IPL 2021: ಐಪಿಎಲ್ ತಯಾರಿ ಆರಂಭ: ಚೆನ್ನೈ ತಲುಪಿದ ಸಿಎಸ್​ಕೆ ನಾಯಕ ಎಂ ಎಸ್ ಧೋನಿ

Aug 10, 2021

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (ಐಪಿಎಲ್) ಎರಡನೇ ಚರಣ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆತಿಥ್ಯದಲ್ಲಿ ಸೆಪ್ಟೆಂಬರ್ 19ರಂದು ಆರಂಭವಾಗಲಿದೆ.ಈಗಾಗಲೇ ಬಿಸಿಸಿಐ ವೇಳಾಪಟ್ಟಿ ಕೂಡ ಪ್ರಕಟ ಮಾಡಿದ್ದು, ಐಪಿಎಲ್ನ ಎರಡು ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಕಾದಾಟ ನಡೆಸಲಿವೆ.ಟೂರ್ನಿಯಲ್ಲಿ ಭಾಗವಹಿಸಬೇಕಾದರೆ ಪ್ರತಿಯೊಬ್ಬ ಆಟಗಾರರು ಕೊರೊನಾ ಲಸಿಕೆ ಪಡೆದಿರಬೇಕು. ವಾಕ್ಸಿನೇಷನ್ ಮಾಡಿಕೊಂಡ ಆಟಗಾರರಿಗೆ ಮಾತ್ರ ಐಪಿಎಲ್ನ ದ್ವಿತಿಯಾರ್ಧದಲ್ಲಿ ಅವಕಾಶ ದೊರೆಯಲಿದೆ.

ಇದೇ ಆಗಸ್ಟ್ 13 ರಂದು ಧೋನಿ, ರಾಬಿನ್ ಉತ್ತಪ್ಪ ಸೇರಿದಂತೆ ಕೆಲ ರಾಷ್ಟ್ರೀಯ ತಂಡದಲ್ಲಿರದ ದೇಶೀಯ ಕ್ರಿಕೆಟಿಗರು ಅರಬ್ ರಾಷ್ಟ್ರಕ್ಕೆ ಮೊದಲು ಪ್ರಯಾಣ ಬೆಳೆಸಲಿದ್ದಾರೆ. ನಂತರ ಅಲ್ಲಿ ಅಭ್ಯಾಸ ಶುರುಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆಗಸ್ಟ್ 20ರಂದು ಯುಎಇಗೆ ತೆರಳುವುದು ಖಾತ್ರಿಯಾಗಿದೆ. ಜುಲೈ 30ರವರೆಗೆ ಭಾರತದಿಂದ ಯುಎಇಗೆ ಯಾವುದೇ ವಿಮಾನ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು.

ಐಪಿಎಲ್ 2021 ಟೂರ್ನಿ ಮೇ 4ರಂದು ಕೊರೊನಾ ವೈರಸ್ ಕಾರಣ ಅರ್ಧಕ್ಕೆ ನಿಂತಿತ್ತು. ನಾಲ್ಕು ಫ್ರಾಂಚೈಸಿ ತಂಡಗಳ ಆಟಗಾರರು ಮತ್ತು ಸಿಬ್ಬಂದಿ ಬಳಗವದರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡ ಬಿಸಿಸಿಐ, ತನ್ನ ಮುಂದಿನ ಆದೇಶದವರೆಗೆ ಟೂರ್ನಿಯನ್ನು ಮುಂದೂಡಿತ್ತು.

ಈಗ ಸೆಪ್ಟೆಂಬರ್ 19ರಂದು ಟೂರ್ನಿ ಮತ್ತೆ ಶುರುವಾಗುವುದು ಖಾತ್ರಿಯಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯ ದುಬೈನಲ್ಲಿ ನಡೆಯಲಿದ್ದು, 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಶಾರ್ಜಾ ಕ್ರೀಡಾಂಗಣ ವೇದಿಕೆ ಒದಗಿಸಲಿದೆ.

 

 

 

Source: tv9 kannada