
ಇಂದು ‘ದೃಶ್ಯ 2’ ರಿಲೀಸ್; ರವಿಚಂದ್ರನ್ ನಟನೆಯ ಈ ಸಿನಿಮಾ ನೋಡೋಕೆ ಇಲ್ಲಿವೆ ಕಾರಣ
Language : Kannada
Genre : Film/Thriller
Director : P.Vasu
Producer : Mukesh R Mehta
Music Director : B Ajaneesh Loknath
Stars : Ravichandran, Navya Nair, Swaroopini, Asha sharath, Prabhu, Ananth Nag, Pramod Shetty, Prabhu Srinivas, Sadhu Kokila, Aarohi Narayan, Sonu Gowda, Hebbale Krishna
Release Date : 10 Dec 2021
ರವಿಚಂದ್ರನ್ ಅಭಿನಯದ ‘ದೃಶ್ಯ’ ಸಿನಿಮಾ 2014ರಲ್ಲಿ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ರಾಜೇಂದ್ರ ಪೊನ್ನಪ್ಪ ಆಗಿ ರವಿಚಂದ್ರನ್ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಸೀಕ್ವೆಲ್ ಇಂದು (ಡಿಸೆಂಬರ್ 10) ರಿಲೀಸ್ ಆಗುತ್ತಿದೆ. ಈ ಸಿನಿಮಾ ಹೇಗಿರಲಿದೆ ಎನ್ನುವ ಝಲಕ್ ಕಳೆದ ತಿಂಗಳು ರಿಲೀಸ್ ಆದ ಟ್ರೇಲರ್ನಲ್ಲಿ ಸಿಕ್ಕಿತ್ತು. ಹಾಗಾದರೆ, ಸಿನಿಮಾ ನೋಡೋಕೆ ಕಾರಣಗಳೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ದೃಶ್ಯ’ ಸಿನಿಮಾದಲ್ಲಿ ಐಜಿ ಹುದ್ದೆಯಲ್ಲಿರುವ ರೂಪಾ ಚಂದ್ರಶೇಖರ್ ಮಗ ತರುಣ್ ಚಂದ್ರಶೇಖರ್ ಅವರನ್ನು ರಾಜೇಂದ್ರ ಪೊನ್ನಪ್ಪ ಅವರು ಪೊಲೀಸ್ ಠಾಣೆಯಲ್ಲಿ ಹುಗಿದು ಹಾಕಿದ್ದರು. ಆ ನಂತರ ಇಡೀ ಕುಟುಂಬ ಹಾಯಾಗಿ ಜೀವನ ನಡೆಸುತ್ತಿರುತ್ತದೆ. ಆದರೆ, ಈಗ ಈ ವಿಚಾರ ರಿವೀಲ್ ಆಗಿದೆ. ಇದರಿಂದ ರಾಜೇಂದ್ರ ಪೊನ್ನಪ್ಪ ಹೇಗೆ ತಪ್ಪಿಸಿಕೊಳ್ಳುತ್ತಾರೆ ಅನ್ನೋದು ಸಿನಿಮಾದ ಹೈಲೈಟ್ ಆಗಲಿದೆ ಎಂಬುದಕ್ಕೆ ‘ದೃಶ್ಯ 2’ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಟ್ರೇಲರ್ ಈಗಾಗಲೇ ಸಾಕಷ್ಟು ಕೌತುಕ ಮೂಡಿಸಿದೆ.
ಪಾತ್ರವರ್ಗ
‘ದೃಶ್ಯ 2’ ಸಿನಿಮಾದಲ್ಲೂ ರವಿಚಂದ್ರನ್ ಮತ್ತು ನವ್ಯಾ ನಾಯರ್ ಮುಂದುವರಿದಿದ್ದಾರೆ. ಪುತ್ರಿ ಪಾತ್ರದಲ್ಲಿ ನಟಿ ಆರೋಹಿ ನಾರಾಯಣ್ ಅಭಿನಯಿಸಿದ್ದಾರೆ. ಸಿನಿಮಾದ ಟ್ರೇಲರ್ ಸಾಕಷ್ಟು ಸಸ್ಪೆನ್ಸ್ಗಳಿಂದ ಕೂಡಿದೆ. ಹೀಗಾಗಿ, ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಮೂಡಿದೆ. ಅನಂತ್ ನಾಗ್ ಪಾತ್ರ ಕೂಡ ಟ್ರೇಲರ್ನಲ್ಲಿ ರಿವೀಲ್ ಆಗಿದೆ. ಇತ್ತೀಚೆಗೆ ಅವರು ಚಿತ್ರತಂಡ ಸೇರಿಕೊಂಡ ಬಗ್ಗೆ ಮಾಹಿತಿ ಅಧಿಕೃತವಾಗಿತ್ತು.
ಪಿ. ವಾಸು ನಿರ್ದೇಶನ
ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಪಿ. ವಾಸು ಅವರಿಗೆ ಇದೆ. ಈ ಮೊದಲು ‘ದೃಶ್ಯ’ ಸಿನಿಮಾ ನಿರ್ದೇಶನ ಮಾಡಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈಗ ‘ದೃಶ್ಯ 2’ಗೆ ನಿರ್ದೇಶನ ಮಾಡಿದ್ದಾರೆ. E4 Entertainment ಬ್ಯಾನರ್ನಲ್ಲಿ ‘ದೃಶ್ಯ 2’ ಸಿನಿಮಾ ಮೂಡಿಬಂದಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಿ.ವಿ. ಸಾರಥಿ ಕೆಲಸ ಮಾಡಿದ್ದಾರೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ರವಿ ಸಂತೆಹುಕ್ಲು ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ, ಭರತ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ನಟಿಸಿದ್ದಾರೆ.