ಚಂಡೀಗಢ: ಪಾಕಿಸ್ತಾನದ ಒಳನುಸುಳುಕೋರರನ್ನು (Pakistan Intruder) ಗಡಿ ಭದ್ರತಾ ಪಡೆ (Border Security Force) ಶುಕ್ರವಾರ ಮುಂಜಾನೆ ಪಂಜಾಬ್‌ನ (Punjab) ತರ್ನ್ ತರನ್‌ನ (Tarn Taran) ಭಾರತ-ಪಾಕಿಸ್ತಾನ ಗಡಿಯಲ್ಲಿ ಹೊಡೆದುರುಳಿಸಿದ್ದಾರೆ ಎಂದು ವರದಿಗಳು ತಿಳಿಸಿದೆ.
ಇಂದು ಮುಂಜಾನೆ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಗಡಿ ಭದ್ರತಾ ಬೇಲಿ ಬಳಿ ಕೆಲವು ಅನುಮಾನಾಸ್ಪದ ಚಲನವಲನಗಳು ಕಂಡುಬಂದಿದ್ದು, ಕೂಡಲೇ ಭದ್ರತಾ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಒಳನುಸುಳುಕೋರರು ಗಡಿ ಬೇಲಿಯ ಸಮೀಪಕ್ಕೆ ಬಂದ ತಕ್ಷಣ ಸೈನಿಕರು ಅವರ ಮೇಲೆ ಗುಂಡು ಹಾರಿಸಿದ್ದಾರೆ.
ಆಗಸ್ಟ್ 11ಂದು ಬಿಎಸ್‌ಎಫ್ (BSF) ಪಡೆಗಳು ತರ್ನ್ ತರನ್ ಜಿಲ್ಲೆಯ ಗಡಿ ಗ್ರಾಮದ ತೆಕಲನ್ ಬಳಿ ಪಾಕಿಸ್ತಾನಿ ಒಳನುಸುಳುಕೋರರ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ್ದರು. ಈ ಸಂದರ್ಭ ದುಷ್ಕರ್ಮಿಗಳಿಗೆ ಒಳಬಾರದಂತೆ ಭದ್ರತಾಪಡೆ ಸವಾಲೆಸೆದಿದ್ದು, ಒಳನುಸುಳುಕೋರರು ಅವರ ಮಾತು ಕೇಳದೆ ಬೇಲಿ ನುಗ್ಗಲು ಮುಂದಾಗಿದ್ದಾರೆ ಎಂದು ಬಿಎಸ್‌ಎಫ್ ತಿಳಿಸಿದೆ
ಈ ದುಷ್ಕೃತ್ಯವನ್ನು ತಡೆಯುವ ಸಲುವಾಗಿ ಮತ್ತು ತಮ್ಮ ಆತ್ಮರಕ್ಷಣೆಗಾಗಿ ಬಿಎಸ್‌ಎಫ್ ಪಡೆಗಳು ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿ ಸ್ಥಳದಲ್ಲೇ ಹೊಡೆದುರುಳಿಸಿದ್ದಾರೆ. ಪಾಕಿಸ್ತಾನದ ಇಬ್ಬರು ಅಪರಿಚಿತ ನುಸುಳುಕೋರರನ್ನು ಹತ್ಯೆಗೈದ ಬಿಎಸ್‌ಎಫ್ ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ಗಡಿಯ ಸಮೀಪದಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿತ್ತು.