ಕೊನೆಗೂ ಘೋಷಣೆ ಆಯ್ತು ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ರಿಲೀಸ್​ ದಿನಾಂಕ

Jan 19, 2021

ಇಂದು ಇನ್​​​ಸ್ಟಾಗ್ರಾಂ ಲೈವ್​​ನಲ್ಲಿ ಕಾಣಿಸಿಕೊಂಡ ಧ್ರುವ ಸರ್ಜಾ ಈ ಘೋಷಣೆ ಮಾಡಿದ್ದಾರೆ. ಫೆಬ್ರವರಿ 19 ರಥಸಪ್ತಮಿ. ಈ ವಿಶೇಷ ದಿನದಂದು ಪೊಗರು ಚಿತ್ರ ರಿಲೀಸ್​ ಆಗುತ್ತಿದೆ. ಸಿನಿಮಾವನ್ನು ಎಲ್ಲರೂ ಚಿತ್ರ ಮಂದಿರಕ್ಕೆ ಬಂದು ವೀಕ್ಷಿಸಬೇಕು ಎಂದು ಧ್ರುವ ಮನವಿ ಮಾಡಿದ್ದಾರೆ.

ನಾನಾ ಕಾರಣಗಳಿಂದ ಮುಂದೂಡುತ್ತಲೇ ಬಂದಿದ್ದ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಿಡುಗಡೆ​ ದಿನಾಂಕ ಕೊನೆಗೂ ಘೋಷಣೆ ಆಗಿದೆ. ಇದೇ ಫೆಬ್ರವರಿ 19ರಂದು ಚಿತ್ರ ತೆರೆಗೆ ಬರುತ್ತಿದೆ.

ಇಂದು ಇನ್​​​ಸ್ಟಾಗ್ರಾಂ ಲೈವ್​​ನಲ್ಲಿ ಕಾಣಿಸಿಕೊಂಡ ಧ್ರುವ ಸರ್ಜಾ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಫೆಬ್ರವರಿ 19 ರಥಸಪ್ತಮಿ. ಈ ವಿಶೇಷ ದಿನದಂದು ಪೊಗರು ಚಿತ್ರ ರಿಲೀಸ್​ ಆಗುತ್ತಿದೆ. ಸಿನಿಮಾವನ್ನು ಎಲ್ಲರೂ ಚಿತ್ರ ಮಂದಿರಕ್ಕೆ ಬಂದು ವೀಕ್ಷಿಸಬೇಕು ಎಂದು ಧ್ರುವ ಮನವಿ ಮಾಡಿದ್ದಾರೆ.

ಕೊರೊನಾ ಭಯ ನಿಧಾನವಾಗಿ ದೂರವಾಗುತ್ತಿದೆ. ಹೀಗಾಗಿ, ನಾವು ಚಿತ್ರಮಂದಿರದಲ್ಲಿ ಪೊಗರು ಸಿನಿಮಾ ರಿಲೀಸ್​ ಮಾಡೋಕೆ ನಿರ್ಧಾರ ಮಾಡಿದ್ದೇವೆ. ಇದು ಕೇವಲ ಮಾಸ್​ ಸಿನಿಮಾ ಮಾತ್ರವಲ್ಲ, ಇದರಲ್ಲಿ ತುಂಬಾನೇ ಸೆಂಟಿಮೆಂಟ್​ ಕೂಡ ಇದೆ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೊಗರು ಸಿನಿಮಾದಲ್ಲಿ ಎರಡು ಶೇಡ್​ನಲ್ಲಿ ಧ್ರುವ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಸಿನಿಮಾದ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ. ಧನಂಜಯ್​ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ನಂದ ಕಿಶೋರ್​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

Source:TV9 Kannada