ದಸರಾ ತಯಾರಿ- ಸೆ.8ರಂದು ಮೈಸೂರಿನಲ್ಲಿ ಜನಪ್ರತಿನಿಧಿಗಳ ಸಭೆ

Sep 6, 2021

ಈ ಕುರಿತು ಮಾಹಿತಿ ನೀಡಿದ ಅವರು, ಕೊರೊನಾ 3ನೇ ಅಲೆ ಎದುರಾಗಬಹುದು ಎಂಬ ಭೀತಿಯಿಂದ ಈ ಬಾರಿಯೂ ಮೈಸೂರು ದಸರಾವನ್ನು ಸರಳವಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಮೈಸೂರು ದಸರಾಗೆ 5 ಕೊಟಿ ರೂ. ಅನುದಾನ ಕೇಳಲಾಗಿತ್ತು. ಶ್ರೀರಂಗಪಟ್ಟಣ ಮತ್ತು ಚಾಮರಾಜನಗರ ದಸರಾಗೂ ಸೇರಿಸಿ ಮುಖ್ಯಮಂತ್ರಿಗಳು 6 ಕೋಟಿಯನ್ನು ನೀಡಿದ್ದಾರೆ ಎಂದು ಹೇಳಿದರು.

ಈ ಬಾರಿಯ ದಸರಾ ಉದ್ಘಾಟಕರ ವಿಷಯದಲ್ಲಿ ಮುಖ್ಯಮಂತ್ರಿಗಳೇ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ನಾವು ಯಾವುದೇ ಉದ್ಘಾಟಕರ ಹೆಸರನ್ನು ಸೂಚಿಸಿಲ್ಲ. ಹೀಗಾಗಿ ದಸರಾ ಉದ್ಘಾಟಕರು ಯಾರೆಂದು ಮುಖ್ಯಮಂತ್ರಿಗಳೇ ತಿಳಿಸಲಿದ್ದಾರೆ. ಕೋವಿಡ್ 3ನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ಮಾಹಿತಿಯನ್ನು ತಜ್ಞರು ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎಷ್ಟು ಜನರಿಗೆ ಪ್ರವೇಶ ನೀಡಬೇಕು ಎಂಬುದನ್ನು ಸದ್ಯದಲ್ಲೆ ತಿಳಿಸಲಾಗುವುದು ಎಂದರು.

ದಸರಾ ಉದ್ಘಾಟನೆಯು ಎಂದಿನಂತೆ ಚಾಮುಂಡಿ ಬೆಟ್ಟದಲ್ಲಿ ಆಗುವುದು. ಆದರೆ ಜಂಬೂ ಸವಾರಿ ಅರಮನೆಯ ಆವರಣಕ್ಕೆ ಸೀಮಿತವಾಗಿರುತ್ತದೆ. 9 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆಯ ಆವರಣದಲ್ಲಿಯೇ ನಡೆಯಲಿವೆ ಎಂದು ತಿಳಿಸಿದರು.

Source:publictvkannada