IPL 2021: ಐಪಿಎಲ್​ಗಾಗಿ RCB ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಲಿಸ್ಟ್​ ಇಲ್ಲಿದೆ..

Jan 21, 2021

ಐಪಿಎಲ್ ಹರಾಜು ಪ್ರಕ್ರಿಯೆ ಇನ್ನೇನು ಆರಂಭವಾಗಲಿದೆ. ಆರ್​ಸಿಬಿ ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರು ಹಾಗೂ ಕೈಬಿಡಲಾದ ಆಟಗಾರರ ವರದಿಯನ್ನು ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಬಿಡುಗಡೆಗೊಳಿಸಿದೆ.

ಬೆಂಗಳೂರು: ಮುಂಬರುವ 2021 ರ ಐಪಿಎಲ್​ ಆವೃತ್ತಿಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬರದ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಮುಂದಿನ ಬಾರಿ ಕಪ್​ ಗೆಲ್ಲಲೇಬೇಕೆಂಬ ಛಲದೊಂದಿಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ಹರಾಜು ಪ್ರಕ್ರಿಯೆಗಾಗಿ ಆರ್​ಸಿಬಿ ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರು ಹಾಗೂ ಕೈಬಿಡಲಾದ ಆಟಗಾರರ ವರದಿಯನ್ನು ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಬಿಡುಗಡೆಗೊಳಿಸಿದೆ.

ಆರ್​ಸಿಬಿ ತನ್ನಲ್ಲೇ ಉಳಿಸಿಕೊಂಡ ಆಟಗಾರರು..
ವಿರಾಟ್​ ಕೊಹ್ಲಿ, ಎಬಿ ಡಿ ವಿಲಿಯರ್ಸ್, ದೇವದತ್​ ಪಡಿಕ್ಕಲ್, ಯಜುವೇಂದ್ರ ಚಹಲ್, ಮಹಮದ್​ ಸಿರಾಜ್, ಕೆ.ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್, ಪವನ್​ ದೇಶಪಾಂಡೆ, ಜೋಶ್​ ಫಿಲಿಪ್, ಎಸ್ ಅಹ್ಮದ್, ನವ್​ದೀಪ್​ ಸೈನಿ, ಆಡಂ ಜಂಪಾ.

ಆರ್​ಸಿಬಿ ಕೈಬಿಟ್ಟ ಆಟಗಾರರು..
ಗುರ್​ಕೀರತ್​ ಸಿಂಗ್, ಮೋಹಿನ್​ ಅಲಿ, ಆ್ಯರನ್​ ಫಿಂಚ್, ಕ್ರಿಸ್​ ಮೋರಿಸ್, ಪವನ್​ ನೇಗಿ, ಶಿವಂ ದುಬೆ, ಈಸೂರು ಉದಾನಾ, ಪಾರ್ಥಿವ್​ ಪಟೇಲ್, ಡೇಲ್​ ಸ್ಟೇನ್, ಉಮೇಶ್ ಯಾದವ್.

Source:TV9Kannada