Hombale Films: ಹೊಂಬಾಳೆ ಫಿಲ್ಮ್ಸ್​ನ 11ನೇ ಚಿತ್ರ ಕಾಂತಾರ; ನಿರ್ದೇಶಕ ಮತ್ತು ನಾಯಕನಾಗಿ ರಿಷಬ್ ಶೆಟ್ಟಿ

Aug 6, 2021

ಕನ್ನಡದಲ್ಲಿ ಹಿಟ್ ಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ಈಗ ಸಾಲುಸಾಲಾಗಿ ತನ್ನ ನೂತನ ಚಿತ್ರಗಳನ್ನು ಘೋಷಿಸುತ್ತಿದೆ. ಇಂದು ಹೊಸ ಚಿತ್ರವನ್ನು ಘೋಷಿಸುವುದಾಗಿ ತಿಳಿಸಿದ್ದ ಸಂಸ್ಥೆ, ಚಿತ್ರದ ಹೆಸರು ಹಾಗೂ ತಂಡವನ್ನು ಘೋಷಿಸಿದ್ದು, ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದೆ. ಕಾರಣ, ತನ್ನ ಹನ್ನೊಂದನೇ ಚಿತ್ರದ ಮೊದಲ ಪೋಸ್ಟರ್​ಅನ್ನು ಬಿಡುಗಡೆಗೊಳಿಸಿರುವ ಹೊಂಬಾಳೆಯ ನೂತನ ಚಿತ್ರಕ್ಕೆ ನಾಯಕನಾಗಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನೂ ರಿಷಬ್ ಶೆಟ್ಟಿ ಹೊತ್ತಿದ್ದು, ಚಿತ್ರಕ್ಕೆ ‘ಕಾಂತಾರ’ ಎಂದು ನಾಮಕರಣ ಮಾಡಲಾಗಿದೆ.

‘ಕಾಂತಾರ’ ಚಿತ್ರವು ತುಳುನಾಡಿನ ಹೆಮ್ಮೆಯ ಕ್ರೀಡೆ ಕಂಬಳದ ಕುರಿತ ಚಿತ್ರವಾಗಿರಬಹುದು ಎಂಬ ಸೂಚನೆಯನ್ನು ಪೋಸ್ಟರ್ ನೀಡುತ್ತಿದೆ. ಚಿತ್ರದ ಟೈಟಲ್​ಗೆ ‘ಒಂದು ದಂತಕಥೆ’ ಎಂಬ ಅಡಿಬರಹವನ್ನೂ ನೀಡಲಾಗಿದ್ದು, ಚಿತ್ರದ ಚಿತ್ರೀಕರಣವು ಆಗಸ್ಟ್ 27ರಿಂದ ಪ್ರಾರಂಭವಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ. ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ.

Source: Tv9 kannada