ಕನಸಿನ ಟೆಸ್ಟ್ ಪಾದಾರ್ಪಣೆ, ಮಧ್ಯೆ ಶರ್ಟ್ ಬಿಚ್ಚಿ ಎದೆಗಾರಿಕೆ ತೋರಿದ್ದು.. ಈಗ ಶ್ರೀಮಂತ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುವವರೆಗೆ ದಾದಾ ಬೆಳೆದುಬಂದಿದ್ದು…
ಮೊದಲ ಪಂದ್ಯದಲ್ಲೇ ಆಕರ್ಷಕ ಶತಕ (Debut Test Ton). ಮತ್ತೊಂದು ತುದಿಯಿಂದ ಅದನ್ನು ಕಣ್ಣಾರೆ ನೋಡಿ ಆನಂದಿಸಿದ್ದು ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್. ದಾಖಲಾರ್ಹ ಸಂಗತಿಯೆಂದ್ರೆ ಅದು ದ್ರಾವಿಡ್ಗೂ ಚೊಚ್ಚಲ ಟೆಸ್ಟ್. ಆದರೆ ದ್ರಾವಿಡ್ ಆ ಪಂದ್ಯದಲ್ಲಿ 95 ರನ್ಗೆ ಔಟ್ ಆಗಿದ್ದರು. ಅದೆಲ್ಲಾ ಘಟಿಸಿ ಇಂದಿಗೆ 25 ವರ್ಷಗಳಾಗಿವೆ.
ಅದು ಕನಸಿನ ಟೆಸ್ಟ್ ಪಾದಾರ್ಪಣೆ. ಮೊದಲ ಪಂದ್ಯದಲ್ಲೇ ಆಕರ್ಷಕ ಶತಕ (Debut Test Ton). ಮತ್ತೊಂದು ತುದಿಯಿಂದ ಅದನ್ನು ಕಣ್ಣಾರೆ ನೋಡಿ ಆನಂದಿಸಿದ್ದು ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್. ದಾಖಲಾರ್ಹ ಸಂಗತಿಯೆಂದ್ರೆ ಅದು ದ್ರಾವಿಡ್ಗೂ ಚೊಚ್ಚಲ ಟೆಸ್ಟ್. ಆದರೆ ದ್ರಾವಿಡ್ ಆ ಪಂದ್ಯದಲ್ಲಿ 95 ರನ್ಗೆ ಔಟ್ ಆಗಿದ್ದರು. ಅದೆಲ್ಲಾ ಘಟಿಸಿ ಇಂದಿಗೆ 25 ವರ್ಷಗಳಾಗಿವೆ. ಈ ಮಧ್ಯೆ ಬಹಳ ಸ್ಥಿತ್ಯಂರಗಳಾಗಿವೆ ಜಗತ್ತಿನ ಕ್ರಿಕೆಟ್ ಅಂಗಳದಲ್ಲಿ. ಮಧ್ಯೆ ಶರ್ಟ್ ಬಿಚ್ಚಿ ತನ್ನ ಎದೆಗಾರಿಕೆ ತೋರಿದ್ದು, ಈಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುವವರೆಗೆ ದಾದಾ ಸೌರವ್ ಗಂಗೂಲಿ ಬೆಳೆದು ಬಂದಿದ್ದು ನಿಜಕ್ಕೂ ರೋಚಕ…
ಇಂದಿಗೆ ಸಿಲ್ವರ್ ಜ್ಯುಬಿಲಿ ಆಚರಿಸುತ್ತಿರುವ ದಾದಾ ಗಂಗೂಲಿ ಈ ಕಾಲಾಂತರದಲ್ಲಿ ವಿಕಸನಗೊಂಡಿದ್ದು ನಿಜಕ್ಕೂ ರೋಚಕ, ಯುವ ಪ್ರತಿಭೆಗಳಿಗೆ ಮಾದರಿ. ಕ್ರಿಕೆಟ್ ಕಾಶಿ ಎಂದೇ ಪರಿಗಣಿತವಾಗಿರುವ ಇಂಗ್ಲಂಡಿನ ಲಾರ್ಡ್ಸ್ ಮೈದಾನದಲ್ಲಿ ಭಾರತ ಪ್ರವಾಸದ ಎರಡನೆಯ ಟೆಸ್ಟ್ ಪಂದ್ಯದ ಮೂರನೆಯ ದಿನದಾಟದಲ್ಲಿ ಗಂಗೂಲಿ ಕನಸಿನ ದಾಖಲೆ ನಿರ್ಮಿಸಿದ್ದರು.
