ಕಾಂಗರೂಗಳ ಬಾಲ ಕಟ್; 4ನೇ ಟೆಸ್ಟ್ ಗೆದ್ದುಬೀಗಿದ ಭಾರತ: ಸರಣಿಯೂ ಬ್ಲೂ ಬಾಯ್ಸ್ ಮಡಿಲಿಗೆ!
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ವಿಜಯ ಸಾಧಿಸಿದೆ. ಕಾಂಗರೂ ಪಡೆ ನೀಡಿದ್ದ 328 ರನ್ಗಳನ್ನು ಬೆನ್ನತ್ತಿದ ಭಾರತ 2ನೇ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ಇನ್ನೂ 18 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಮುಟ್ಟಿದೆ. ಗೆಲ್ಲಲು 25 ಎಸೆತಕ್ಕೆ 10 ರನ್ ಬಾಕಿ ಇರುವಾಗ ವಾಷಿಂಗ್ಟನ್ ಸುಂದರ್ ನಿರ್ಗಮಿಸಿದರಾದರೂ, ಅನಂತರ ಬಂದ ಶಾರ್ದೂಲ್ ಠಾಕೂರ್, ರಿಷಬ್ ಪಂತ್ಗೆ ಸಾಥ್ ನೀಡಿದರು.
ಈ ಗೆಲುವಿನ ಮೂಲಕ ಟೆಸ್ಟ್ ಸರಣಿ ಭಾರತದ ಪಾಲಾಗಿದೆ.
Source:TV9 Kannada