You are FRAMED Washington Sundar! ಇದಕ್ಕಿಂತ ಸುಂದರ ಒಕ್ಕಣೆ, ಮನ್ನಣೆ ಇನ್ನೇನು ಬೇಕು ಅಲ್ವಾ?

Jan 20, 2021

80ರ ದಶಕದ ಆಟವನ್ನು ನೆನಪಿಸುವಂತೆ ಮೊನ್ನೆ ವಾಷಿಂಗ್ಟನ್​ ಸುಂದರ್ ಅಂತಹುದೇ ಹುಕ್​ ಶಾಟ್​ ಎತ್ತಿ, ಚೆಂಡನ್ನು ಬೌಂಡರಿಯಾಚೆಗೆ ಅಟ್ಟಿದ್ದರು! Exactly ವಾಷಿಂಗ್ಟನ್​ ಸುಂದರ್ ಅವರ ಆ ಸುಂದರ ಹೊಡತದ ಭಂಗಿಯನ್ನೇ ಐಸಿಸಿ Exactly (ICC -International Cricket Council) ಫ್ರೇಂ ಮಾಡಿದೆ.

ನಿನ್ನೆ ಬ್ರಿಸ್ಬೇನ್​ನ ಗಾಬಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತದ ಬ್ಲೂ ಬಾಯ್ಸ್​ ನಿಜಕ್ಕೂ ಅದ್ಭುತವಾಗಿ ಆಡಿದ್ದು, ತಮ್ಮ ಅಮೋಘ ಪ್ರದರ್ಶನಕ್ಕೆ ಇಡೀ ವಿಶ್ವವೇ ತಲೆದೂಗುವಂತೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿಯೂ ವಿಭಿನ್ನ ರೀತಿಯಲ್ಲಿ ಶಹಭಾಶ್ ಹುಡುಗರಾ! ಅಂದಿದೆ.

80ರ ದಶಕದಲ್ಲಿ ಕೆಲ ಆಲ್​ರೌಂಡರ್​ ಆಟಗಾರರು ಕ್ರಿಕೆಟ್​ ಆಟದಲ್ಲಿ ಹುಕ್​ ಶಾಟ್​​ ಬಾರಿಸುವುದನ್ನು ಒಂದು ಕಲೆಯಾಗಿಸಿಕೊಂಡಿದ್ದರು. ಕ್ರಿಕೆಟ್​ ಪ್ರೇಮಿಗಳಿಗೆ ಆ ಹುಕ್​ ಶಾಟ್​​ ನಯನ ಮನೋಹರವಾಗಿದ್ದವು. ಅದರಲ್ಲೂ ನಮ್ಮ ಕಪಿಲ್​ ದೇವ್​ ಸೇರಿದಂತೆ ಅಯಾನ್ ಬೋಥಾಂ, ರಿಚರ್ಡ್ಸ್​ ಹ್ಯಾಡ್ಲಿ, ನೆರೆಯ ಇಮ್ರಾನ್ ಖಾನ್​ ಮುಂತಾದ ಕೆಲ ಆಲ್​ರೌಂಡರ್​ ಆಟಗಾರರು ಹುಕ್​ ಶಾಟ್​​ ಮೂಲಕ ವಿಜೃಂಭಿಸುತ್ತಿದ್ದರು. ಅದಾದ ಮೇಲೆ ಅಲ್ಲೊಂದು ಇಲ್ಲೊಂದು ಎಂಬಂತೆ ಬ್ಯಾಟ್ಸ್​ಮನ್​ಗಳು ಹುಕ್​ ಶಾಟ್ ಗಳನ್ನು ತಮ್ಮ ಬ್ಯಾಟಿಂದ ಸಿಡಿಸುತ್ತಿದ್ದರು.

Source:TV9Kannada