ಇಂದು ಡು ಆರ್ ಡೈ ಪಂದ್ಯ.. ಓಪನರ್ಸ್ ಫೇಲ್, ಯುವಕರಿಗೆ ಸಿಗುತ್ತಾ ಚಾನ್ಸ್? ಕೊಹ್ಲಿ ಗೇಮ್ ಪ್ಲಾನ್ ಏನು?
India vs England: ಮೋದಿ ಕ್ರೀಡಾಂಗಣದಲ್ಲಿ ಸೋಲು ಗೆಲುವು ನಿರ್ಧಾರವಾಗೋದೇ, ಟಾಸ್ನಿಂದ. ಹೀಗಾಗಿ ಕೊನೇ ಟಿ-ಟ್ವೆಂಟಿಯಲ್ಲಿ ಎರಡು ತಂಡಗಳಿಗೂ ಟಾಸ್ ಎಕ್ಸ್ಫಕ್ಟರ್ ಆಗಿದೆ.
ಅಹಮದಾಬಾದ್: ಇವತ್ತು ಇಡೀ ಕ್ರಿಕೆಟ್ ಲೋಕದ ಚಿತ್ತ ನರೇಂದ್ರ ಮೋದಿ ಸ್ಟೇಡಿಯಂನತ್ತ ನೆಟ್ಟಿದೆ. ಇಂಡೋ-ಇಂಗ್ಲಿಂಡ್ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಸರಣಿ ಗೆಲುವಿಗಾಗಿ ಎರಡು ತಂಡಗಳು ಬಿಗ್ ಫೈಟ್ ನಡೆಸಲಿವೆ. ನಾಲ್ಕನೇ ಟಿ-ಟ್ವೆಂಟಿಯಲ್ಲಿ ಮಾರ್ಗನ್ ಪಡೆಗೆ ಮರ್ಮಾಘಾತ ನೀಡಿರೋ ಟೀಂ ಇಂಡಿಯಾ, ಇಂದು ಕೊನೇ ಟಿ-ಟ್ವೆಂಟಿ ಪಂದ್ಯವಾಡಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು ತಲಾ ಎರಡು ಪಂದ್ಯಗಳನ್ನ ಗೆದ್ದಿವೆ. ಹೀಗಾಗಿ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರೋ ಐದನೇ ಪಂದ್ಯ ಇಂಡೋ-ಇಂಗ್ಲೆಂಡ್ಗೆ ಮಾಡು ಇಲ್ಲವೇ ಮಡಿಯಂತಾಗಿದೆ.
ಮೋದಿ ಕ್ರೀಡಾಂಗಣದಲ್ಲಿ ಸೋಲು ಗೆಲುವು ನಿರ್ಧಾರವಾಗೋದೇ, ಟಾಸ್ನಿಂದ. ಹೀಗಾಗಿ ಕೊನೇ ಟಿ-ಟ್ವೆಂಟಿಯಲ್ಲಿ ಎರಡು ತಂಡಗಳಿಗೂ ಟಾಸ್ ಎಕ್ಸ್ಫಕ್ಟರ್ ಆಗಿದೆ. ಯಾಕಂದ್ರೆ, ನಾಲ್ಕು ಪಂದ್ಯಗಳ ಪೈಕಿ, ಮೂರರಲ್ಲಿ ಚೇಸಿಂಗ್ ಮಾಡಿದ ತಂಡವೇ, ಗೆಲುವು ಸಾಧಿಸಿದೆ. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಕೊನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ರೂ ಗೆಲುವು ಸಾಧಿಸಿದ್ದ ಭಾರತ, ಟಾಸ್ ಗೆದ್ದವನೇ ಬಾಸ್ ಅಲ್ಲ ಅನ್ನೋದನ್ನ ಸಾಬೀತು ಮಾಡಿತ್ತು.
ಓಪನರ್ಸ್ ಫೇಲ್.. ಯುವಕರಿಗೆ ಚಾನ್ಸ್..?