🗓️ #OnThisDay in 1996: @SGanguly99 scored his first Test 💯 & Rahul Dravid played his first ball in Test cricket. 👏 👏
The rest is history! 🙌 🙌 pic.twitter.com/zcLQxiTc5l
— BCCI (@BCCI) June 22, 2021
ಅದಕ್ಕೂ ಮುನ್ನ ಮತ್ತೊಬ್ಬ ಕನ್ನಡಿಗ, ಮೀಡಿಯಂ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ 5 ವಿಕೆಟ್ ಕಿತ್ತು, ಎದುರಾಳಿ ಇಂಗ್ಲಂಡ್ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 344 ರನ್ಗೆ ಆಲೌಟ್ ಮಾಡಿದ್ದರು. ಅದಾದ ಮೇಲೆ ಮೂರನೆಯ ಕ್ರಮಾಂಕದಲ್ಲಿ ಆಡಲು ಬಂದ ಗಂಗೂಲಿ, 301 ಬಾಲ್ಗಳಲ್ಲಿ 131 ರನ್ ಚಚ್ಚಿದರು. 20 ಬಾರಿ ಬೌಂಡರಿ ಆಚೆ ಚೆಂಡನ್ನು ಬಾರಿಸಿದ್ದರು. ರಾಹುಲ್ ದ್ರಾವಿಡ್ ಜೊತೆ 6ನೆಯ ವಿಕೆಟ್ಗೆ 94 ರನ್ ಜೊತೆಯಾಟ ಅಡಿದ್ದರು. ಗಂಗೂಲಿ ಔಟ್ ಆಗುವ ವೇಳೆಗೆ ಭಾರತದ ಸ್ಕೋರ್ 296/6. 85 ರ್ಗಳ ಲೀಡ್ ನೊಂದಿಗೆ, ಪ್ರವಾಸಿ ಭಾರತ ತಂಡ ಕೊನೆಗೆ 429 ರನ್ಗಳಿಗೆ ಆಲ್ಔಟ್ ಆಗಿತ್ತು. ಅಂತಿಮವಾಗಿ ಮ್ಯಾಚ್ ಡ್ರಾ ಆಗಿತ್ತು.
ಮುಂದೆ ಭಾರತ ತಂಡದ ಕ್ಯಾಪ್ಟನ್ ಆಗಿ ಬೆಳೆದ ದಾದಾ 2003ರ ವರ್ಲ್ಡ್ ಕಪ್ ತಂದುಕೊಟ್ಟರು. 113 ಟೆಸ್ಟ್ ಪಂದ್ಯಗಳು, 311 ಏಕ ದಿನ ಪಂದ್ಯಗಳನ್ನು ಲೀಲಾಜಾಲವಾಗಿ ಆಡಿದ್ದರು ಸೌರವ್ ಗಂಗೂಲಿ. ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ 18,575 ರನ್ ಬಾರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರತಿಷ್ಠಿತ ಭಾರತೀಯ ಕ್ರಿಕೆಟ್ ಮಂಡಳಿಯ (Board of Control for Cricket in India -BCCI) ಅಧ್ಯಕ್ಷರಾಗಿ ಯಶಸ್ವಿಯಾಗಿ ಕ್ರಿಕೆಟ್ ರಾಯಭಾರ ನಡೆಸುತ್ತಿದ್ದಾರೆ ದಾದಾ!
ಅದು ದ್ರಾವಿಡ್ಗೂ ಚೊಚ್ಚಲ ಟೆಸ್ಟ್. ಆದರೆ ದ್ರಾವಿಡ್ ಆ ಪಂದ್ಯದಲ್ಲಿ 95 ರನ್ಗೆ ಔಟ್ ಆಗಿದ್ದರು. ಅದೆಲ್ಲಾ ಘಟಿಸಿ ಇಂದಿಗೆ 25 ವರ್ಷಗಳಾಗಿವೆ.
Source: Tv9Kannada