ನಿಧಿ ಸುಬ್ಬಯ್ಯ ಮನೆ ಒಳಗೆ ಮಾಲೆ ಪಟಾಕಿ ಎಸೆದಿದ್ರಂತೆ ಯಶ್​!

Mar 3, 2021

ನಾನು ಅಜ್ಜಿಮನೆಯಲ್ಲಿ ಉಳಿದುಕೊಳ್ಳುತ್ತಿದೆ. ಆ ಮನೆ ಬಳಿ ಅಂದು 4 ಬೈಕ್​ನಲ್ಲಿ 8 ಜನರು ಬಂದಿದ್ದರು. ನಾನು ಮಲಗುವ ಕೋಣೆ ಎಂದುಕೊಂಡು ಮಾಲೆ ಪಟಾಕಿಗೆ ಬೆಂಕಿ ಹಚ್ಚಿ ಎಸೆದಿದ್ದರು.

ಕೆಜೆಎಫ್​ ಸಿನಿಮಾ ತೆರೆಕಂಡ ನಂತರ ಯಶ್​ ಕೇವಲ ಸ್ಯಾಂಡಲ್​ವುಡ್​ ಸ್ಟಾರ್​ ಆಗಿ ಮಾತ್ರ ಉಳಿದಿಲ್ಲ. ಸ್ಯಾಂಡಲ್​ವುಡ್​ ಮಾತ್ರವಲ್ಲದೆ, ಟಾಲಿವುಡ್​, ಬಾಲಿವುಡ್​ನಲ್ಲಿ ಯಶ್​ ಅವರದ್ದೇ ಹವಾ. ಯಶ್​ ಧಾರಾವಾಹಿ ಮೂಲಕ ಸಿನಿಮಾಗೆ ಬಂದಿದ್ದರು. ಇದಕ್ಕೂ ಮೊದಲು ಯಶ್​ ಸಾಮಾನ್ಯ ವ್ಯಕ್ತಿಯಾಗಿದ್ದರು. ಅಚ್ಚರಿ ಎಂದರೆ, ನಿಧಿ ಸುಬ್ಬಯ್ಯ ಮನೆ ಒಳಗೆ ಯಶ್​ ಮಾಲೆ ಪಟಾಕಿ (ಸರ ಪಟಾಕಿ) ಎಸೆದಿದ್ದರಂತೆ!

ಈ ಅಚ್ಚರಿಯ ವಿಚಾರವನ್ನು ನಿಧಿ ಸುಬ್ಬಯ್ಯ ಬಿಗ್​ ಬಾಸ್​ ಮನೆಯಲ್ಲಿ ಹೊರ ಹಾಕಿದ್ದಾರೆ. ಬಿಗ್​ ಬಾಸ್​ 8ರ ಎರಡನೇ ದಿನದ ರಾತ್ರಿ ನಿಧಿ ಮಾತನಾಡುತ್ತಾ, ನಾನೂ ಮೈಸೂರಲ್ಲಿ ಕಾಲೇಜು ಓದುತ್ತಿದ್ದ ದಿನಗಳು. ರೋಸ್​ ಡೇ ದಿನ ನನಗೆ 50-60 ರೋಸ್​ಗಳು ಬರುತ್ತಿದ್ದವು. ನಾನು ಈ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದೆ. ಆದರೆ, ಒಂದು ದಿನ ನನ್ನ ಬಗ್ಗೆ ಯಾರು ಏನು ಅಂದ್ರೋ ಏನೋ ಒಂದು ಅವಘಡ ನಡೆದು ಹೋಗಿತ್ತು.

ನಾನು ಅಜ್ಜಿಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಇವಳಿಗೆ ಪಾಠ ಕಲಿಸಬೇಕು ಎನ್ನುವ ಕಾರಣಕ್ಕೆ ಯಾರೋ ನನ್ನ ಬಗ್ಗೆ ಪಿಟ್ಟಿಂಗ್​ ಇಟ್ಟಿದ್ದರು ಅನಿಸುತ್ತದೆ. ಅಜ್ಜಿ ಮನೆ ಬಳಿ ಅಂದು 4 ಬೈಕ್​ನಲ್ಲಿ 8 ಜನರು ಬಂದಿದ್ದರು. ನಾನು ಮಲಗುವ ಕೋಣೆ ಎಂದುಕೊಂಡು ಮಾಲೆ ಪಟಾಕಿಯನ್ನು ಹಚ್ಚಿ ಎಸೆದಿದ್ದರು. ಆದರೆ, ಅದು ಅಜ್ಜಿಯ ಕೋಣೆ ಆಗಿತ್ತು. ಅಜ್ಜಿ ಕೋಣೆಯ ಕರ್ಟನ್​ ಎಲ್ಲವೂ ಸುಟ್ಟಿ ಹೋಗಿತ್ತು. ಆದರೆ, ಪಟಾಕೆ ಎಸೆದವರು ಯಾರು ಎನ್ನುವುದು ಗೊತ್ತೇ ಆಗಿರಲಿಲ್ಲ ಎಂದರು ನಿಧಿ.

ಓದು ಮುಗಿದ ಮೇಲೆ ನಾನು ನಟನೆಗೆ ಬಂದೆ. ಒಂದು ದಿನ ಒಂದು ವ್ಯಕ್ತಿ ಬಂದು ನಿನ್ನ ಬಳಿ ಕ್ಷಮೆ ಕೇಳಬೇಕು ಎಂದರು. ನಾನು ಅಚ್ಚರಿಗೊಂಡೆ. ಏಕೆ ಕ್ಷಮೆ ಎಂದು ಕೇಳಿದೆ. ಅವರು, ಮಾಲೆ ಪಟಾಕಿ ಘಟನೆ ಹೇಳಿದರು. ಅವರು ಬೇರಾರೂ ಅಲ್ಲ. ಯಶ್​ ಎಂದು ನಿಧಿ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ.

Source: TV9Kannada