‘ಬೀಸ್ಟ್’ ಸಿನಿಮಾ 2022ರ ಏಪ್ರಿಲ್ 13ರಂದು ರಿಲೀಸ್ ಆಯಿತು. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತು. ಇಡೀ ಚಿತ್ರದ ಕಥೆ ಮಾಲ್ ಒಂದರಲ್ಲಿ ಸಾಗುತ್ತದೆ. ಜೊತೆಗೆ ಸಿನಿಮಾದಲ್ಲಿ ಯಾವುದೇ ಹೊಸತನ ಇರಲಿಲ್ಲ. ‘ಕೆಜಿಎಫ್ 2’ ಕೂಡ ಅದೇ ಸಂದರ್ಭದಲ್ಲಿ ರಿಲೀಸ್ ಆಗಿದ್ದರಿಂದ ಈ ಚಿತ್ರದ ಅಬ್ಬರ ಮತ್ತಷ್ಟು ಕಡಿಮೆ ಆಯಿತು.
 
ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್’ ಸಿನಿಮಾ (Jailer Movie) ಸೂಪರ್ ಹಿಟ್ ಆಗಿದೆ. ಈ ಚಿತ್ರ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಬೀಸ್ಟ್’ ಸಿನಿಮಾ ಫ್ಲಾಪ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಗಳಿಕೆ ಮಾಡಿತು. ‘ಜೈಲರ್’ ಸಿನಿಮಾ ಗೆದ್ದ ಖುಷಿಯಲ್ಲಿ ಇರುವ ನೆಲ್ಸನ್ ಈಗ ‘ಬೀಸ್ಟ್’ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಲೆಕ್ಕಾಚಾರ ತಪ್ಪಾಗಿದೆ ಎಂಬ ವಿಚಾರವನ್ನು ಅವರು ಒಪ್ಪಿಕೊಂಡಿದ್ದಾರೆ.
 

‘ಬೀಸ್ಟ್’ ಸಿನಿಮಾ 2022ರ ಏಪ್ರಿಲ್ 13ರಂದು ರಿಲೀಸ್ ಆಯಿತು. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತು. ಇಡೀ ಚಿತ್ರದ ಕಥೆ ಮಾಲ್ ಒಂದರಲ್ಲಿ ಸಾಗುತ್ತದೆ. ಜೊತೆಗೆ ಸಿನಿಮಾದಲ್ಲಿ ಯಾವುದೇ ಹೊಸತನ ಇರಲಿಲ್ಲ. ‘ಕೆಜಿಎಫ್ 2’ ಕೂಡ ಅದೇ ಸಂದರ್ಭದಲ್ಲಿ ರಿಲೀಸ್ ಆಗಿದ್ದರಿಂದ ಈ ಚಿತ್ರದ ಅಬ್ಬರ ಮತ್ತಷ್ಟು ಕಡಿಮೆ ಆಯಿತು. ಸಿನಿಮಾ ಸೋಲಲು ಕಾರಣ ಏನು ಎಂಬುದನ್ನು ನೆಲ್ಸನ್ ಪುನರ್​ ವಿಮರ್ಶೆ ಮಾಡಿಕೊಂಡಿದ್ದಾರೆ.

‘ಬೀಸ್ಟ್’ ಸಿನಿಮಾ ಮಾಡುವಾಗ ಸಮಯದ ಕೊರತೆ ಉಂಟಾಯಿತು ಅನ್ನೋದು ಅವರು ಅಭಿಪ್ರಾಯ. ತಾವು ಮಾಡಿದ ತಪ್ಪು ಲೆಕ್ಕಾಚಾರದಿಂದ ಈ ರೀತಿ ಆಯಿತು ಎಂದಿದ್ದಾರೆ ಅವರು. ‘ನನಗೆ ಆರೇಳು ತಿಂಗಳು ಹೆಚ್ಚುವರಿಯಾಗಿ ಸಿಕ್ಕಿದ್ದರೆ ಖಂಡಿತವಾಗಿಯೂ ಚಿತ್ರವನ್ನು ಸರಿಯಾಗಿ ನಿರೂಪಣೆ ಮಾಡುತ್ತಿದ್ದೆ. ಬಹುಶಃ ಆಗ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿರಲಿಲ್ಲ’ ಎಂದಿದ್ದಾರೆ ನೆಲ್ಸನ್. ‘ಬೀಸ್ಟ್’ ಸಿನಿಮಾ ಸೋತ ಬಗ್ಗೆ ವಿಜಯ್​ಗೆ ಬೇಸರ ಇದೆ. ಆ ವಿಚಾರ ನೆಲ್ಸನ್​ಗೂ ಗೊತ್ತಿದೆ. ‘ವಿಜಯ್ ಅವರ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗದೇ ಇರುವುದಕ್ಕೆ ಬೇಸರ ಇದೆ’ ಎಂದು ನೆಲ್ಸನ್ ಹೇಳಿದ್ದಾರೆ.

‘ಜೈಲರ್’ ಸಿನಿಮಾ ಹಿಟ್ ಆದ ಬಗ್ಗೆ ನೆಲ್ಸನ್​ಗೆ ಖುಷಿ ಇದೆ. ರಜನಿಕಾಂತ್ ಅವರಿಂದ ನಟನೆ ಮಾಡಿಸಿದ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಚಿತ್ರ ಎಂಟು ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 470 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶಿವರಾಜ್​ಕುಮಾರ್, ಮೋಹನ್​ಲಾಲ್, ಜಾಕಿ ಶ್ರಾಫ್​ ಮೊದಲಾದ ಸ್ಟಾರ್ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

 

Source: TV9 KANNADA