ಈ ವರ್ಷ ಟಿ-ಟ್ವೆಂಟಿ ವಿಶ್ವಕಪ್ ನಡೆಯಲಿರೋದ್ರಿಂದ, ಟೀಂ ಇಂಡಿಯಾ ಈ ಸರಣಿಯನ್ನ ಗಂಭೀರವಾಗಿ ಪರಿಗಣಿಸಿದೆ. ಆದ್ರಿಂದ, ಡು ಆರ್ ಡೈ ಪಂದ್ಯದಲ್ಲೂ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋದಕ್ಕೆ ಕೊಹ್ಲಿ ಪಡೆ ಭರ್ಜರಿ ತಯಾರಿಯನ್ನ ನಡೆಸ್ತಿದೆ. ಟಿ-ಟ್ವೆಂಟಿ ಸರಣಿಯುದ್ದಕ್ಕೂ ಟೀಂ ಇಂಡಿಯಾಕ್ಕೆ ಆರಂಭಿಕ ಬ್ಯಾಟ್ಸ್ಮನ್ಗಳು ಕೈಕೊಡ್ತಿದ್ದಾರೆ. ಓಪನರ್ಗಳಾದ ಕೆ.ಎಲ್.ರಾಹುಲ್, ಹಿಟ್ಮ್ಯಾನ್ ರೋಹಿತ್ ಶರ್ಮಾ ರನ್ಗಳಿಸೋಕೆ ಪರದಾಡ್ತಿದ್ದಾರೆ. ಇದು ಇಂದಿನ ಪಂದ್ಯದಲ್ಲೂ ಮುಂದುವರೆದ್ರೆ, ಟೀಂ ಇಂಡಿಯಾ ಬಿಗ್ ಸ್ಕೋರ್ ಕಲೆಹಾಕೋದಕ್ಕೆ ಆಗೋದಿಲ್ಲ.
ಟೀಮ್ನಲ್ಲಿ ಯುವ ಆಟಗಾರರು ಅತ್ಯದ್ಭುತ ಪ್ರದರ್ಶನ ನೀಡ್ತಿದ್ದಾರೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ಗೆ ಯಾರನ್ನ ಕಣಕ್ಕಿಳಿಸಬೇಕು ಅನ್ನೋದೇ ದೊಡ್ಡ ತಲೆನೋವಾಗಿದೆ. ಅಲ್ಲದೇ, ಇಂದಿನ ಪಂದ್ಯಕ್ಕೆ ತಂಡದಲ್ಲಿ ಕೆಲವೊಂದು ಬವಲಾವಣೆಯಾಗೋ ಸಾಧ್ಯತೆಯಿದೆ. ವಾಷಿಂಗ್ಟನ್ ಸುಂದರ್ ಬದಲಾಗಿ, ಯಜ್ವಿಂದರ್ ಚಹಲ್ ಕಣಕ್ಕಿಳಿಸಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ. ಜೊತೆಗೆ ಕೆ.ಎಲ್. ರಾಹುಲ್ ಸ್ಥಾನಕ್ಕೆ ಇಶಾನ್ ಕಿಶನ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡೋಕೆ ಪ್ಲ್ಯಾನ್ ಮಾಡಲಾಗಿದೆ.
ತಿರುಗೇಟು ಕೊಡಲು ಮಾರ್ಗನ್ ಪಡೆದ ಸಜ್ಜು!
ಇನ್ನೂ ನಾಲ್ಕನೇ ಪಂದ್ಯದಲ್ಲಿ ಕೊನೇ ಕ್ಷಣದಲ್ಲಿ ಸೋಲೋಪ್ಪಿಕೊಂಡಿರೋ ಆಂಗ್ಲರು, ಫೈನಲ್ನಲ್ಲಿ ಕೊಹ್ಲಿ ಪಡೆಗೆ ಗುನ್ನಾ ಕೊಡೋಕೆ ಭಾರಿ ತಂತ್ರವನ್ನೇ ರೂಪಿಸಿದೆ. ಆದ್ರೆ, ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರೋದಕ್ಕೆ ಮಾರ್ಗನ್ ನಿರ್ಧರಿಸಿದ್ದಾರೆ. ಒಟ್ನಲ್ಲಿ ಇಂಡೋ-ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಬ್ಲೂಬಾಯ್ಸ್ ಗೆಲುವಿನ ಕೇಕೆ ಹಾಕ್ತಾರಾ ಅನ್ನೋದನ್ನ ಕಾದುನೋಡ್ಬೇಕಿದೆ.
Source:TV9Kannada