Ganesha Chaturthi 2021: ಬೆಂಗಳೂರಿನ ಕೆಲವು ಪ್ರಸಿದ್ಧ ಗಣಪತಿ ದೇವಸ್ಥಾನಗಳು

Sep 3, 2021

1. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ(Basavanagudi Dodda Ganapathi): ಬೆಂಗಳೂರು ದಕ್ಷಿಣ ಭಾಗದ ಬಸವನಗುಡಿಯ ದೊಡ್ಡ ಗಣಪತಿ ದೇಸಸ್ಥಾನ ಇತಿಹಾಸ ಪ್ರಸಿದ್ಧ. ಇದು ಒಂದೇ ಕಲ್ಲಿನಲ್ಲಿ ಕೆತ್ತಲಾದ ಏಕಶಿಲಾ ವಿಗ್ರಹವಿದ್ದು ಸುಮಾರು 11 ಅಡಿ ಉದ್ದ ಹಾಗೂ 18 ಅಡಿ ಅಗಲವಿದೆ. ಇದನ್ನು ಕ್ರಿ.ಶ.1536ರಲ್ಲಿ ಐದು ಎಕರೆ ಜಾಗದಲ್ಲಿ ಕೆಂಪೇಗೌಡರು ನಿರ್ಮಿಸಿದ್ದು ಎನ್ನಲಾಗುತ್ತೆ. ಗಣೇಶನ ಹಬ್ಬ, ವಿಶೇಷ ದಿನಗಳಲ್ಲಿ ಇಲ್ಲಿ ಭಕ್ತ ಸಾಗರವೇ ಹರಿದು ಬರುತ್ತೆ. ಶಂಖ, ಚಕ್ರ, ಮುರಿದ ದಂತ ಮತ್ತು ಪ್ರಸಾದವನ್ನು ಹಿಡಿದುಕೊಂಡಿರುವ ಚತುರ್ಭುಜ ಗಣಪತಿ ವಿಗ್ರಹವನ್ನು ಆಕರ್ಷತವಾಗಿ ಇಲ್ಲಿ ಕೆತ್ತಲಾಗಿದೆ.

2. ಕೋರಮಂಗಲದ ಟೆಕ್ಕಿ ಗಣಪ(Koramangala Techie Ganesha): ಕೋರಮಂಗಲದ 1979 ರಲ್ಲಿ ನಿರ್ಮಿಸಲಾದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿರುವ ಬಲಮುರಿ ಗಣಪತಿಗೆ ಟೆಕ್ಕಿ ಗಣೇಶ ಎಂಬ ವಿಶೇಷ ಹೆಸರಿದೆ. ಐಟಿ-ಬಿಟಿ ಕಂಪನಿಗೆ ಇಂಟರ್ ವ್ಯೂವ್ ಹೋಗುವವರು, ಹೊಸ ಕಂಪನಿ ಆರಂಭಿಸುವವರು, ಬಡ್ತಿ, ಅಪ್ರೈಸಲ್ ಸೇರಿದಂತೆ ಉದ್ಯೋಗ ಸಮಸ್ಯೆ ಇರುವವರು ಇಲ್ಲಿ ಪೂಜೆ ಸಲ್ಲಿಸುತ್ತಾರೆ.

3. ಕಸ್ತೂರಬಾ ರಸ್ತೆಯ ವಾಹನ ಗಣಪ(Traffic Ganesha Temple) ಬೆಂಗಳೂರಿನ ಕಸ್ತೂರಬಾ ರಸ್ತೆಗೆ ಅಭಿಮುಖವಾಗಿ ವಾಹನ ಗಣಪತಿ ದೇವಸ್ಥಾನವಿದೆ. ಇಲ್ಲಿ ಹೊಸ ವಾಹನಗಳನ್ನು ಪೂಜೆ ಮಾಡಿಸಿದರೆ ಅಪಘಾತವಾಗುವುದಿಲ್ಲ ಎಂಬ ನಂಬಿಕೆ. ಈ ದೇವಸ್ಥಾನ ಸುಮಾರು 600 ವರ್ಷ ಹಳೆಯದು. ಇದು ಮೈಸೂರು ಅರಸ ವಂಶದ ಚಾಮರಾಜ ಒಡೆಯರ್ ಈ ಗಣಪತಿ ಭಕ್ತರಾಗಿದ್ದರು. ತಾವು ಖರೀದಿಸುವ ಹೊಸ ಕಾರುಗಲನ್ನು ಇಲ್ಲಿಯೇ ಪೂಜೆ ಮಾಡಿಸುತ್ತಿದ್ದರಂತೆ.

4. ಜಯನಗರದ ಪವರ್ಫುಲ್ ಗಣೇಶ(Jayanagar Powerful Ganesha) ಜಯನಗರದ 4ನೇ ಬ್ಲಾಕ್ನಲ್ಲಿರುವ ಪವರ್ಫುಲ್ ಗಣೇಶ ದೇವಸ್ಥಾನಕ್ಕೆ ಹೆಚ್ಚಾಗಿ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಭೇಟಿ ನೀಡಿ ದರ್ಶನ ಮಾಡುತ್ತಾರೆ. ಇನ್ನು ವಿಶೇಷವೆಂದರೆ ಬೆಂಗಳೂರಿನ ಇದೊಂದೇ ದೇವಸ್ಥಾನದಲ್ಲಿ ದೇವರಿಗೆ ವಜ್ರದ ಕಿರೀಟ ಮತ್ತು ಆಭರಣಗಳನ್ನು ಹಾಕುವುದನ್ನು ನಾವು ನೋಡ ಬಹುದು. ಅದೂ ಕೂಡ ಹಬ್ಬದ ದಿನಗಳಲ್ಲಿ.

5. ಮಹಾಲಕ್ಷ್ಮೀ ಲೇಜೌಟ್ನ ಪಂಚಮುಖಿ ಗಣಪ(Jayanagar Powerful Ganesha) ಮಹಾಲಕ್ಷ್ಮೀ ಲೇಜೌಟ್ನ ಕುಮಾರಸ್ವಾಮಿ ದೇಗುಲದಲ್ಲಿ ದಕ್ಷಿಣಾಭಿಮುಖವಾಗಿ ಬಲಮುರಿ ಸೊಂಡಿಲು ಹೊಂದಿರುವ ಪಂಚಮುಖಿ ಗಣಪತಿ ವಿಗ್ರಹವಿದೆ. ಗಣೇಶನ 32 ಅವತಾರಗಳ ಪೈಕಿ ಪಂಚಮುಖಿ ಅವತಾರವೂ ಒಂದಾಗಿದ್ದು ಇದು ಅತಿ ಪ್ರಭಾವಿ ಅವತಾರ ಎಂದು ಭಕ್ತರು ನಂಬುತ್ತಾರೆ.

Source:Tv9kannada