ರಾಜ್ಯದಲ್ಲಿ ಕೋಳಿ ಸಾಕಣೆದಾರರಿಗೆ ಸಬ್ಸಿಡಿ?

Mar 23, 2021

ರಾಜ್ಯದಲ್ಲಿ ಕೋಳಿ ಸಾಕಣಿಕೆಗೆ ಸಬ್ಸಿಡಿ ನೀಡಿದಲ್ಲಿ ಸಾಕಷ್ಟು ಸಹಕಾರಿಯಾಗಲಿದೆ. ಕೋಳಿಗಳ ಆಹಾರ ಖರೀದಿ ಹಾಗೂ ವಿದ್ಯುತ್ ಗೆ ಸಬ್ಸಿಡಿ ನೀಡಬೇಕೆನ್ನುವ ಡಿಮ್ಯಾಂಡ್ ಮಾಡಲಾಗಿದೆ.

ವಿಧಾನ ಪರಿಷತ್‌ (ಮಾ.23): ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿ ಕೋಳಿ ಸಾಕಾಣಿಕೆದಾರರಿಗೆ ವಿದ್ಯುತ್‌ ಹಾಗೂ ಮೆಕ್ಕೆ ಜೋಳ ಖರೀದಿಗೆ ಸಬ್ಸಿಡಿ ನೀಡುವ ಯೋಜನೆ ಜಾರಿ ಮಾಡಬೇಕು ಎಂದು ಜೆಡಿಎಸ್‌ ಸದಸ್ಯ ಗೋವಿಂದರಾಜು ಆಗ್ರಹಿಸಿದ್ದಾರೆ.

ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಅವರು, ಹಕ್ಕಿ ಜ್ವರದಿಂದ ಪ್ರತಿ ವರ್ಷ ಲಕ್ಷಾಂತರ ಕೋಳಿ ಸಾಯುತ್ತಿವೆ. ಇದರಿಂದ ಸಾಕಣೆದಾರರಿಗೆ ಕೋಟ್ಯಂತರ ರು. ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಕೋಳಿ ಸಾಕಾಣಿಕೆದಾರರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.

ಲ್ಯಾಬ್ ಇಲ್ಲ, ಪ್ರಯೋಗವಿಲ್ಲ: ಕೋಳಿಯ ಹೊಸ ತಳಿ ಕಂಡುಹಿಡಿದ ಹಳ್ಳಿ ಹೈದ

ಆಂಧ್ರಪ್ರದೇಶದಲ್ಲಿ ಕೋಳಿ ಸಾಕಾಣಿಕೆದಾರರಿಗೆ ಪ್ರತಿ ಯೂನಿಟ್‌ ವಿದ್ಯುತ್‌ಗೆ 2 ರು. ಸಹಾಯಧನ ನೀಡಲಾಗುತ್ತಿದೆ. ತೆಲಂಗಾಣ ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಿದ ಜೋಳವನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಯೋಜನೆ ಜಾರಿ ಮಾಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರು ಮತ್ತು ಸಂಬಂಧಪಟ್ಟಸಚಿವರೊಂದಿಗೆ ಸಭೆ ನಡೆಸಿ, ಕೋಳಿ ಸಾಕಾಣಿಕೆದಾರರಿಗೆ ಪೂರಕವಾಗುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

 

Source:Suvarna News