕೆಟ್ ಕೌಂಟರ್ ಬಾಕ್ಸ್ ಆಫೀಸ್ ಲೆಕ್ಕ ಬಾಕಿ ಇದೆ. ಹೀಗಾಗಿ ಒಂದು ಅಂದಾಜಿನ ಪ್ರಕಾರ ಮೊದಲ ದಿನಕ್ಕೆ ಬರೊಬ್ಬರಿ 25 ಕೋಟಿ ಆಸುಪಾಸಿನಲ್ಲಿ ಕಲೆಕ್ಷನ್ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ

ಒಟ್ನಲ್ಲಿ, ಕನ್ನಡ, ತೆಲುಗಿನಲ್ಲಿ 1500ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ರಾಬರ್ಟ್​​ ರಿಲೀಸ್​​ ಆಗಿದೆ. ಆಂಧ್ರ ಹಾಗೂ ತೆಲಂಗಾಣದ ಸುಮಾರು 800 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸದ್ಯ ಸಿನಿಮಾಗೆ ಒಳ್ಳೆ ಓಪನಿಂಗ್ ಸಿಕ್ಕಿರೋ ಹಿನ್ನೆಲೆಯಲ್ಲಿ ವೀಕೆಂಡ್ ಮೂಡ್‌ಲ್ಲಿರೋ ಜನ ಥಿಯೇಟರ್‌ಗೆ ಲಗ್ಗೆ ಇಡೋದು ಪಕ್ಕಾ. ಹೀಗಾಗಿ ಇಂದು ಕೂಡ ರಾಬರ್ಟ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಲಿದೆ ಅನ್ನೋ ಲೆಕ್ಕಾಚಾರ ನಡೀತಿದೆ.

ಒಟ್ನಲ್ಲಿ ರಾಬರ್ಟ್ ಸಿನಿಮಾ ನೋಡಿದ ಮಂದಿ ಫುಲ್ ಖುಷಿಯಾಗಿದ್ದಾರೆ. ಅಭಿಮಾನಿಗಳು ದಚ್ಚು ಅವತಾರಕ್ಕೆ ಫಿದಾ ಆಗಿದ್ದು, ರಾಬರ್ಟ್​ಗೆ ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ.

Source:TV9Kannada