UNGA: ನಿಮ್ಮ ಅಸ್ತಿತ್ವವನ್ನೇ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ನಿಮಗೆ ಈಗ ಕಾಶ್ಮೀರದ ವಿಚಾರ ಬೇಕಿತ್ತಾ?: ಪಾಕ್ ವಿರುದ್ಧ ಭಾರತ ವಾಗ್ದಾಳಿ
ಒಂದೆಡೆ ಪಾಕಿಸ್ತಾನವು ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ, ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ, ಇದರ ಮಧ್ಯೆಯೇ ಮತ್ತೆ ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ್ದು ಭಾರತವನ್ನು ಕೆರಳುವಂತೆ ಮಾಡಿದೆ.
ಪಾಕಿಸ್ತಾನದ ಪ್ರತಿನಿಧಿ ಏನು ಹೇಳಲಿ ಯಾವುದನ್ನಾದರೂ ನಂಬಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಅದು ಎಂದೂ ಬದಲಾಗದಯ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಹೇಳಿದ್ದಾರೆ. ಈ ನಿಯೋಗದಿಂದ (ಪಾಕಿಸ್ತಾನ ನಿಯೋಗ) ನಾವು ಹೊಸದೇನನ್ನೂ ನಿರೀಕ್ಷಿಸುವುದಿಲ್ಲ ಎಂದು ಭಾರತೀಯ ಪ್ರತಿನಿಧಿ ಹೇಳಿದ್ದಾರೆ.
ಇದು ಭಾರತದ ತಳಹದಿಯಾಗಿರುವ ಭಾರತದ ಜಾತ್ಯತೀತ ರುಜುವಾತುಗಳು ಮತ್ತು ಮೌಲ್ಯಗಳ ವಿರುದ್ಧ ಅಭದ್ರತೆ ಮತ್ತು ದ್ವೇಷದಿಂದ ಸೃಷ್ಟಿಸುತ್ತಿದೆ. ಕಳೆದ ವರ್ಷ ನವೆಂಬರ್ನಲ್ಲಿಯೂ ಸಹ ಕಾಶ್ಮೀರ ವಿಷಯದಲ್ಲಿ ಭಾರತವನ್ನು ಸುತ್ತುವರಿಯಲು ಪಾಕಿಸ್ತಾನ ವಿಫಲ ಪ್ರಯತ್ನ ಮಾಡಿತ್ತು, ಆದರೆ ಭಾರತದ ಪ್ರತಿನಿಧಿಯು ಪಾಕಿಸ್ತಾನದ ಪ್ರಚಾರಕ್ಕೆ ತಕ್ಕ ಉತ್ತರವನ್ನು ನೀಡಿದ್ದರು.
ಪಾಕಿಸ್ತಾನದ ಹತಾಶ ಪ್ರಯತ್ನ ಮತ್ತು ಬಹುಪಕ್ಷೀಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುವ ಕೆಟ್ಟ ಅಭ್ಯಾಸವು ಸಹಾನುಭೂತಿ ಗಳಿಸುವ ಪ್ರಯತ್ನವಾಗಿದೆ ಎಂದು ಎಂದು ಭಾರತ ಹೇಳಿದೆ.
Source: TV9 Kannada