ಮಲ್ಲೇಶ್ವರಂನಲ್ಲಿ ಪರಿಸರ ಸ್ನೇಹಿ 3,000 ಗಣೇಶ ಮೂರ್ತಿಗಳ ಹಂಚಿಕೆ

Sep 9, 2021

ಈ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ ಟ್ರಸ್ಟ್ ಅಧ್ಯಕ್ಷರಾದ ಪಾದರೇಣುರವರು ಮಾತನಾಡಿ, ಇಂದಿನ ಮಕ್ಕಳೇ ದೇಶದ ಮುಂದಿನ ಉತ್ತಮ ಪ್ರಜೆಗಳಗಬೇಕು. ತಂದೆ, ತಾಯಿ ಮತ್ತು ಗುರುಗಳಿಗೆ ಗೌರವ ತರುವ ಹಾಗೇ ಉತ್ತಮ ನಡತೆ ಬೆಳಸಿಕೊಳ್ಳಬೇಕು. ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು ಎಂದರು.

ಗಣೇಶ ಹಬ್ಬದ ಪ್ರಯುಕ್ತ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಗಾಯಿತ್ರಿನಗರ, ಸುಬ್ರಮಣ್ಯನಗರ ಮತ್ತು ಪ್ಯಾಲೇಸ್ ಗುಟ್ಟಹಳ್ಳಿ, ಅರಮನೆ ನಗರ, ಅಶ್ವಥ್ ನಗರ ಎಸ್.ಸಿ/ಎಸ್.ಟಿ ಕಾಲೋನಿ ಮಕ್ಕಳಿಗೆ 3 ಸಾವಿರ ಪರಿಸರ ಸ್ನೇಹಿ ಮತ್ತು ನೈಸರ್ಗಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Source:publictvkannada