‘ಸೇವ್ ಮೈಸೂರು’ ಅಭಿಯಾನಕ್ಕೆ ದುನಿಯಾ ವಿಜಿ ಬೆಂಬಲ; ಯೋಜನೆ ಪರಾಮರ್ಶಿಸಲು ಮನವಿ

Apr 15, 2021

ಆ ಜಾಗದಲ್ಲಿ ಮರಗಳು ಇರೋದಕ್ಕೆ ಆ ಜಾಗ ಅಷ್ಟು ಸುಂದರವಾಗಿ ಕಾಣೋದು. ಆ ಜಾಗ‌ ನೋಡಿದ್ರೆ ಖುಷಿ ಆಗುತ್ತದೆ. ಈ ಯೋಜನೆಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೈಸೂರು: ನಗರದ ಲಲಿತ್ ಮಹಲ್ ಪ್ಯಾಲೆಸ್ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಹೆಲಿಪ್ಯಾಡ್​ ಯೋಜನೆ ಬಗ್ಗೆ ಈಗಾಗಲೇ ಸಾಕಷ್ಟು ವಿರೋಧ ಕೇಳಿಬಂದಿತ್ತು. ಈ ಯೋಜನೆ ಕೈಬಿಡುವಂತೆ ಅನೇಕರು ಆಗ್ರಹಿಸಿದ್ದರು. ಜತೆಗೆ ‘ಸೇವ್ ಮೈಸೂರು’ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈಗ ಮೈಸೂರಿನಲ್ಲಿ ಮರ ಕಡಿದು ಹೆಲಿ ಟೂರಿಸಂ ಮಾಡೋ ವಿಚಾರದ ಬಗ್ಗೆ ನಟ ದುನಿಯಾ ವಿಜಯ್​ ಅಸಮಾಧಾನ ಹೊರ ಹಾಕಿದ್ದು, ‘ಸೇವ್ ಮೈಸೂರು’ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ದುನಿಯಾ ವಿಜಯ್ ಪೋಸ್ಟ್ ಹಾಕಿದ್ದಾರೆ. ಹೆಲಿಟೂರಿಸಂ​ಗೆ ಮರ ಕಡಿಯೋ ವಿಚಾರ ಗಮನಕ್ಕೆ ಬಂತು. ಮರ ಬೆಳೆಸಲಾಗದಿದ್ದರೂ, ಕಡಿಯಲು ಮುಂದಾಗಬಾರದು. ಮರ ಕಡಿಯೋದನ್ನ ಬಿಟ್ಟು ಪರ್ಯಾಯ ಪ್ಲ್ಯಾನ್​ ಮಾಡಿ. ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಇದೆ. ಆದರೆ, ಮರ ಕಡಿದು ಟೂರಿಸಂ ಮಾಡೋದಕ್ಕೆ ನಮ್ಮ ವಿರೋಧ ಇದೆ ಎಂದು ಬರೆದುಕೊಂಡಿದ್ದಾರೆ.

ಆ ಜಾಗದಲ್ಲಿ ಮರಗಳು ಇರೋದಕ್ಕೆ ಆ ಜಾಗ ಅಷ್ಟು ಸುಂದರವಾಗಿ ಕಾಣೋದು. ಶೂಟಿಂಗ್ ಟೈಂನಲ್ಲಿ ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದೆ. ಆ ಜಾಗ‌ ನೋಡಿದ್ರೆ ಖುಷಿ ಆಗುತ್ತದೆ. ಈ ಯೋಜನೆಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡೋ ಸಲುವಾಗಿ ಲಲಿತಮಹಾಲ್ ಹೋಟೆಲ್ ಮುಂಭಾಗದ ಮರಗಳನ್ನ ಕಡಿಯೋ ವಿಚಾರ ಗಮನಕ್ಕೆ ಬಂತು…ನಾವುಗಳು ಮರ ಬೆಳೆಸೋಕೆ…

Posted by Duniya Vijay on Wednesday, 14 April 2021

 

ಸಾರ್ವಜನಿಕರಿಂದಲೂ ವಿರೋಧ
ಮರ ಕಡಿದು ಹೆಲಿಪ್ಯಾಡ್ ನಿರ್ಮಿಸುವ ಬಗ್ಗೆ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಜನ ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರಿನ ಅಂದವನ್ನು ಹಾಳುಗೆಡವಲು ನಾವು ಬಿಡುವುದಿಲ್ಲ. ಮರ ಕಡಿದು, ಪರಿಸರ ಹಾಳುಮಾಡಿ ಅಭಿವೃದ್ಧಿ ಮಾಡುವುದು ಬೇಕಿಲ್ಲ ಎಂದು ಕಿಡಿಕಾರಿದ್ದಾರೆ.

Source: TV9Kannada