ನೇತಾಜಿ 125 ನೇ ಜನ್ಮದಿನಾಚರಣೆ: ಬೋಸ್ ಬಗೆಗಿನ ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ
ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದ ಸ್ವಾತಂತ್ರ್ಯ ಹೋರಾಟಗಾರ ಐಸಿಎಸ್ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರೂ ಬ್ರಿಟಿಷ್ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಲು ನಿರಾಕರಿಸಿದರು.
ಕ್ರಾಂತಿಯ ಮೂಲಕ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನ ಹಚ್ಚಿದ ವೀರ ಸೇನಾನಿ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನುಮ ದಿನದ ಪ್ರಯುಕ್ತ ಅವರ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
– ಸುಭಾಸ್ ಚಂದ್ರ ಬೋಸ್ ಜನವರಿ 23, 1987 ರಂದು ಒಡಿಶಾದ ಕಟಕ್ನಲ್ಲಿ ವಕೀಲ ಜನಕಿನಾಥ್ ಬೋಸ್ ಅವರ ಮಗನಾಗಿ ಜನಿಸಿದರು.
– ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದ ಸ್ವಾತಂತ್ರ್ಯ ಹೋರಾಟಗಾರ ಐಸಿಎಸ್ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರೂ ಬ್ರಿಟಿಷ್ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಲು ನಿರಾಕರಿಸಿದರು.
– ಸುಭಾಸ್ ಚಂದ್ರ ಬೋಸ್ ಅವರನ್ನು ನೇತಾಜಿ ಎಂದೂ ಕರೆಯಲಾಗುತ್ತಿತ್ತು. ಸುಭಾಸ್ ಚಂದ್ರ ಬೋಸ್ ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
– ಸುಭಾಸ್ ಚಂದ್ರ ಬೋಸ್ ಭಾರತಕ್ಕೆ ಮರಳಿದ ನಂತರ ಸ್ವರಾಜ್ ಪತ್ರಿಕೆ ಪ್ರಾರಂಭಿಸಿದರು ಮತ್ತು ಬಂಗಾಳ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಪ್ರಚಾರದ ಉಸ್ತುವಾರಿ ವಹಿಸಿಕೊಂಡರು.
– ಬ್ರಿಟಿಷರೊಂದಿಗೆ ವ್ಯವಹರಿಸಲು ಗಾಂಧಿಯವರ ಅಹಿಂಸಾತ್ಮಕ ಕ್ರಮಗಳನ್ನು ವಿರೋಧಿಸಿದ ಸ್ವಾತಂತ್ರ್ಯ ಹೋರಾಟಗಾರನನ್ನು 1921 ರಿಂದ 1941 ರ ನಡುವೆ 11 ವಿವಿಧ ಜೈಲುಗಳಲ್ಲಿ ಬಂಧಿಸಿಡಲಾಗಿತ್ತು ಎಂದು ಹೇಳಲಾಗುತ್ತದೆ.
– ಜಪಾನ್ ಮತ್ತು ಜರ್ಮನಿಯ ಈ ಎರಡೂ ದೇಶಗಳು ಬ್ರಿಟಿಷರ ವಿರುದ್ಧವಾಗಿರುವುದರಿಂದ, ನೇತಾಜಿ ಜಪಾನ್ ಮತ್ತು ಜರ್ಮನಿಯ ಸಹಾಯವನ್ನು ಕೋರಿದ್ದರು.
– ಜರ್ಮನಿಯಲ್ಲಿ ಆಜಾದ್ ಹಿಂದ್ ರೇಡಿಯೊ ಕೇಂದ್ರವನ್ನು ಸ್ಥಾಪಿಸುವಲ್ಲಿ ನೇತಾಜಿ ಪ್ರಮುಖ ಪಾತ್ರ ವಹಿಸಿದರು ಮತ್ತು ಪೂರ್ವ ಏಷ್ಯಾದಲ್ಲಿ ಭಾರತೀಯ ರಾಷ್ಟ್ರೀಯತಾವಾದಿ ಚಳವಳಿಯನ್ನು ಮುನ್ನಡೆಸಿದರು.
– ಭಗವದ್ಗೀತೆ ಮತ್ತು ಸಾರ್ವತ್ರಿಕತೆಯ ಬಗ್ಗೆ ಸ್ವಾಮಿ ವಿವೇಕಾನಂದರ ಬೋಧನೆಗಳು ನೇತಾಜಿಗೆ ಉತ್ತಮ ಪ್ರೇರಣೆಯಾಗಿದ್ದವು.
– ನನಗೆ ರಕ್ತ ಕೊಡು, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ. ದಿಲ್ಲಿ ಚಲೋ ಮತ್ತು ಜೈ ಹಿಂದ್ ಮುಂತಾದ ಪ್ರಸಿದ್ಧ ಘೋಷಣೆಗಳ ಮುಖಾಂತರ ನೇತಾಜಿಯವರನ್ನು ನೆನೆಯಬಹುದಾಗಿದೆ.
– ಬೋಸ್ ಹೇಗೆ ನಿಧನರಾದರು ಎಂಬುದು ಇಲ್ಲಿಯವರೆಗೆ ತಿಳಿದಿಲ್ಲ, ಆಗಸ್ಟ್ 18, 1945 ರಂದು ತೈವಾನ್ನ ತೈಪೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ತನ್ನ ಪ್ರಾಣವನ್ನು ಕಳೆದುಕೊಂಡರೆಂದು ಕೆಲವರು ಹೇಳುತ್ತಾರೆ.
– ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿ ಮತ್ತು ಜಪಾನ್ ಸಹಾಯದಿಂದ ಭಾರತವನ್ನು ಬ್ರಿಟಿಷ್ ಆಡಳಿತದಿಂದ ಹೊರಹಾಕಲು ಪ್ರಯತ್ನಿಸಿದ ಬೋಸ್, ತೈವಾನ್ ಬಳಿ ವಿಮಾನ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ.
Source: TV9Kannada