ಗೆಳೆಯ ರಾಜ್ ಬಿ ಶೆಟ್ಟಿಯ ‘ಟೋಬಿ’ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ
Pramod Shetty: ನಟ ಪ್ರಮೋದ್ ಶೆಟ್ಟಿ, ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾವನ್ನು ಬಹುವಾಗಿ ಕೊಂಡಾಡಿದ್ದಾರೆ.
ರಾಜ್ ಬಿ ಶೆಟ್ಟಿಯ (Raj B Shetty) ‘ಟೋಬಿ‘ (Toby) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ರಾಜ್ ಬಿ ಶೆಟ್ಟಿಯ ಗೆಳೆಯ ಪ್ರಮೋದ್ ಶೆಟ್ಟಿ (Pramod Shetty), ಸಿನಿಮಾದ ಬಗ್ಗೆ ಸೊಗಸಾಗಿ ಮಾತನಾಡಿದರು. ಮಾತ್ರವಲ್ಲದೆ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಮುಂದಿನ ಭಾಗ ‘ಟೋಬಿ’ ಅಲ್ಲ ಎಂದು ಹೇಳಿ ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಚಿತ್ರತಂಡದ ಎಲ್ಲರಿಗೂ ಪ್ರೀತಿ ಪೂರ್ವಕವಾಗಿ ವಿಷ್ ಸಹ ಮಾಡಿದರು.