ಜನತಾ ಕರ್ಫ್ಯೂಗೆ ಇಂದು ಒಂದು ವರ್ಷ!

Mar 22, 2021

ಜನತಾ ಕರ್ಫ್ಯೂಗೆ ಇಂದು ಒಂದು ವರ್ಷ| ಕೊರೋನಾ ಮುಂಚೂಣಿ ಕಾರ‍್ಯಕರ್ತರ ಗೌರ​ವಕ್ಕೆ ಚಪ್ಪಾ​ಳೆಗೂ ಸೂಚಿ​ಸಿದ್ದ ನಮೋ

ನವ​ದೆ​ಹ​ಲಿ(ಮಾ.22): ಕೊರೋನಾ ಸೋಂಕು ಹಬ್ಬು​ವಿ​ಕೆಯ ತಡೆ​ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಸೋಮವಾರ (ಮಾ.22) ಒಂದು ವರ್ಷ ತುಂಬಲಿದೆ.

2020ರ ಮಾ.22ರ ಭಾನು​ವಾ​ರ​ದಂದು ಪ್ರಧಾನಿ ಮೋದಿ ಅವರು ಜನರು ಬೆಳಗ್ಗೆ 7 ಗಂಟೆ​ಯಿಂದ ರಾತ್ರಿ 9 ಗಂಟೆ​ವ​ರೆಗೆ ಹೊರಗೆ ಬಾರದೆ ಮನೆ​ಯಲ್ಲೇ ಕುಳಿ​ತು​ಕೊ​ಳ್ಳ​ಬೇಕು. ಭಾರ​ತ​ದಲ್ಲಿ ಕೊರೋನಾ ವೈರಸ್‌ ಅನ್ನು ಹೇಗೆ ಮಣಿ​ಸ​ಬೇಕು ಎಂಬು​ದಕ್ಕೆ ಜನತಾ ಕರ್ಫ್ಯೂ ನೆರ​ವಾ​ಗ​ಲಿದೆ ಎಂದು ಮೋದಿ ಹೇಳಿ​ದ್ದರು.

ಈ ಬಗ್ಗೆ ರಾಷ್ಟ್ರ​ವ​ನ್ನು​ದ್ದೇ​ಶಿಸಿ ಮಾತ​ನಾ​ಡಿದ್ದ ಮೋದಿ ಅವರು, ‘ಆರೋಗ್ಯ ಸಿಬ್ಬಂದಿ, ಸರ್ಕಾರಿ ಸೇವೆ​ಗಳು, ನೈರ್ಮ​ಲ್ಯೀ​ಕ​ರ​ಣದ ಸಿಬ್ಬಂದಿ ಮತ್ತು ಪತ್ರ​ಕ​ರ್ತರು ಹೊರ​ತು​ಪ​ಡಿಸಿ ಉಳಿ​ದ​ವರು ಯಾರೂ ಸಹ ಮನೆ​ಯಿಂದ ಹೊರ​ಬ​ರ​ಬಾ​ರದು. ಅಲ್ಲ​ದೆ ಕೊರೋನಾ ಪರಿ​ಸ್ಥಿ​ತಿಯ ಈ ಕಠಿಣ ಪರಿ​ಸ್ಥಿ​ತಿ​ಯಲ್ಲಿ ಕಾರ್ಯ ನಿರ್ವ​ಹಿ​ಸು​ತ್ತಿ​ರುವ ವೈದ್ಯ​ಕೀಯ ಸಿಬ್ಬಂದಿ, ಪೊಲೀ​ಸರು, ಸರ್ಕಾರಿ ಸಿಬ್ಬಂದಿ, ಪತ್ರ​ಕ​ರ್ತರು ಸೇರಿ​ದಂತೆ ಇನ್ನಿ​ತರ ವರ್ಗ​ಗಳ ಸಿಬ್ಬಂದಿಗೆ ಗೌರವ ಸಲ್ಲಿ​ಸಲು ಪ್ರತಿ​ಯೊ​ಬ್ಬರು ಮಾ.22ರ ಸಂಜೆ 5 ಗಂಟೆಗೆ ತಮ್ಮ ಬಾಲ್ಕ​ನಿ​ಗ​ಳಲ್ಲಿ ನಿಂತು 5 ನಿಮಿ​ಷ​ಗಳ ಚಪ್ಪಾಳೆ, ತಟ್ಟೆಬಾರಿ​ಸ​ಬೇ​ಕು’ ಎಂದು ಹೇಳಿ​ದ್ದರು.

Source:TV9Kannada