ಹೈಲೈಟ್ಸ್:
- ಸಿಇಎಸ್‌ಇ ಮೈಸೂರಿನಲ್ಲಿ ಉದ್ಯೋಗಾವಕಾಶ.
- ಅಪ್ರೆಂಟಿಸ್ ಹಾಗೂ ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ.
- ಸಿಇಎಸ್‌ಇ ಪೋರ್ಟಲ್‌ನಲ್ಲಿ ಅರ್ಜಿಗೆ ಕೊನೆ ದಿನ ಜೂನ್ 07.
ರಾಜ್ಯದ ಮೈಸೂರಿ’ನಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ(CESC) ಅಗತ್ಯ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಅಪ್ರೆಂಟಿಸ್ ಕಾಯ್ದೆ 1973 ರ ಪ್ರಕಾರ, ಗ್ರಾಜುಯೇಟ್ ಅಪ್ರೆಂಟಿಸ್ ಹಾಗೂ ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟ್‌ಗಳಲ್ಲಿ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ.
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು
ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ : 80
ಸಿವಿಲ್ ಇಂಜಿನಿಯರಿಂಗ್ : 10
ಒಟ್ಟು : 80
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳು
ಸಿವಿಲ್ ಇಂಜಿನಿಯರಿಂಗ್ : 45
ಸಿವಿಲ್ ಇಂಜಿನಿಯರಿಂಗ್ : 10
ಒಟ್ಟು : 10
ಅಪ್ರೆಂಟಿಸ್ ಹುದ್ದೆ ಅವಧಿ: 1 ವರ್ಷ.
ಅಪ್ರೆಂಟಿಸ್ ಹುದ್ದೆಗಳಿಗೆ ಮಾಸಿಕ ಸ್ಟೈಫಂಡ್ ಎಷ್ಟು?
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆ: Rs.9000.
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳು: Rs.8000.
ವಿದ್ಯಾರ್ಹತೆ
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆ: ಬಿಇ / ಬಿ.ಟೆಕ್ ವಿದ್ಯಾರ್ಹತೆಗಳನ್ನು ಪಾಸ್ ಮಾಡಿರಬೇಕು.
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆ : ಮೂರು ವರ್ಷದ ಡಿಪ್ಲೊಮ ಪಾಸ್ ಮಾಡಿರಬೇಕು.
ವಿದ್ಯಾರ್ಹತೆಗಳನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪಡೆದಿರಬೇಕು.
2019, 2020, 2021 ಸಾಲಿನಲ್ಲಿ ಮೇಲೆ ತಿಳಿಸಿದ ವಿದ್ಯಾರ್ಹತೆಗಳನ್ನು ಪಾಸ್ ಮಾಡಿದವರು ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಅವರನ್ನು ದಾಖಲೆಗಳ ಪರಿಶೀಲನೆಗೆ ಕರೆದು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 16-05-2022
NATS ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 02-06-2022
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಪೋರ್ಟಲ್‌ನಲ್ಲಿ ಅರ್ಜಿಗೆ ಕೊನೆ ದಿನ: 07-06-2022
ಶಾರ್ಟ್ ಲಿಸ್ಟ್ ಬಿಡುಗಡೆ ದಿನಾಂಕ: 10-06-2022
ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ದಿನಾಂಕ : 14-06-2022
NATS ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಹಂತ : 1
– ಎಂಹೆಚ್‌ಆರ್‌ಡಿ ನ್ಯಾಟ್ಸ್ ಪೋರ್ಟಲ್ www.mhrdnats.gov.in ಗೆ ಭೇಟಿ ನೀಡಿ.
– ‘Enroll’ ಎಂಬಲ್ಲಿ ಕ್ಲಿಕ್ ಮಾಡಿ.
– ಓಪನ್ ಆದ ಪೇಜ್‌ನಲ್ಲಿ ‘Student’ ಆಯ್ಕೆ ಮಾಡಿ.
– ನಂತರ ಕೇಳಲಾಗುವ ಅಗತ್ಯ ಮಾಹಿತಿಗಳನ್ನು ನೀಡಿ ಅಪ್ಲಿಕೇಶನ್ ಪೂರ್ಣಗೊಳಿಸಿ.
– ಪ್ರತಿ ವಿದ್ಯಾರ್ಥಿಗೆ ‘Unique Enrollment Number’ ಜೆನೆರೇಟ್ ಆಗುತ್ತದೆ.
ಸೂಚನೆ : ಮೇಲಿನ ವಿಧಾನದಂತೆ ಅಪ್ಲಿಕೇಶನ್ ಪೂರ್ಣವಾದ ನಂತರ ಒಂದು ದಿನ ಕಾಯಿರಿ. ಎನ್‌ರಾಲ್ಮೆಂಟ್ ವೆರಿಫಿಕೇಶನ್ ಆಗಿ, ಅಧಿಕೃತ ನಂಬರ್ ಬರುತ್ತದೆ. ನಂತರ ಹಂತ-2 ಫಾಲೋ ಮಾಡಿ.
ಹಂತ-2
– www.mhrdnats.gov.in ಪೋರ್ಟಲ್‌ಗೆ ಭೇಟಿ ನೀಡಿ.
– ‘Login’ ಬಟನ್ ಕ್ಲಿಕ್ ಮಾಡಿ.
– ಇ-ಮೇಲ್ / ಮೊಬೈಲ್ ನಂಬರ್ / ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ.
– ‘Establishment Request Menu’ ಕ್ಲಿಕ್ ಮಾಡಿ.
– ‘Find Establishment’ ಆಯ್ಕೆಮಾಡಿ.
– ರೆಸ್ಯೂಮ್ ಅಪ್‌ಲೋಡ್ ಮಾಡಿ.
– ‘Establishment Name’ ಆಯ್ಕೆ ಮಾಡಿ.
– ಉದಾಹರಣೆಗೆ CESC ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಕರೆದಿದ್ದರೆ ‘chamundeshwari electricity supply corporation ‘ ಎಂದು ಟೈಪಿಸಿ ಸರ್ಚ್ ಮಾಡಿ.
– ನಂತರ ‘Apply’ ಎಂಬಲ್ಲಿ ಕ್ಲಿಕ್ ಮಾಡಿ.
– ಅಗತ್ಯ ಮಾಹಿತಿಗಳನ್ನು ನೀಡಿ ಮತ್ತೆ ‘ ‘Apply’ ಬಟನ್ ಕ್ಲಿಕ್ ಮಾಡಿ.
– NATS ಪೋರ್ಟಲ್ ಮೂಲಕ CESC ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಕೆ ಆಗುತ್ತದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಪೋರ್ಟಲ್ : https://cescmysore.karnataka.gov.in/english
NATS ಪೋರ್ಟಲ್ ವಿಳಾಸ: https://portal.mhrdnats.gov.in/boat/login/user_login.action
source: vijaykarnataka.com