ಕರ್ನಾಟಕ ಉಗ್ರಾಣ ನಿಗಮದ ಗೋದಾಮಿಗೆ ಕನ್ನ; 42 ತೊಗರಿ ಮೂಟೆ ಕದ್ದಿದ್ದ ಮೂವರು ಆರೋಪಿಗಳ ಬಂಧನ
ಆರೋಪಿಗಳು 42 ಚೀಲ ತೊಗರಿ ಕದ್ದು ಕಲಬುರಗಿಗೆ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ರಾಯಚೂರು: ಕರ್ನಾಟಕ ಉಗ್ರಾಣ ನಿಗಮದ ಗೋದಾಮಿನ ಬೀಗ ಒಡೆದು ತೊಗರಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. 42 ತೊಗರಿ (Toor dal) ಮೂಟೆಗಳನ್ನು ಕದ್ದಿದ್ದ, ಹೊಳೆಯಪ್ಪ, ದುರ್ಗಪ್ಪ, ಭೀಮಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು 42 ಚೀಲ ತೊಗರಿ ಕದ್ದು ಕಲಬುರಗಿಗೆ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ
Source: Tv9 kannada