ನಾಗರಿಕ ಸೇವಾ ಹುದ್ದೆ ಆಕಾಂಕ್ಷಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ಸಾಧ್ಯವಿಲ್ಲ- ಕೇಂದ್ರದ ಸ್ಪಷ್ಟನೆ
ಕೇಂದ್ರದ ಪ್ರತಿಕ್ರಿಯೆ ಪಡೆದ ನಂತರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 25ಕ್ಕೆ ಮುಂದೂಡಿದೆ. ಅಲ್ಲದೆ, ಈ ಅವಧಿಯಲ್ಲಿ ಅಫಿಡವಿಟ್ ಸಲ್ಲಿಕೆ ಮಾಡುವಂತೆ ಕೇಂದ್ರಕ್ಕೆ ಸುಪ್ರೀಂಕೊರ್ಟ್ ನಿರ್ದೇಶಿಸಿದೆ.
ನವದೆಹಲಿ: ಕೊರೊನಾ ವೈರಸ್ ಕಾರಣ ನೀಡಿ 2020ರ ನಾಗರಿಕ ಸೇವಾ ಆಯೋಗ ಪರೀಕ್ಷೆ ಬರೆಯದವರಿಗೆ ಹೆಚ್ಚುವರಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಕೊರೊನಾ ಕಾರಣದಿಂದ ಅನೇಕರು ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಿರಲಿಲ್ಲ. ಇದೇ ಕಾರಣ ನೀಡಿ ಅನೇಕರು ಮತ್ತೊಂದು ಅವಕಾಶ ಕೇಳಿದ್ದರು. ಈ ಬಗ್ಗೆ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ, ಕೇಂದ್ರದ ಪ್ರತಿಕ್ರಿಯೆ ಕೇಳಿತ್ತು. ಇದಕ್ಕೆ ಉತ್ತರಿಸಿರುವ ಕೇಂದ್ರ ಸರ್ಕಾರ, ನಾವು ಮತ್ತೊಂದು ಅವಕಾಶ ನೀಡಲು ಸಿದ್ಧರಿಲ್ಲ ಎಂದು ಹೇಳಿದೆ.
ಕೇಂದ್ರದ ಪ್ರತಿಕ್ರಿಯೆ ಪಡೆದ ನಂತರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 25ಕ್ಕೆ ಮುಂದೂಡಿದೆ. ಅಲ್ಲದೆ, ಈ ಅವಧಿಯಲ್ಲಿ ಅಫಿಡವಿಟ್ ಸಲ್ಲಿಕೆ ಮಾಡುವಂತೆ ಕೇಂದ್ರಕ್ಕೆ ಸುಪ್ರೀಂಕೊರ್ಟ್ ನಿರ್ದೇಶಿಸಿದೆ.
ಕೆಲ ಕಡೆಗಳಲ್ಲಿ ಪ್ರವಾಹ ಏರ್ಪಟ್ಟಿತ್ತು. ಅಲ್ಲದೆ, ದೇಶಾದ್ಯಂತ ಕೊರೊನಾ ಕಾಣಿಸಿಕೊಂಡಿತ್ತು. ಹೀಗಾಗಿ, ಕಳೆದ ಅಕ್ಟೋಬರ್ 4ರಂದು ನಡೆಯಬೇಕಿದ್ದ ಯುಪಿಎಸ್ಸಿ ನಾಗರಿಕ ಸೇವೆಯ ಪ್ರಿಲಿಮಿನರಿ ಪರೀಕ್ಷೆ ಮುಂದೂಡುವಂತೆ ಕೋರಲಾಗಿತ್ತು. ಆದರೆ, ಸರ್ಕಾರ ಈ ಮನವಿ ತಿರಸ್ಕರಿಸಿತ್ತು.
Source: TV9Kannada