ಅಮೆರಿಕಾದಿಂದ 157 ಪುರಾತನ ವಸ್ತುಗಳು ಭಾರತಕ್ಕೆ ಹಸ್ತಾಂತರ
ನವದೆಹಲಿ,ಸೆ.26-ಡ್ಯಾನ್ಸಿಂಗ್ ಗಣೇಶ ಹಾಗೂ 900 ವರ್ಷದ ನಟರಾಜ ಮೂರ್ತಿ ಸೇರಿದಂತೆ ಕಳ್ಳ ಸಾಗಣೆ ಮಾಡಲಾಗಿದ್ದ ಸುಮಾರು 157 ಪುರಾತನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕಾ ಹಸ್ತಾಂತರಿಸಿದೆ. ಈ ಮೂಲಕ ನರೇಂದ್ರ ಮೋದಿ ಅಮೆರಿಕ ಪ್ರವಾಸವು ಅಂತ್ಯವಾಗಿದೆ. ಅಮೆರಿಕವು ಭಾರತಕ್ಕೆ ಸೇರಿದ ಪುರಾತನ ವಸ್ತುಗಳನ್ನು ಭಾರತಕ್ಕೆ ವಾಪಸ್ ನೀಡಿರುವ ಈ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿ ಹಾಗೂ ವಿದೇ ಶಾಂಗ ಸಚಿವಾಲಯದ ವಕ್ತಾರ ಅರೀಂ ದಾಮ್ ಬಾಗ್ಚಿ ಟ್ವೀಟ್ ಮೂಲಕ ನೀಡಿದ್ದಾರೆ.
ಈ 157 ಪುರಾತನ ವಸ್ತುಗಳನ್ನು ಭಾರತ ದಿಂದ ಕಳ್ಳ ಸಾಗಣೆ ಮಾಡಲಾಗಿತ್ತು. ಇದೀಗ ಅಮೆರಿಕವು ಅವುಗಳನ್ನು ಭಾರತಕ್ಕೆ ವಾಪಸ್ ನೀಡಿದೆ. ಈ ಪುರಾತನ ವಸ್ತು ಗಳಲ್ಲಿ ತಾಮ್ರ ಮಾನವರೂಪವು ಇದೆ. ಇದು ಸುಮಾರು ಕ್ರಿಸ್ತಪೂರ್ವ 2000 ದಷ್ಟು ಹಳೆಯದ್ದಾಗಿದೆ ಎನ್ನಲಾಗಿದೆ. ಇನ್ನು ಟೆರಾ ಕೋಟಾ ಹೂದಾನಿಯೂ ಇದ್ದು ಇದು 2ನೇ ಶತಮಾನದಷ್ಟು ಹಳೆಯದ್ದು ಎನ್ನ ಲಾಗಿದೆ. ಈ ಪೈಕಿ ಸುಮಾರು 45 ರಷ್ಟು ಪುರಾತನ ವಸ್ತುಗಳು ಕ್ರಿಸ್ತಪೂರ್ವ ಯುಗಕ್ಕೆ ಸೇರಿದ್ದು ಎಂದು ಸರ್ಕಾರ ಹೇಳಿದೆ.
ಜೋ ಬೈಡೆನ್ ಜನವರಿಯಲ್ಲಿ ಅಮೆ ರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಭಾರ ತದ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‍ರನ್ನು ಭೇಟಿಯಾಗಿದ್ದಾರೆ. ಕ್ವಾಡ್ ಸಭೆಗಳಲ್ಲಿ ನರೇಂದ್ರ ಮೋದಿ ಭಾಗಿ ಯಾಗಿದ್ದಾರೆ. ಇನ್ನು ಜೋ ಬೈಡೆನ್‍ರನ್ನು ಭಾರತದ ಪ್ರಧಾನಿ
ಮೋದಿ ಭೇಟಿಯಾದ ಬಳಿಕ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿ ಕಚೇರಿ, ಉಭಯ ನಾಯಕರು ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲುವ ಬಗ್ಗೆ ಮಾತನಾಡಿದ್ದಾರೆ, ಎಂದು ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅಮೆರಿಕವು ಪುರಾತನ ವಸ್ತುಗಳನ್ನು ವಾಪಾಸ್ ನೀಡಿರುವುದು ನಮ್ಮ ದೇಶಕ್ಕೆ ಸೇರಿದ ಪುರಾತನ ವಸ್ತುಗಳನ್ನು ಹಾಗೂ ಪುರಾತನ ಕಲಾಕೃತಿಗಳನ್ನು ಮರಳಿ ದೇಶಕ್ಕೆ ತರುವಲ್ಲಿ ಮೋದಿ ಸರ್ಕಾರ ಮಾಡಿದ ನಿರಂತರ ಪ್ರಯ ತ್ನದ ಫಲವಾಗಿದೆ ಎಂದು ಹೇಳಿದೆ. ಈ ಪೈಕಿ ಅರ್ಧದಷ್ಟು ಪುರಾತನ ವಸ್ತುಗಳು ಸಾಂಸ್ಕೃತಿಕವಾಗಿದ್ದರೆ, ಅರ್ಧ ದಷ್ಟು ಧಾರ್ಮಿಕ ಪುರಾತನ ವಸ್ತುಗಳಾಗಿದೆ. 60 ಹಿಂದೂ ಪುರಾತನ ವಸ್ತುಗಳಾದರೆ. 16 ಬೌದ್ಧ ಹಾಗೂ ಜೈನ ಪರಂಪರೆಗೆ ಸೇರಿದ್ದು ಆಗಿದೆ, ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಹಿಂದೂ ಕಲಾಕೃತಿಗಳಲ್ಲಿ ಮೂರು ಬ್ರಹ್ಮನದ್ದು, ರಥ ವನ್ನು ಚಲಾಯಿಸುವ ಸೂರ್ಯ, ವಿಷ್ಣು ಹಾಗೂ ಆತನ ಸಹಚರರು, ದಕ್ಷಿಣ ಮೂರ್ತಿ ಯಾಗಿ ಶಿವ, ಡ್ಯಾನ್ಸಿಂಗ್ ಗಣೇಶ ಇದರಲ್ಲಿ ಸೇರಿದೆ. ಸ್ಟಾಂಡಿಂಗ್ ಬುದ್ದನ ಮೂರ್ತಿ, ಬೋದಿಸತ್ವ ಮಂಜುಶ್ರೀ ಹಾಗೂ ತಾರಾ ವಿಗ್ರಹವೂ ಸೇರಿದೆ. ಜೈನ ತೀರ್ಥಾಂಕರನ ಮೂರ್ತಿ, ಪದ್ಮಾಸನ ತೀರ್ಥಕರ ಹಾಗೂ ಜೈನ ಚೌಬಿಸಿ ಜೈನ ಕಲಾಕೃತಿ ಕೂಡ ಇದೆ.
Source:mysurumithra